ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಟೀಕಾಕಾರ ಖಾತೆಗಳನ್ನು ಮುಚ್ಚಿ ಹಾಕದಿದ್ದರೆ ಟ್ವಿಟರ್ ಅನ್ನು ಭಾರತದಲ್ಲಿ ನಿಷೇಧಿಸುತ್ತೇವೆ ಎಂದು ಹೇಳಿರುವ ಆರೋಪವನ್ನು ಭಾರತ ಮಂಗಳವಾರ ಅಲ್ಲಗಳೆದಿದೆ.ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಭಾರತ, ಟ್ವಿಟರ್ ಬಳಿ ಜಗತ್ತಿನ ಬೇರೆ ಯಾವುದೇ ರಾಷ್ಟ್ರಕ್ಕಿಂತ ಹೆಚ್ಚು ವಿಚಾರಗಳನ್ನು ತೆಗೆದು ಹಾಕುವಂತೆ ಸೂಚಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಅಧಿಕಾರಿಗಳು ಸೂಚಿಸಿದಂತೆ ಟ್ವಿಟರ್ ನಡೆದುಕೊಳ್ಳುತ್ತದೆ.
ಎಲೋನ್ ಮಸ್ಕ್ ಅವರ ಮಹತ್ವಾಕಾಂಕ್ಷೆಯ ಪುನರುಜ್ಜೀವನ ಯೋಜನೆಯ ಭಾಗವಾಗಿ ಸಾಮಾಜಿಕ ಮಾಧ್ಯಮ ಕಂಪನಿಯು ತನ್ನ ಶೇ 50 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಒಂದು ದಿನದ ನಂತರ ಟ್ವಿಟರ್ ಸಂಸ್ಥಾಪಕ ಜಾಕ್ ಡಾರ್ಸೆ ಇಂದು ಕಂಪನಿಯ ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಅನ್ನು ಶೀಘ್ರವಾಗಿ ವಿಸ್ತರಿಸಿದ್ದಕ್ಕಾಗಿ ವಿಷಾದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪಾಪ್ ಗಾಯಕಿ ರಿಹಾನ್ನಾ ಅವರು ಭಾರತದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯ ಬಗ್ಗೆ ಮಾಡಿದ ಟ್ವೀಟಗಳ ಬಗ್ಗೆ ಒಂದು ವಲಯ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.ಈಗ ಇಂತಹ ಟ್ವೀಟ್ ಗಳನ್ನು ಈಗ ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸೆ ಲೈಕ್ ಮಾಡಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ Twitter, ಸೆಪ್ಟೆಂಬರ್ ಮೊದಲು ಕಚೇರಿಗಳು ತೆರೆಯುವುದಿಲ್ಲ ಎಂದು ಹೇಳಿ ತನ್ನ ಎಲ್ಲ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿತ್ತು. ಆದರೆ ಇದೀಗ ಕಚೇರಿ ತೆರೆದ ನಂತರವೂ ಕೂಡ, ಯಾವುದೇ ಉದ್ಯೋಗಿ ಯಾವಾಗಲೂ ತನ್ನ ಮನೆಯಿಂದಲೇ ಕೆಲಸ ಮಾಡಲು ಬಯಸಿದರೆ, ಅವರು ಮಾಡಬಹುದು ಎಂದು ಹೇಳಿದೆ.
ವಿಶ್ವದ ಖ್ಯಾತ ಕಿರು ಸಂದೇಶ ಕಳುಹಿಸುವ ಸಾಮಾಜಿಕ ಮಾಧ್ಯಮ TWITTER CEO ಜ್ಯಾಕ್ ಡೋರ್ಸಿ ತನ್ನ ಆಹಾರ ಪದ್ಧತಿ ಕುರಿತು ಕೆಲ ಸಂಗತಿಗಳನ್ನು ಬಹಿರಂಗಪಡಿಸಿದ್ದು, ವಾರದಲ್ಲಿ ಅವರು ಎಷ್ಟು ದಿನ ಊಟ ಮಾಡುತ್ತಾರೆ ಎಂಬುದನ್ನು ಹೇಳಿದ್ದಾರೆ.
ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಹಾಗೂ ಇತರ ಕಂಪನಿಯ ಉನ್ನತ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಲು ನಿರಾಕರಿಸಿದ್ದಕ್ಕೆ ಸಂಸತ್ ಸಮಿತಿ ಮತ್ತೆ ಎಚ್ಚರಿಕೆ ರವಾನಿಸಿದ್ದು 15 ದಿನಗಳ ಒಳಗಾಗಿ ಸಮಿತಿ ಮುಂದೆ ಹಾಜರಾಗಲೇಬೇಕೆಂದು ಕಟ್ಟಪ್ಪಣೆ ವಿಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.