ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ನಾಳೆ ಅಂದರೆ 13.05.2023 ರಂದು ನಡೆಯಲಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕಾ ಕಾರ್ಯವು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲೂ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಲು ಸುಸಜ್ಜಿತ ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ತಮಿಳುನಾಡಿನ ತಿರುವಣಮಲೈನ ಶ್ರೀ ಅರುಣಾಚಲೇಶ್ವರ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಸರ್ವೇಯಲ್ಲಿ ಅತಂತ್ರ ಫಲಿತಾಂಶ ಹಿನ್ನೆಲೆ ಅಂತಹ ಪರಿಸ್ಥಿತಿ ಬಂದರೆ JDS ಜೊತೆ ಬಿಜೆಪಿ ಒಪ್ಪಂದ ಸಿದ್ಧ. ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ. ಆದ್ರೆ ಇಲ್ಲಿವರೆಗೂ JDSನೊಂದಿಗೆ ಒಳ ಒಪ್ಪಂದ ಆಗಿಲ್ಲ. ನಾವು ಈಗಲೇ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಅಂತಿಮ ಫಲಿತಾಂಶದ ಮೇಲೆ ಎಲ್ಲವೂ ಡಿಪೆಂಡ್ ಆಗಿದೆ.
ಅತಂತ್ರ ಸರ್ಕಾರ ಬಂದರೆ ತಾವು ಯಾರಿಗೆ ಬೆಂಬಲ ಸೂಚಿಸಬೇಕು ಎನ್ನುವುದನ್ನು ಜೆಡಿಎಸ್ ಈಗಾಗಲೇ ನಿರ್ಧರಿಸಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಪಕ್ಷದ ಹಿರಿಯ ಮುಖಂಡರೊಬ್ಬರು ಹೊರ ಹಾಕಿದ್ದಾರೆ.
ಈ ಬಾರಿ ಅತಂತ್ರ ವಿಧಾನ ಸಭೆ ರಚನೆಯಾದರೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ. ಹೀಗಾದರು ಕೂಡಾ ಜೆಡಿಎಸ್ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಜೆಡಿಎಸ್ ಮುಂದಿರುವ ಮಾರ್ಗಗಳು ಯಾವುವು ನೋಡೋಣ.
ಬಿರುಸಿನ ಮತದಾನದ ನಡುವೆ ಕೈ ಕೊಟ್ಟ EVM. ಚಾಮರಾಜನಗರ ಮತಗಟ್ಟೆಯ ಇವಿಎಂನಲ್ಲಿ ದೋಷ. ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಘಟನೆ. ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ತಾಂತ್ರಿಕ ದೋಷ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣ. ಮತದಾರರು ಅರ್ಧ ಗಂಟೆ ಕಾದು ಕಾದು ಅಸಮಾಧಾನ. ಚಾಮರಾಜನಗರದ ಉಳಿದೆಲ್ಲೆಡೆ ಬಿರುಸಿನ ಮತದಾನ.
ಶಿಕಾರಿಪುರದಲ್ಲಿ ಮತದಾನ ಮಾಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ತಮ್ಮ ಮನೆ ದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.