ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಮೀಕ್ಷೆ ನಡೆಸಲು ASI ಅನುಮತಿ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಗುರುವಾರ (ಏಪ್ರಿಲ್ 8) ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ಎಎಸ್‌ಐ) ಅನುಮತಿ ನೀಡಿತು.ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Last Updated : Apr 8, 2021, 05:35 PM IST
  • ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಗುರುವಾರ (ಏಪ್ರಿಲ್ 8) ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ಎಎಸ್‌ಐ) ಅನುಮತಿ ನೀಡಿತು.ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
 ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಮೀಕ್ಷೆ ನಡೆಸಲು ASI ಅನುಮತಿ  title=
Photo Courtesy: Reuters

ನವದೆಹಲಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಗುರುವಾರ (ಏಪ್ರಿಲ್ 8) ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ಎಎಸ್‌ಐ) ಅನುಮತಿ ನೀಡಿತು.ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಗರ್ಭಗುಡಿಗೆ ಪ್ರವೇಶಿಸುವ ಭಕ್ತರಿಗೆ ಡ್ರೆಸ್ ಕೋಡ್

ಜ್ಞಾನವಪಿ ಮಸೀದಿ ನಿಂತಿರುವ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಕೋರಿ ವಕೀಲ ವಿಜಯ್ ಶಂಕರ್ ರಾಸ್ತೋಗಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.ಕಾಶಿ ವಿಶ್ವನಾಥ ದೇವಾಲಯ (Kashi Vishwanath temple) ದ ಒಂದು ಭಾಗವನ್ನು ಉರುಳಿಸಿದ ನಂತರ 1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಮಸೀದಿಯನ್ನು ನಿರ್ಮಿಸಿದನೆಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾಶಿ ವಿಶ್ವನಾಥ್ ಕಾರಿಡಾರ್ ಕೆಲಸ ಮತ್ತೆ ಪ್ರಾರಂಭ

ಜ್ಞಾನವಾಪಿ ಕಾಂಪೌಂಡ್‌ನ ಸಮೀಕ್ಷೆ ಕೋರಿ ಅರ್ಜಿಯ ವಿರುದ್ಧ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿ 2020 ರ ಜನವರಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು.ನ್ಯಾಯಾಲಯದ ಆದೇಶದ ನಂತರ, ಎಎಸ್ಐ ಸಮೀಕ್ಷೆ ನಡೆಸಲು ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News