ಬೆಂಗಳೂರು : ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ಟೀಟ್ ವಾರ್ ಮುಂದುವರೆದಿದೆ. ಬಿಜೆಪಿ ʼಜನಸ್ಪಂದನʼ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್, ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆ ಟೀಕೆ ಮಾಡಿದೆ.
ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆಯಂತೆ..! ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ? ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು "ಜನಸ್ಪಂದನೆ" ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ ಎಂದು ಕಮಲಪಾಳಯದ ವಿರುದ್ಧ ಕೈ ಕಿಡಿಕಾರಿದೆ.
ಇದನ್ನೂ ಓದಿ: ʼವಿಕ್ರಾಂತ್ ರೋಣʼ ಚಿತ್ರಕ್ಕೆ ಕುಂಬ್ಳೆ ಫುಲ್ ಮಾರ್ಕ್ಸ್
ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆಯಂತೆ!
ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ?ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು "ಜನಸ್ಪಂದನೆ" ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ @BJP4Karnataka?
— Karnataka Congress (@INCKarnataka) September 8, 2022
ಇನ್ನು ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ ಸಮಾವೇಶ ʼಜನಸ್ಪಂದನ' 10 ಸೆಪ್ಟೆಂಬರ್ 2022 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಮಳೆ ಅವಾಂತರದ ನಡುವೆ ಸಮಾವೇಶ ಮಾಡಲು ಹೊರಟಿರುವ ಬಿಜೆಪಿಗರ ವಿರುದ್ಧ ವಿಪಕ್ಷಗಳು ಗುಡುಗಿವೆ.
ದ್ವೇಷ ರಾಜಕಾರಣದಿಂದ ನನ್ನ ತಂದೆಯನ್ನು ಕಳೆದುಕೊಂಡೆ ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೇಳುತ್ತಾರೆ.
ಅದೇ ರಾಹುಲ್ ಗಾಂಧಿ, ತನ್ನ ತಂದೆಯ ಕೊಲೆ ಮಾಡಿದ ಆರೋಪಿಗಳ ಬಿಡುಗಡೆಯನ್ನು ಸಂಭ್ರಮಿಸಿದ ಸ್ಟಾಲಿನ್ ಅವರಿಂದ ಭಾರತ್ ಜೋಡೋ ಯಾತ್ರೆಯ ಉದ್ಘಾಟನೆಗಾಗಿ ಧ್ವಜ ಸ್ವೀಕರಿಸುತ್ತಾರೆ.
ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನು? pic.twitter.com/zd8ps6H4pA
— BJP Karnataka (@BJP4Karnataka) September 8, 2022
ರಾಹುಲ್ ಅವರದ್ದು ಬೂಟಾಟಿಕೆಯ ಪರಮಾವಧಿ
ದ್ವೇಷ ರಾಜಕಾರಣದಿಂದ ನನ್ನ ತಂದೆಯನ್ನು ಕಳೆದುಕೊಂಡೆ ಎಂದು ʼಭಾರತ್ ಜೋಡೋʼ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ಅದೇ ರಾಹುಲ್ ಗಾಂಧಿ, ತನ್ನ ತಂದೆಯ ಕೊಲೆ ಮಾಡಿದ ಆರೋಪಿಗಳ ಬಿಡುಗಡೆಯನ್ನು ಸಂಭ್ರಮಿಸಿದ ಸ್ಟಾಲಿನ್ ಅವರಿಂದ ಭಾರತ್ ಜೋಡೋ ಯಾತ್ರೆಯ ಉದ್ಘಾಟನೆಗಾಗಿ ಧ್ವಜ ಸ್ವೀಕರಿಸುತ್ತಾರೆ. ಇದು ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.