ಎರಡು ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತೇವೆ ಎಂದು ರಾಯಚೂರಲ್ಲಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಶಾಸಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.. ಪ್ರಜೆಗಳಿಂದ, ಪ್ರಜೆಗಳಾಗಿ.. ಪ್ರಜೆಗಳಿಗೋಸ್ಕರ ಅನ್ನೋದು ಈಗ ಆದ್ರೆ ಕುಟುಂಬದಿಂದ ಕುಟುಂಬಕ್ಕಾಗಿ ಕುಟುಂಬಕ್ಕೋಸ್ಕರ ಆಗಿದೆ. ದೊಡ್ಡಗೌಡ್ರು ಆದ್ಮೇಲೆ ಚಿಕ್ಕಗೌಡ್ರು, ಅವರು ಆದ್ಮೇಲೆ ಮರಿಗೌಡ್ರು ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
Pralhad Joshi : "ರಾಹುಲ್ ಗಾಂಧಿ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಆದ ಹಾಗಿದೆ ಸತತ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ". ಎಂದು ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಹೇಳಿಕೆ ವಿರುಧ್ಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಹಲವಾರು ಟಿಕೆಟ್ ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ. . ಇದೇ ವೇಳೆ, ಮಂಗಳವಾರ ಹೇಳಿಕೆ ನೀಡಿರುವ ಮಾಜಿ ಸಿಂಎ ಬಿ ಎಸ್ ಯಡಿಯೂರಪ್ಪ, 'ನಾಲ್ಕರಿಂದ ಆರು ಬಿಜೆಪಿ ಶಾಸಕರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಕಳೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.
ಶಾಸಕನ ಮನೆಯಲ್ಲಿ 8 ಕೋಟಿ ಸಿಗುತ್ತೆ ಅಂದರೆ ದುಡ್ಡು ಎಲ್ಲಿದೆ ಎಂದು ಯೋಚನೆ ಮಾಡಿ. ನೀವು ಕಟ್ಟುವ ತೆರಿಗೆ ಹಣ ಲೂಟಿಯಾಗ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಆಮಿಷಕ್ಕೆ ಬಲಿಯಾಗಿ ಮತ ಹಾಕಬೇಡಿ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
Karnataka Assembly Election : ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಮಾಜಿ ಸಚಿವ ಎ ಮಂಜು ಜೆಡಿಎಸ್ ಅಭ್ಯರ್ಥಿಯಾಗಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಮಂಗಳವಾರ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಎ. ಮಂಜು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸೇರಿ ಎಂ ಮಂಜು ಗೆಲ್ಲಸುವ ಜವಾಬ್ದಾರಿ ನಿಮ್ಮದು. ನಾವು ಇನ್ಮುಂದೆ ಜೆಡಿಎಸ್ ಎಂದು ಹೇಳಿದ್ದಾರೆ.
ಈ ರಾಜ್ಯದಲ್ಲಿ ಮತದಾರ ದೊಡ್ಡೋನು. ಯಾರ ಪಾಳೇಗಾರಿಕೆ ಇಲ್ಲಿ ನಡೆಯಲ್ಲ ಎಂದು HD ಕುಮಾರಸ್ವಾಮಿಗೆ R.ಅಶೋಕ್ ಟಾಂಗ್ ನೀಡಿದ್ದಾರೆ. ಕುದುರೆ ಏರದೇ ಕುಮಾರಸ್ವಾಮಿ ಬಿಟ್ ಹೋದ್ರು. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಜನ ನಂಬಲ್ಲ ಎಂದಿದ್ದಾರೆ.
ಕೈ, ದಳ, ಕೇಸರಿ ಪಕ್ಷಗಳ ಅಬ್ಬರದ ನಡುವೆ ರೆಡ್ಡಿ ಶಕ್ತಿ ಪ್ರದರ್ಶನ. ಇಂದು ಹಾನಗಲ್ನಲ್ಲಿ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ. ಹಾನಗಲ್ನಲ್ಲಿ ಜನಾರ್ದನ ರೆಡ್ಡಿ ಪಕ್ಷದ ಭಾವೈಕ್ಯತಾ ಸಮಾವೇಶ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬೃಹತ್ ಯಾತ್ರೆ.
ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಕಳೆದ ಬಾರಿಯ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ರು. ಜೆಡಿಎಸ್ಗೆ ಮತ ಕೊಟ್ರೆ ಬಿಜೆಪಿಗೆ ಅವಕಾಶ ಎಂದ್ರು. ಈ ಅಪ ಪ್ರಚಾರವೇ ಬಿಜೆಪಿ 105 ಸ್ಥಾನಗಳಿಗೆ ಹೋಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
Deve Gowda: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಕಾಲು ಊತ ಜಾಸ್ತಿ ಆಗಿದ್ದ ಕಾರಣ ಜನರಲ್ ಚೆಕಪ್ಗೆ ಎಂದು ದೇವೇಗೌಡರು ಆಸ್ಪತ್ರೆಗೆ ತೆರಳಿದ್ದಾರೆ.
ಬಗೆಹರಿಯದ ಹಾಸನ ಜೆಡಿಎಸ್ ಟಿಕೆಟ್ ಗೊಂದಲ. ಟಿಕೆಟ್ಗಾಗಿ ದೇವರ ಮೊರೆ ಹೋದ ಭವಾನಿ ರೇವಣ್ಣ. ಕುಮಾರಸ್ವಾಮಿಗೆ ಭವಾನಿ ರೇವಣ್ಣ ಪರೋಕ್ಷ ಟಾಂಗ್. ಹಾಸನ ಕ್ಷೇತ್ರದ ದೊಡ್ಡಪುರದಲ್ಲಿ ಜೆಡಿಎಸ್ ಮತಬೇಟೆ. ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಭರ್ಜರಿ ಸ್ವಾಗತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.