ಫೆ. 4ರ ಬಳಿಕ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಲಿದೆ. ಸಿ.ಎಂ.ಇಬ್ರಾಹಿಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುತ್ತೆ ಎಂದು ಕೊಂಡಜ್ಜಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಂಡೂರಿಗೆ ತೆರಳೋ ಮಾರ್ಗ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಟೀ, ಮಂಡಕ್ಕಿ ಸವಿದಿದ್ದಾರೆ.. ಕುಷ್ಟಗಿಯಲ್ಲಿ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ವೇಳೆ ಸಣ್ಣ ಹೋಟೆಲ್ಗೆ ಭೇಟಿ ನೀಡಿದ್ದು, ಹೋಟೆಲ್ ಮಾಲೀಕ ನಾಗಪ್ಪ ಜತೆ ಚಹಾ ಸೇವಿಸುತ್ತಾ ಕೆಲವೊತ್ತು ಮಾತುಕತೆ ನಡೆಸಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಯಲಿದೆ.. ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಬೈಕ್ ರ್ಯಾಲಿ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಸಮ್ಮಿಶ್ರ ಸರ್ಕಾರ ಸುಳಿವು ನೀಡಿದ್ದಾರೆ. ಯಾರ್ ಒಳ್ಳೆಯ ಮೇಕಪ್ ಹಾಕೊಂಡು ಬರ್ತಾರೆ ನೋಡೋಣ ಎಂದು ಚಿಕ್ಕೋಡಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ನರಸೇಗೌಡ ತುಮಕೂರಿನಲ್ಲಿ JDSಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಚುನಾವಣೆಯಲ್ಲಿ ಅಟಿಕಾ ಬಾಬುಗೆ ಬೆಂಬಲಿಸೋದಾಗಿ ಘೋಷಣೆ ಮಾಡಿದ್ದಾರೆ. ಬಾಬುರವರನ್ನು ನಗರ ಶಾಸಕ ಮಾಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ಫೆ. 3ಕ್ಕೆ ಅರಸೀಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಅಂದು ಶಾಸಕ ಶಿವಲಿಂಗೇಗೌಡ JDS ಭವಿಷ್ಯದ ಬಗ್ಗೆ ನಿರ್ಧಾರವಾಗೋ ಸಾಧ್ಯತೆ ಇದೆ.. ಶಾಸಕ ಶಿವಲಿಂಗೇಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎನ್ನಲಾಗ್ತಿದೆ..
ಸಿದ್ದರಾಮಯ್ಯ ಕ್ಷೇತ್ರದಲ್ಲಿಂದು ಜೆಡಿಎಸ್ ಶಕ್ತಿ ಪ್ರದರ್ಶನ. ಬಾಗಲಕೋಟೆ ಜಿಲ್ಲೆಯಲ್ಲಿ JDS ಪಂಚರತ್ನ ರಥಯಾತ್ರೆ. ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JDS ಜಾಥಾ. ಗುಳೇದಗುಡ್ಡ ಪಟ್ಟಣದಲ್ಲಿ JDS ಮೆರವಣಿಗೆ ಕಾರ್ಯಕ್ರಮ. ಬಡ ನೇಕಾರ ಕುಟುಂಬ ಭೇಟಿ ಜೊತೆಗೆ ನೇಕಾರ ಮಠಕ್ಕೆ ಭೇಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.