'ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ'-ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್

ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ'ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

Written by - Zee Kannada News Desk | Last Updated : Jun 3, 2022, 12:33 AM IST
  • ಕೆಲವು ರಾಷ್ಟ್ರೀಯವಾದಿ ಮುಸ್ಲಿಮರು ಅನೇಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಹಿಂದೂಗಳೊಂದಿಗೆ ಹೋರಾಡಿದ್ದಾರೆ ಮತ್ತು ಅವರು ನಮ್ಮ ದೇಶದ ಮುಸ್ಲಿಮರಿಗೆ ಆದರ್ಶಪ್ರಾಯರಾಗಿದ್ದಾರೆ" ಎಂದು ಭಾಗವತ್ ಹೇಳಿದರು.
  • ನಮಗೆ ಅಂತಹ ಸ್ಥಳಗಳಲ್ಲಿ ವಿಶೇಷವಾದ, ಸಾಂಕೇತಿಕ ನಂಬಿಕೆ ಇರುವುದು ನಿಜ, ಆದರೆ ಪ್ರತಿದಿನ ಹೊಸ ವಿಷಯವನ್ನು ಎತ್ತಬಾರದು. ವಿವಾದಗಳನ್ನು ಏಕೆ ಉಲ್ಬಣಗೊಳಿಸಬೇಕು ಹೇಳಿ ?
'ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ'-ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್  title=

ನವದೆಹಲಿ: ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ'ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಆರ್‌ಎಸ್‌ಎಸ್ ಈಗಾಗಲೇ ಇನ್ನು ಮುಂದೆ ಅಂತಹ ಚಳುವಳಿಗಳನ್ನು ಹಮ್ಮಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

'ಈಗ ಜ್ಞಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ಇತಿಹಾಸವನ್ನು ಯಾವತ್ತು ಬದಲಾಯಿಸಲು ಸಾಧ್ಯವಿಲ್ಲ, ಆ ಇತಿಹಾಸವನ್ನು ನಾವು ಮಾಡಿಲ್ಲ, ಅದನ್ನು ಇಂದಿನ ಹಿಂದುಗಳಾಗಲಿ ಅಥವಾ ಮುಸ್ಲಿಮರು ಕೂಡ ಮಾಡಿಲ್ಲ. ಇದು ಇಸ್ಲಾಂ ಧರ್ಮವು ಭಾರತಕ್ಕೆ ಬಂದಂತಹ ಸಂದರ್ಭದಲ್ಲಿ ನಡೆದದ್ದು.ಆಗ ಆಕ್ರಮಣಕಾರರು, ದಾಳಿಯ ಸಮಯದಲ್ಲಿ, ಸ್ವಾತಂತ್ರ್ಯವನ್ನು ಬಯಸುವ ಜನರ ಸ್ಥೈರ್ಯವನ್ನು ದುರ್ಬಲಗೊಳಿಸಲು ದೇವಾಲಯಗಳನ್ನು ನಾಶಪಡಿಸಿದರು, ಅಂತಹ ಸಾವಿರಾರು ದೇವಾಲಯಗಳಿವೆ, "ಎಂದು ಅವರು ಹೇಳಿದರು.

ಇದನ್ನೂ ಓದಿ: Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?

ಆದರೆ ಸಂಘವು ಈ ವಿಷಯದ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಭಾಗವತ್ ಹೇಳಿದರು "ನವೆಂಬರ್ 9 ರಂದು ರಾಮ ಜನ್ಮಭೂಮಿ ಚಳುವಳಿ ಇದೆ ಎಂದು ನಾವು ಹೇಳಿದ್ದೆವು, ಅದು ನಮ್ಮ ಸ್ವಭಾವಕ್ಕೆ ವಿರುದ್ಧವಾಗಿದ್ದರೂ ನಾವು ಅದರಲ್ಲಿ ಸೇರಿಕೊಂಡಿದ್ದೇವೆ. ಕೆಲವು ಐತಿಹಾಸಿಕ ಕಾರಣಗಳಿಗಾಗಿ ಮತ್ತು ಅಂದಿನ ಪರಿಸ್ಥಿತಿಯಿಂದಾಗಿ ನಾವು ಆ ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಈಗ ನಾವು ಯಾವುದೇ ಆಂದೋಲನಗಳನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದದಲ್ಲಿ ಭಾಗಿಯಾಗಿರುವ ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಒಪ್ಪಿಗೆಯೊಂದಿಗೆ ದಾರಿ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.ಆದರೆ ಪ್ರತಿ ಬಾರಿಯೂ ಇದು ಸಂಭವಿಸುವುದಿಲ್ಲ ಹಾಗಾಗೋ ಜನರು ನ್ಯಾಯಾಲಯಗಳನ್ನು ಸಂಪರ್ಕಿಸುತ್ತಾರೆ, ನ್ಯಾಯಾಂಗ ವ್ಯವಸ್ಥೆಯನ್ನು ಪವಿತ್ರ ಮತ್ತು ಸರ್ವೋಚ್ಚವೆಂದು ಪರಿಗಣಿಸಿ ನ್ಯಾಯಾಲಯದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು" ಎಂದು ಭಾಗವತ್ ಹೇಳಿದರು.

'ನಮಗೆ ಅಂತಹ ಸ್ಥಳಗಳಲ್ಲಿ ವಿಶೇಷವಾದ, ಸಾಂಕೇತಿಕ ನಂಬಿಕೆ ಇರುವುದು ನಿಜ, ಆದರೆ ಪ್ರತಿದಿನ ಹೊಸ ವಿಷಯವನ್ನು ಎತ್ತಬಾರದು. ವಿವಾದಗಳನ್ನು ಏಕೆ ಉಲ್ಬಣಗೊಳಿಸಬೇಕು ಹೇಳಿ ? ಜ್ಞಾನವಾಪಿಗೆ ಸಂಬಂಧಿಸಿದಂತೆ, ನಮಗೆ ಕೆಲವು ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಹೇಳಿ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಭಯದಿಂದ ನಡುಗುತ್ತಿರುವುದೇಕೆ?

ಮುಸ್ಲಿಮರ ಆರಾಧನಾ ಪದ್ಧತಿ ಹೊರಗಿನಿಂದ ಬಂದಿದ್ದರೂ ಕೂಡ ಅವರು ಹೊರಗಿನವರಲ್ಲ, ನಮ್ಮ ಸಂಪ್ರದಾಯವು ಒಂದೇ ಆಗಿರುತ್ತದೆ ಮತ್ತು ಕೆಲವು ರಾಷ್ಟ್ರೀಯವಾದಿ ಮುಸ್ಲಿಮರು ಅನೇಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಹಿಂದೂಗಳೊಂದಿಗೆ ಹೋರಾಡಿದ್ದಾರೆ ಮತ್ತು ಅವರು ನಮ್ಮ ದೇಶದ ಮುಸ್ಲಿಮರಿಗೆ ಆದರ್ಶಪ್ರಾಯರಾಗಿದ್ದಾರೆ" ಎಂದು ಭಾಗವತ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News