Good News: ಮಹಿಳೆಯರ ಸ್ವಯಂ ಉದ್ಯೋಗಕ್ಕೆ 'ಮೈಕ್ರೋ ಕ್ರೆಡಿಟ್ ಯೋಜನೆ'ಯಡಿ ಸಾಲ ಸೌಲಭ್ಯ!

Micro credit scheme: ಕನಿಷ್ಟ 10 ಮಹಿಳೆಯರು ಇರುವ ಸ್ವ ಸಹಾಯ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಆದಾಯ ಗಳಿಸುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ನೆರವನ್ನು ಕಲ್ಪಿಸಲಾಗುವುದು.

Written by - Puttaraj K Alur | Last Updated : Nov 26, 2023, 08:36 AM IST
  • ಮಹಿಳೆರು ಸ್ವಯಂ ಉದ್ಯೋಗ ಕೈಗೊಳ್ಳಲು ‘ಮೈಕ್ರೋ ಕ್ರೆಡಿಟ್ ಯೋಜನೆ’ಯಡಿ ಸಾಲ ಸೌಲಭ್ಯ
  • ಮಹಿಳೆಯರಲ್ಲಿ ಗುಂಪು ಚಟುವಟಿಕೆಗೆ ಉತ್ತೇಜನ ನೀಡಿ ಆದಾಯಗಳಿಸುವ ಘಟಕ ಸ್ಥಾಪಿಸಲು ನೆರವು
  • ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ಸರ್ಕಾರದಿಂದ ನೆರವು ಸೌಲಭ್ಯ ಕಲ್ಪಿಸಲಾಗುತ್ತಿದೆ
Good News: ಮಹಿಳೆಯರ ಸ್ವಯಂ ಉದ್ಯೋಗಕ್ಕೆ 'ಮೈಕ್ರೋ ಕ್ರೆಡಿಟ್ ಯೋಜನೆ'ಯಡಿ ಸಾಲ ಸೌಲಭ್ಯ!  title=
ಮೈಕ್ರೋ ಕ್ರೆಡಿಟ್ ಯೋಜನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆರು ಸ್ವಯಂ ಉದ್ಯೋಗ ಕೈಗೊಳ್ಳಲು ‘ಮೈಕ್ರೋ ಕ್ರೆಡಿಟ್ ಯೋಜನೆ’ಯಡಿ ಸಾಲ ಸೌಲಭ್ಯ ಒದಗಿಸುತ್ತಿದೆ. ಮಹಿಳೆಯರಲ್ಲಿ ಗುಂಪು ಚಟುವಟಿಕೆಗೆ ಉತ್ತೇಜನ ನೀಡಿ ಆದಾಯಗಳಿಸುವ ಉತ್ಪಾದನಾ/ಸೇವಾ ಘಟಕಗಳನ್ನು ಆರಂಭಿಸಲು ಮಹಿಳಾ ಸ್ವಸಹಾಯ ಸಂಘದ ಮೂಲಕ ಮೈಕ್ರೋ ಕ್ರೆಡಿಟ್ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಕನಿಷ್ಟ 10 ಮಹಿಳೆಯರು ಇರುವ ಸ್ವ ಸಹಾಯ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಆದಾಯ ಗಳಿಸುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆಯನ್ನು ಹೊಂದಲು ನೆರವನ್ನು ಕಲ್ಪಿಸಲಾಗುವುದು.

ವೈಶಿಷ್ಟ್ಯಗಳು

  • ಕನಿಷ್ಟ 10 ಮಹಿಳಾ ಸದಸ್ಯರಿರುವ ಸ್ವ ಸಹಾಯ ಗುಂಪಿನ ಪ್ರತೀ ಸದಸ್ಯರಿಗೆ 25 ಸಾವಿರ ರೂ.ನಂತೆ ಒಟ್ಟು 2.50 ಲಕ್ಷ ರೂ. ಹಣವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
  • ಈ ಯೋಜನೆಯಡಿ 2.50 ಲಕ್ಷ ರೂ. ಘಟಕ ವೆಚ್ಚದ ಪೈಕಿ 1.50 ಲಕ್ಷ ರೂ. ಸಹಾಯಧನ ಮತ್ತು 1 ಲಕ್ಷ ರೂ. ಸಾಲದ ಮೊತ್ತವಾಗಿರುತ್ತದೆ.

ಇದನ್ನೂ ಓದಿ: ಎಚ್ಚರ! 19 ಅನಧಿಕೃತ ಫಾರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು ಆರ್‌ಬಿಐ ಅಲರ್ಟ್ ಪಟ್ಟಿಗೆ ಸೇರಿಸಿದೆ..

ಅರ್ಹತೆ

  • ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು.
  • ಅರ್ಜಿದಾರರು/ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
  • ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡುಬಂದಲ್ಲಿ ಸೌಲಭ್ಯವನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.
  • ಅರ್ಜಿದಾರರು/ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ನಿಯಮಗಳು

  • ಮಹಿಳಾ ಸ್ವ ಸಹಾಯ ಸಂಘವು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕು.
  • ಸ್ವ ಸಹಾಯ ಸಂಘದ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ 1.50 ಲಕ್ಷ ರೂ. ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರೂ. ಮಿತಿಯೊಳಗಿರಬೇಕು.
  • ಸ್ವ ಸಹಾಯ ಸಂಘದ ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡುಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.

ಇದನ್ನೂ ಓದಿ: ಯುಪಿಐ ತಪ್ಪು ವಹಿವಾಟು ನಡೆದಾಗ ಏನು ಮಾಡಬೇಕು? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಹಣ ವಾಪಸ್ ಪಡೆಯಿರಿ!

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

  • ಅರ್ಜಿ
  • ಭಾವಚಿತ್ರ
  • ಜಾತಿ ಪತ್ರ (RD ಸಂಖ್ಯೆ ಹೊಂದಿರಬೇಕು)
  • ಆಧಾಯ ಪತ್ರ (RD ಸಂಖ್ಯೆ ಹೊಂದಿರಬೇಕು)
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‍ಬುಕ್
  • ಸ್ವ ಸಹಾಯ ಸಂಘ ನೋಂದಣಿಯಾಗಿರುವ ಪ್ರಮಾಣ ಪತ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News