‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !!

Kanmani Song: ಕಣ್ಮಣಿ...ಕಣ್ಮಣಿ...ಕಣ್ಮಣಿ...ಇನ್ಸ್ಟಾಗ್ರಾಮ್‌ ಓಪೆನ್‌ ಮಾಡುತ್ತಿದ್ದಂತೆಯೇ ಮೊದಲು ಕಿವಿಗೆ ಬೀಳುವ ಈ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕರಿಮಣಿ ಮಾಲಿಕ ಹಾಡು ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ ನಂತರ ಇದೀಗ ಕಣ್ಮಣಿ ಹವಾ ಶುರುವಾಗಿದೆ.

Written by - Zee Kannada News Desk | Last Updated : Jul 2, 2024, 01:00 PM IST
‘ಕರಿಮಣಿʼ ಆಯ್ತು ಈಗ ‘ಕಣ್ಮಣಿʼ ಸರತಿ: ಈ ಹಾಡು ಟ್ರೆಂಡ್‌ ಆಗಲು ಕಾರಣ ಇದೇ ನೋಡಿ !! title=

Kanmani Song: ಕಣ್ಮಣಿ...ಕಣ್ಮಣಿ...ಕಣ್ಮಣಿ...ಇನ್ಸ್ಟಾಗ್ರಾಮ್‌ ಓಪೆನ್‌ ಮಾಡುತ್ತಿದ್ದಂತೆಯೇ ಮೊದಲು ಕಿವಿಗೆ ಬೀಳುವ ಈ ಹಾಡು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಕರಿಮಣಿ ಮಾಲಿಕ ಹಾಡು ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ ನಂತರ ಇದೀಗ ಕಣ್ಮಣಿ ಹವಾ ಶುರುವಾಗಿದೆ. 1991 ರಿಲೀಸ್‌ ಆಗಿದ್ದ ಈ ಸಾಂಗ್‌ ಇತ್ತೀಚೆಗೆ ಟ್ರೆಂಡ್‌ ಆಗುತ್ತಿರುವ ಕಾರಣ ಏನು ಎಂಬುದು ನಿಮಗೆ ಗೊತ್ತಾ? ತಿಳಿಯಲು ಮುಂದೆ ಓದಿ...

"ಕಣ್ಮಣಿ ಅನ್ಬೋಡು ಕಾದಲನ್‌ ನಾನ್‌ ಎಳುದುಮ್‌ ಕಡಿದಮೇ..." ವಾರೇ ವಾ ಎಂಥಹ ಅದ್ಭುತ ಸಾಲುಗಳು ಅಲ್ವಾ? ಒಂದೇ ಸಾಲಿನಲ್ಲಿ ಬಹಳಷ್ಟು ಅರ್ಥವನ್ನು ಅಡಿಗಿಸಿ ಇಟ್ಟುಕೊಂಡಿರುವ ಈ ಹಾಡು ಉಲಗನಾಯಗನ್‌ ಕಮಾಲ್‌ ಹಾಸನ್‌ ಅಭಿನಯದ ʻಗುಣʼ ಸಿನಿಮಾದ ಹಾಡು. 

ಈ ಹಾಡು ರಿಲೀಸ್‌ ಆಗಿ ಈಗಾಗಲೇ 33 ವರ್ಷಗಳು ಕಳೆದಿವೆ. ಆದರೆ ಅದ್ಯಾಕೆ ಈ ಹಾಡು ಸಡನ್‌ ಆಗಿ ಟ್ರೆಂಡಿಂಗ್‌ ಆಗೋಕೆ ಶುರುವಾಯ್ತು ಎನ್ನುವ ಪ್ರಶ್ನೆ ನಿಮ್ಮನ್ನು ಕೂಡ ಕಾಡುತ್ತಿರಬಹುದು, ಇದಕ್ಕೆ ಉತ್ತರ ಇದೆ. 

ಇದನ್ನೂ ಓದಿ: ಮೊದಲ ಸಿನಿಮಾದಲ್ಲೆ ನಟಿ ಮಂಜುಳಾ ಫೋಟೊ ಡಷ್ಟ್‌ಬಿನ್ ಸೇರಿದ್ದೇಕೆ..? ಇದುವೇ ಬಂಗಾರದ ಪಂಜರ ಸಿನಿಮಾ ಕೈತಪ್ಪಲು ಕಾರಣವಾಯ್ತು...

ಮಲಯಾಳಂನ ಸಿನಿಮಾ ʻಮಂಜುಮ್ಮೆಲ್‌ ಬಾಯ್ಸ್‌ʼ ಸಿನಿಮಾ ಫೆಬ್ರವರಿ 22, 2024 ರಲ್ಲಿ ತೆರೆ ಕಂಡು 242 ಕೋಟಿ ಗಳಿಸುವ ಮೂಲಕ, ಇತ್ತೀಚೆಗಷ್ಟೇ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. 2006 ರಲ್ಲಿ ನಡೆದ ನೈಜ ಘಟನೆಯ ಆಧಾರಿತ ಸಿನಿಮಾ ಇದಾಗಿದ್ದು, ಕೇರಳದ ಮಂಜುಮ್ಮೆಲ್‌ ಅನ್ನೋ ಊರಲ್ಲಿ 11 ಗೆಳೆಯರ ತಂಡ ಹೇಗೆ ತಮ್ಮ ಸ್ನೇಹಿತನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವ ಕುರಿತ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ತಮ್ಮ ಬಾಲ್ಯವನ್ನು ಮೆಲುಕು ಹಾಕಿಕೊಳ್ಳುವ ಸಮಯದಲ್ಲಿ ಕಣ್ಮಣಿ ಹಾಡನ್ನು ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿ 40 ಸೆಕೆಂಡ್‌ಗಳ ಈ ಸಾಂಗ್‌ ಎಂಟ್ರಿಯಿಂದ ಮತ್ತೆ ಸದ್ದು ಮಾಡಲು ಶುರು ಮಾಡಿದೆ. 

ಇನ್ನೂ, ಈ ಹಾಡನ್ನು ಇಳಯರಾಜ ಕಂಪೋಸ್‌ ಮಾಡಿದ್ದು, ಚಿತ್ರದಲ್ಲಿ 'ಕಣ್ಮಣಿ ಅನ್ಬೋಡು' ಹಾಡನ್ನು ಬಳಸಿದ್ದಕ್ಕಾಗಿ ಮಲಯಾಳಂ ಬ್ಲಾಕ್‌ಬಸ್ಟರ್ ಚಿತ್ರ 'ಮಂಜುಮ್ಮೆಲ್ ಬಾಯ್ಸ್' ನಿರ್ಮಾಪಕರಿಗೆ ಕಾನೂನು ನೋಟಿಸ್ ಕೂಡ ಕಳುಹಿಸಿದ್ದರು. 

ಏನೇ ಹೇಳಿ ಹಾಡು ಹಳೆಯದ್ದೆ ಆದರೂ ಸೃಷ್ಟಿಸಿರುವ ಕ್ರೇಜ್‌ ಅಂತೂ ಅಷ್ಟಿಷ್ಟಲ್ಲ. ಕಾಲಿವುಡ್‌ನಲ್ಲಿ ಮಾತ್ರ ತಮ್ಮ ಹಾಡುಗಳೊಂದಿಗೆ ಹೆಸರುವಾಸಿಯಾಗಿದ್ದ ಇಳಯರಾಜ ಇದೊಂದು ಸಾಂಗ್‌ನಿಂದ ವಿಶ್ವದಾದ್ಯಂತ ಹೆಸರು ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News