Micro credit scheme: ಕನಿಷ್ಟ 10 ಮಹಿಳೆಯರು ಇರುವ ಸ್ವ ಸಹಾಯ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಆದಾಯ ಗಳಿಸುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ನೆರವನ್ನು ಕಲ್ಪಿಸಲಾಗುವುದು.
ಆಸಕ್ತರು ಸೇವಾಸಿಂಧು ಪೋರ್ಟಲ್ ಮೂಲಕ ಇದೇ ನವೆಂಬರ್ 29ರ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ, ಕಿರುಸಾಲ, ಸ್ವ-ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆಗಳ ಅನುಷ್ಠಾನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
2020-21 ನೇ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಾದ Zomato, Swiggy, Uber ets, Amazon ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ-2ಎ, 3ಎ ಮತ್ತು 3ಬಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ ಅಥವಾ ಅರೆಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ 25 ಸಾವಿರ ರೂ.ಗಳ ಸಹಾಯಧನ ಹಾಗೂ ಉಳಿಕೆ ಮೊತ್ತ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯುವುದು. ಈ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2020-21 ನೇ ಸಾಲಿಗೆ ಖಾದಿ ಗ್ರಾಮೋದ್ಯೋಗ ಆಯೋಗ, ಭಾರತ ಸರ್ಕಾರ ರವರು ಕೋಲಾರ ಜಿಲ್ಲೆಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿ ಉತ್ಪಾದನೆ ಮತ್ತು ಸೇವಾ ಚಟುವಟಿಕೆ ಪ್ರಾರಂಭಿಸಲು ಮತ್ತು ಸಾಲ ಪಡೆಯಲು ಪ್ರಸಕ್ತ ಸಾಲಿಗೆ ಒಟ್ಟು 75 ಭೌತಿಕ ಗುರಿ ನಿಗದಿಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.