ಇದು ಹಿಂದಿ ಹೇರುವ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ, ಕೀಳರಿಮೆ ತರುಪ ಪ್ರಯತ್ನ ಬ್ರಿಟೀಷ್ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡ್ತಾ ಇದಾರೆ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಕೊನೆಗೂ ಕಾಂಗ್ರೆಸ್ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯ ಮನೆಗೆ ಮಸಾಲೆ ದೋಸೆಯನ್ನು ಪಾರ್ಸಲ್ ಕಳುಹಿಸಿ ಕೊಟ್ಟಿದ್ದಾರೆ. ಆದರೆ ದೋಸೆ ಡೆಲಿವರಿ ಬಾಯ್ ಅನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.
ಬಿಜೆಪಿಯವರು ಅಡಬಿಟ್ಟಿ ಹಣದಲ್ಲಿ ಮತ್ತು ಲಂಚದ ಹಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡ್ತಿದಾರೆ ಎಂದು ಬಿಜೆಯ ಜನಸ್ಪಂದನಾ ಸಮಾವೇಶದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಸಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಈ ನಡುವೆ ವಿಜಯ್ ಪ್ರಕಾಶ್ ಹಾಡಿಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದು, ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಈ ಸಂತೋಷ, ಸಡಗರ, ಸಂಭ್ರಮ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ಟೀಟ್ ವಾರ್ ಮುಂದುವರೆದಿದೆ. ಬಿಜೆಪಿ ʼಜನಸ್ಪಂದನʼ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್, ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆ ಟೀಕೆ ಮಾಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಬರ್ತಿದ್ದಾರೆ. 28, 29 ರಂದು ಎರಡು ದಿನ ಇಲ್ಲೇ ಇರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ?ಎಂದು ಬಿಜೆಪಿ ಕುಟುಕಿದೆ.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, "ರಮ್ಯಾ ಒಳ್ಳೆಯ ನಟಿ , ಸಂಸದೆಯಾಗಿ ಇದ್ದವರು. ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ. ತಪಾಸಣೆ ಮಾಡಲಿ ಅನ್ನುವ ನಳಪಾಡ್ ಹೇಳಿಕೆ ಸರಿಯಲ್ಲ. ಈ ರೀತಿ ಸಾರ್ವಜನಿಕ ಹೇಳಿಕೆ ಕೊಡೋದು ಸರಿಯಲ್ಲ" ಎಂದು ನಲಪಾಡ್ ಹೇಳಿಕೆಯನ್ನು ವಿರೋಧಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಿ ಎಂ ಇಬ್ರಾಹಿಂ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿ ಎಂ ಇಬ್ರಾಹಿಂ, ತಮಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕದ ಹಿನ್ನಲೆಯಲ್ಲಿ ಪಕ್ಷ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ, ಇನ್ನೊಂದೆಡೆಗೆ ಹಿಂದಿ ಪ್ರಾಂತ್ಯದ ರಾಜ್ಯಗಳಲ್ಲಿ ಪಂಜಾಬ್ ಮತ್ತು ಬಿಜೆಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.