ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?: ಬಿಜೆಪಿ

ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ?ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Jul 14, 2022, 01:30 PM IST
  • ಸಿದ್ದರಾಮೋತ್ಸವ ಕಾಂಗ್ರೆಸ್‌ ನಿರ್ನಾಮಕ್ಕೆ ಮುನ್ನುಡಿ ಬರೆಯಲಿದೆ
  • ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ?
  • ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?
ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?: ಬಿಜೆಪಿ  title=
ಸಿದ್ದರಾಮೋತ್ಸವದ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಹಿನ್ನಲೆ ಅಭಿಮಾನಿಗಳು ಆಯೋಜಿಸಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಕಾಂಗ್ರೆಸ್ ನಾಯಕರ ಬೌದ್ಧಿಕ ದಾರಿದ್ರ್ಯಕ್ಕೆ ಶೇಮ್ ಶೇಮ್ ಎಂದು ಬಿಜೆಪಿ ಗುರುವಾರ ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

‘ಸಂಸದ ಡಿ.ಕೆ.ಸುರೇಶ್ ಅವರು ಸಿದ್ದರಾಮೋತ್ಸವ ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮೋತ್ಸವ ಕಾಂಗ್ರೆಸ್‌ ನಿರ್ನಾಮಕ್ಕೆ ಮುನ್ನುಡಿ ಬರೆಯಲಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹೊರಟಿದ್ದರು. ಎಷ್ಟೇ ನಿರ್ಬಂಧ ವಿಧಿಸಿದ್ದರೂ ಲಕ್ಷ್ಮಣ ರೇಖೆ ದಾಟಿ ಹೊರ ಬಂದರು. ಈಗ ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ? ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: PSI Recruitment Scam: 'ಬೇರೆ ಪರೀಕ್ಷಾ ಕೇಂದ್ರಗಳಲ್ಲಿಯೂ ತನಿಖೆ ನಡೆಸಬೇಕು'

‘ಕಾಂಗ್ರೆಸ್ ನಾಯಕರ ಬೌದ್ಧಿಕ ದಾರಿದ್ರ್ಯಕ್ಕೆ ಶೇಮ್ ಶೇಮ್! ದೇಶದ ಸ್ವಾತಂತ್ರ್ಯಕ್ಕಾಗಲಿ, ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ?’ಎಂದು ಬಿಜೆಪಿ ಕುಟುಕಿದೆ.

ಡಿಕೆಶಿ ತನ್ನ ಮನೆಯಲ್ಲೇ ಅತಂತ್ರರಾಗುತ್ತಿದ್ದಾರೆ!

ನನಗೆ ಕಾಂಗ್ರೆಸ್ ಮತ್ತು ದೇಶದ ಉತ್ಸವ ಬೇಕು ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಜೆಪಿ, ‘ಸಿದ್ದರಾಮೋತ್ಸವಕ್ಕೆ ನನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಅತಿಥಿಯಾಗಿ ಭಾಗವಹಿಸುತ್ತೇನೆಂದು ಡಿಕೆಶಿ ಹೇಳಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಪಕ್ಷದ ಮನೆಯಲ್ಲೇ ಅತಿಥಿಯಾಗಿ ಮಾಡುವ ಯೋಜನೆಯೇ ಸಿದ್ದರಾಮೋತ್ಸವ! ಡಿಕೆಶಿಯವರೇ ನಡು ನೆತ್ತಿಯ ಮೇಲೆ ಕಡುಕತ್ತಿಯ ಪ್ರಹಾರದ ಎಚ್ಚರಿಕೆ ಇದು’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..!

‘ಪಕ್ಷ ಪೂಜೆಯ ಬಗ್ಗೆ ಡಿಕೆಶಿ ನಿಲುವು, ಇತರರಿಗೆ ಇಲ್ಲದಂತಿದೆ.  ಎಲ್ಲರಿಗೂ ವ್ಯಕ್ತಿ ಪೂಜೆಯೇ ಬೇಕು. ವ್ಯಕ್ತಿ ಪೂಜೆಯ ಪ್ರಸಾದ, ನೈವೇದ್ಯ ಎಲ್ಲವೂ ಬೇಕು. ಕೆಪಿಸಿಸಿ ಅಧ್ಯಕ್ಷರಿಗೆ ಚಿಪ್ಪು ಮಾತ್ರ! ಡಿಕೆಶಿ ಈಗ ತನ್ನ ಮನೆಯಲ್ಲೇ ಅತಂತ್ರರಾಗುತ್ತಿದ್ದಾರೆ! ಕೇಸರಿ ಶಾಲು, ಕುಂಕುಮ‌ ಇಟ್ಟುಕೊಂಡವರನ್ನು ಕಂಡರೆ ಸಿದ್ದರಾಮಯ್ಯರಿಗೆ ಭಯ. ಹಿಂದೂ ವಿರೋಧಿ ಸಿದ್ದರಾಮಯ್ಯರ ನಿಷ್ಠೆ & ನೆಂಟಸ್ಥನ ಏನಿದ್ದರೂ ಜಮೀರ್ ಅಹ್ಮದ್ ಖಾನ್ ಬಾಂಧವರ ಜೊತೆ ಮಾತ್ರ!!!’ವೆಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News