ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.
Kashi Vishwanath Temple: ಶ್ರಾವಣ ಮಾಸವನ್ನು ಶಿವನ ಮಾಸ ಎನ್ನುತ್ತಾರೆ. ಈ ದಿನಗಳಲ್ಲಿ ಕೋಟ್ಯಂತರ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಕಾಶಿ ವಿಶ್ವನಾಥನ ದರ್ಶನ ಮತ್ತಷ್ಟು ದುಬಾರಿಯಾಗಿದೆ.
ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ'ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
Kashi-Vishwanath Corridor Project: ಪ್ರಧಾನಮಂತ್ರಿಯವರ ಕನಸಿನ ಯೋಜನೆ ಎಂದು ಹೇಳಲಾದ ಈ ಕಾರಿಡಾರ್ ಅನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ₹800 ಕೋಟಿ ವೆಚ್ಚದ ಯೋಜನೆಯು ಪುರಾತನ ದೇವಾಲಯವನ್ನು ಗಂಗಾನದಿಯ ದಡಕ್ಕೆ ಸಂಪರ್ಕಿಸುತ್ತದೆ.
ಸದ್ಯಕ್ಕೆ ವಾರಣಾಸಿಗೆ ಬರದಂತೆ ವಾರಣಾಸಿ ಪೊಲೀಸ್ ಆಯುಕ್ತ ದೀಪಕ್ ಅಗರ್ವಾಲ್ ಜನರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಜನರು ಯಾವುದೇ ಅಗತ್ಯ ಕೆಲಸವಿಲ್ಲದೆ ವಾರಣಾಸಿಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಕ್ಷೇಮವಾಗಿರುವಂತೆ ಅವರು ಜನತೆಯನ್ನು ಕೋರಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಗುರುವಾರ (ಏಪ್ರಿಲ್ 8) ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ಎಎಸ್ಐ) ಅನುಮತಿ ನೀಡಿತು.ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿಯಮವನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗುವುದು ಎಂದು ತಿಳಿಸಿರುವ ಕಾಶಿ ವಿದ್ವತ್ ಪರಿಷತ್, ಕಾಶಿ ವಿಶ್ವನಾಥ ಮಂದಿರದಲ್ಲಿ ಪ್ಯಾಂಟ್, ಶರ್ಟ್ ಮತ್ತು ಜೀನ್ಸ್ ಧರಿಸಿ ದೇವಾಲಯಕ್ಕೆ ಬರುವವರು ದೂರದಿಂದಲೇ ದೇವರಿಗೆ ಪೂಜಿಸಲು ಸಾಧ್ಯವಾಗುತ್ತದೆ. ಅವರಿಗೆ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.