ಕುಮಾರಸ್ವಾಮಿ ಹೋದಕಡೆಯಲ್ಲಾ ಜನರು ಸೇರುತ್ತಾರೆ, ಆದ್ರೆ ಅದು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಮಾತು ಈ ಚುನಾವಣೆಯಲ್ಲಿ ಬದಲಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ, 2008 ರ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಚುನಾವಣೆಗೆ ಮುನ್ನ ಪಕ್ಷ ಸಂಘಟನೆ ಮಾಡುತ್ತಿದ್ದು, ನಮ್ಮ ಪಂಚರತ್ನ ಯೋಜನೆಯ ಐದು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡುವಂತೆ ಮನವಿ ಮಾಡಿದ್ರು.
ಇಂದು ಧಾರವಾಡ ಜಿಲ್ಲೆಯಲ್ಲಿ ದಳಪತಿಗಳ ದಂಡಯಾತ್ರೆ. ಜೆಡಿಎಸ್ ಪಂಚರತ್ನ ಯಾತ್ರೆಗೆ ದಳ ಕಾರ್ಯಕರ್ತರಿಂದ ತಯಾರಿ. ನವಲಗುಂದ ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆ ರೋಡ್ ಶೋ. ಜಲಮಂಡಳಿ ಗುತ್ತಿಗೆ ನೌಕರರ ಸಮಸ್ಯೆ ಆಲಿಸಲಿರುವ ಹೆಚ್ಡಿಕೆ. ಬಳಿಕ ಮೊರಬ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ.
ಚುನಾವಣೆ ಸಮಿಪಿಸುತ್ತಿದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಷ್ಟು ದಿನ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಚುನಾವಣೆ ಪ್ರಚಾರ ಪ್ರಾರಂಭಿಸಿದ್ದು, 2023ರ ಚುನಾವಣೆಗೆ ಇದೆ ಮೊದಲ ಬಾರಿ ದಳಪತಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಪಂಚರತ್ನ ಯಾತ್ರೆ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿರೋ HDK ಬೆಳಗಾವಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಕಸರತ್ತು ನಡೆಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ...
ಬೆಳಗಾವಿ ಜಿಲ್ಲೆಯಲ್ಲಿ ಪಂಚರತ್ನ ಕಹಳೆ ಮೊಳಗುತ್ತಿದೆ.. ಖಾನಾಪುರ, ಕುಡಚಿ, ರಾಯಭಾಗ, ಬೈಲಹೊಂಗಲ ತಾಲೂಕಿನ 30-40 ಗ್ರಾಮಗಳಿಗೆ ಭೇಟಿ ನೀಡ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಪಂಚರತ್ನ ರಥಯಾತ್ರೆ ತಿಪಟೂರು ಬಿಟ್ಟು ಉಳಿದ ಕಡೆ ಯಶಸ್ವಿಯಾಗಿದೆ. ದೇವೇಗೌಡರಿಗೆ ಸಂಕಷ್ಟದಲ್ಕಿ ಕೈ ಹಿಡಿದ ತಾಲೂಕಿನ ತಿಪಟೂರು ಎಂದು ಮಾಜಿ ಪ್ರಧಾನಿಗಳ ಆರೋಗ್ಯ ಸ್ಥಿತಿ ನೆನೆದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಜಾರಿ ಮಾಡ್ತೀವಿ ಎಂದು ಕೊಂಡಜ್ಜಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು.
ಸಂಡೂರಿಗೆ ತೆರಳೋ ಮಾರ್ಗ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಟೀ, ಮಂಡಕ್ಕಿ ಸವಿದಿದ್ದಾರೆ.. ಕುಷ್ಟಗಿಯಲ್ಲಿ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ವೇಳೆ ಸಣ್ಣ ಹೋಟೆಲ್ಗೆ ಭೇಟಿ ನೀಡಿದ್ದು, ಹೋಟೆಲ್ ಮಾಲೀಕ ನಾಗಪ್ಪ ಜತೆ ಚಹಾ ಸೇವಿಸುತ್ತಾ ಕೆಲವೊತ್ತು ಮಾತುಕತೆ ನಡೆಸಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಯಲಿದೆ.. ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಬೈಕ್ ರ್ಯಾಲಿ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಾದ್ಯಂತ ಹೆಚ್.ಡಿ.ಕುಮಾರಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕವಾಗಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಜನಪರ ಸರ್ಕಾರವನ್ನು ರಚಿಸಲಿದೆ ಎಂದು ಶಾಸಕ ಹೆಚ್.ಡಿ.ರೇವಣ್ಣನವರು ತಿಳಿಸಿದರು.
ಕೂಳಿಗೆ ದಂಡವಾಗಿದೆ, ಭೂಮಿಗೆ ಭಾರವಾಗಿದೆ ಈ ಸರ್ಕಾರ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಸಿ .ಎಂ. ಇಬ್ರಾಹಿಂ ಹೇಳಿದ್ದಾರೆ. ಅಶೋಕ ನೀನು ಕೂತಿದಿಯಲ್ಲಾ ಬೆಳಗಾವಿ ಸುವರ್ಣಸೌಧ, ಆ ಸೌಧವನ್ನ ಕಟ್ಟಿಸಿದ್ದು ಈ ಹೆಚ್ಡಿ ಕುಮಾರಸ್ವಾಮಿ ಎಂದು ಗುಡುಗಿದ್ದಾರೆ.
ಕೋಲಾರದ ಕೆಜಿಎಫ್ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡಿಗರ ಪಾಲಿನ ಪುಣ್ಯದಿಂದ ಕರ್ನಾಟಕ ರಾಜ್ಯೋತ್ಸವದ ನವೆಂಬರ್ 1 ರಂದು ಜೆಡಿಎಸ್ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.