ಅತಿವೃಷ್ಟಿಯಲ್ಲಿ ರಾಜ್ಯವಿರುವಾಗ ಯಾವ ಉದ್ದೇಶಕ್ಕೆ ಈ ಸಂತೋಷ, ಸಡಗರ : ಕಾಂಗ್ರೆಸ್‌ ಪ್ರಶ್ನೆ

ಬಿಜೆಪಿ ಜಸಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಈ ನಡುವೆ ವಿಜಯ್‌ ಪ್ರಕಾಶ್‌ ಹಾಡಿಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದು, ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಈ ಸಂತೋಷ, ಸಡಗರ, ಸಂಭ್ರಮ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

Written by - Krishna N K | Last Updated : Sep 10, 2022, 02:15 PM IST
  • ವಿಜಯ್‌ ಪ್ರಕಾಶ್‌ ಹಾಡಿಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಹಲವರು ಹೆಜ್ಜೆ
  • ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಈ ಸಂತೋಷ ಎಂದು ಕಾಂಗ್ರೆಸ್‌ ಕಿಡಿ
  • ʼಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಸಾಂಗ್ʼ ಗೆ ಹೆಜ್ಜೆ ಹಾಕಿದ ಬಿಜೆಪಿಗರು
ಅತಿವೃಷ್ಟಿಯಲ್ಲಿ ರಾಜ್ಯವಿರುವಾಗ ಯಾವ ಉದ್ದೇಶಕ್ಕೆ ಈ ಸಂತೋಷ, ಸಡಗರ : ಕಾಂಗ್ರೆಸ್‌ ಪ್ರಶ್ನೆ title=

ಬೆಂಗಳೂರು: ಬಿಜೆಪಿ ಜಸಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಈ ನಡುವೆ ವಿಜಯ್‌ ಪ್ರಕಾಶ್‌ ಹಾಡಿಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದು, ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಈ ಸಂತೋಷ, ಸಡಗರ, ಸಂಭ್ರಮ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ..? ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ?. ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ? ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ? 40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ? ಎಂದು ಟ್ಟೀಟ್‌ ಮೂಲಕ ಪ್ರಶ್ನಿಸಿದೆ.

ಇದನ್ನೂ ಓದಿ: ಬಿಜೆಪಿ ನಡೆಸುತ್ತಿರುವುದು 40% ʼಕಮಿಷನ್‌ ಸಮಾವೇಶʼ : ʼಕೈʼ ವಾಗ್ದಾಳಿ

ಅಲ್ಲದೆ, ರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ ನಡುವೆಯೂ ಬಿಜೆಪಿ ಮೋಜಿನ ನರ್ತನೆ ಮಾಡುತ್ತಿದೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿದ್ದಾರೆ. ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಬಿಜೆಪಿ ಸಂಭ್ರಮಾಚರಣೆಯಲ್ಲಿದೆ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಿಡಿಕಾರಿದೆ.

ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿಯ ‘ಜನಸ್ಪಂದನ’ ಸಮಾವೇಶ ನಡೆಯತ್ತಿದ್ದು, ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಈ ವೇಳೆ ವಿಜಯ್‌ ಪ್ರಕಾಶ್‌ ಹಾಡಿದ ʼಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಸಾಂಗ್ʼ ಗೆ ಎಂಟಿಬಿ ನಾಗರಾಜ, ಮುನಿರತ್ನ ಸೇರಿದಂತೆ ಇತರೆ ಸಚಿವರು, ಶಾಸಕರು ಹೆಜ್ಜೆ ಹಾಕಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News