ಬೀದರ್ : ಹಾಸನ ವಿಧಾನಸಭೆಯಿಂದ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟೆಕೆಟ್ ನೀಡುವುದಾಗಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಬೀದರ್ನಲ್ಲಿ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ತಿರುಗೇಟು ಕೊಟ್ಟಿದಾರೆ. ಸಿ.ಟಿ.ರವಿ ರಾಜ್ಯದಲ್ಲಿ ಎಲ್ಲಿ ಬೇಕಾದರೂ ನಿಂತುಕೊಳ್ಳಲಿ ಬೇಕಿದ್ದರೇ ಚಿಕ್ಕಮಗಳೂರುನಿಂದಲೇ ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : “ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ”
ಚಿಕ್ಕಮಗಳೂರಿನಿಂದಲೇ ಸಿ.ಟಿ.ರವಿಗೆ ಟಿಕೆಟ್ ನೀಡುತ್ತೇವೆ. ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಈ ರೀತಿ ಲಘುವಾಗಿ ಮಾತಾಡಬಾರದು. ದೇವೇಗೌಡರ ಕುಟುಂಬದವರು ಬೇರೆ ಪಾರ್ಟಿಗೆ ಹೋಗಲು ಸಾಧ್ಯನೇ ಇಲ್ಲ. ದೇವೇಗೌಡರ ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಬಂದರೇ ಒಂದು ಕಡೆ ಕುಳಿತುಕೊಂಡು ಅವರೇ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೊರಗಡೆ ಬರುತ್ತಾರೆ ಎಂದರು.
ಸಿ.ಟಿ.ರವಿ ಹಿಟ್ ಅಂಡ್ ರನ್ ತರ ಹೋಗೋದು ಬೇಡ. ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ ಎಲ್ಲೆಲ್ಲಿ ಅನಿವಾರ್ಯ ಇದೆ ಅಲ್ಲಿ ಕುಟುಂಬದವರಿಗೆ ನಿಲ್ಲಿಸುತ್ತೇವೆಂದು, ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲ, ಇಂತಹ ಎಲ್ಲಾ ಸಮಸ್ಯೆ ನಾವು ಒಂದು ಕಡೆ ಕುಳಿತುಕೊಂಡು ಬಗೆಹರಿಸಿಕೊಳ್ಳುತ್ತೇವೆಂದು ಹೇಳಿದರು.
ಇದನ್ನೂ ಓದಿ : ರಾಯಚೂರು ಜಿಲ್ಲೆಯಲ್ಲಿ ಕಾಂತಾರ ಹೆಸರಿನಲ್ಲಿ ರೆಸ್ಟೋರೆಂಟ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.