Farmers Protest ಗೆ ಸಂಬಂಧಿಸಿದ ಟ್ವೀಟ್ ಲೈಕ್ ಮಾಡಿದ Twitter CEO ಜ್ಯಾಕ್ ಡಾರ್ಸೆ

ಪಾಪ್ ಗಾಯಕಿ ರಿಹಾನ್ನಾ ಅವರು ಭಾರತದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯ ಬಗ್ಗೆ ಮಾಡಿದ ಟ್ವೀಟಗಳ ಬಗ್ಗೆ ಒಂದು ವಲಯ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.ಈಗ ಇಂತಹ ಟ್ವೀಟ್ ಗಳನ್ನು ಈಗ ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸೆ ಲೈಕ್ ಮಾಡಿದ್ದಾರೆ.

Last Updated : Feb 4, 2021, 07:21 PM IST
  • ಇನ್ನೊಂದೆಡೆಗೆ ರೈತ ಪ್ರತಿಭಟನೆ ಕುರಿತು ರಿಹಾನ್ನಾ ಮತ್ತು ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಮಾಡಿದ ಟ್ವೀಟ್‌ಗಳನ್ನು ದೇಶೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಸರ್ಕಾರ ಖಂಡಿಸಿದೆ.
  • ಗ್ರೇಟಾ ತಾವು ಇನ್ನೂ ರೈತರ ಜೊತೆಗೆ ನಿಂತಿದ್ದೇನೆ ಯಾವುದೇ ಬೆದರಿಕೆಗಳು ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
 Farmers Protest ಗೆ ಸಂಬಂಧಿಸಿದ ಟ್ವೀಟ್ ಲೈಕ್ ಮಾಡಿದ Twitter CEO  ಜ್ಯಾಕ್ ಡಾರ್ಸೆ title=

ನವದೆಹಲಿ: ಪಾಪ್ ಗಾಯಕಿ ರಿಹಾನ್ನಾ ಅವರು ಭಾರತದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯ ಬಗ್ಗೆ ಮಾಡಿದ ಟ್ವೀಟಗಳ ಬಗ್ಗೆ ಒಂದು ವಲಯ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.ಈಗ ಇಂತಹ ಟ್ವೀಟ್ ಗಳನ್ನು ಈಗ ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸೆ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: Farmers Protest: ತಂಡದ ಮೀಟಿಂಗ್ ನಲ್ಲಿ ರೈತರ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎಂದ ಕೊಹ್ಲಿ

ಇನ್ನೊಂದೆಡೆಗೆ ರೈತ ಪ್ರತಿಭಟನೆ ಕುರಿತು ರಿಹಾನ್ನಾ ಮತ್ತು ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಮಾಡಿದ ಟ್ವೀಟ್‌ಗಳನ್ನು ದೇಶೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಸರ್ಕಾರ ಖಂಡಿಸಿದೆ.

ವಾಷಿಂಗ್ಟನ್ ಪೋಸ್ಟ್ ಪತ್ರಕರ್ತೆ ಕರೆನ್ ಅತ್ತಯ್ಯ ಅವರು "ರಿಹಾನ್ನಾ ಸುಡಾನ್, ನೈಜೀರಿಯಾ ಮತ್ತು ಈಗ ಭಾರತ ಮತ್ತು ಮ್ಯಾನ್ಮಾರ್‌ನಲ್ಲಿ ಸಾಮಾಜಿಕ ನ್ಯಾಯ ಚಳುವಳಿಗಳಿಗಾಗಿ ಧ್ವನಿ ಎತ್ತಿದ್ದಾರೆ.ಅವರು ನಿಜವಾದವರು ಎಂದು ಟ್ವೀಟ್ ಮಾಡಿದ್ದಾರೆ.ಈ ಪೋಸ್ಟ್ ನ್ನು ಡಾರ್ಸೆ (Jack Dorsey) ಲೈಕ್ ಮಾಡಿದ್ದಾರೆ.

ಇದನ್ನೂ ಓದಿ:ಯಾರು ಈ ರಿಹಾನ್ನಾ..? ಜಗತ್ತಿನಾದ್ಯಂತ ಈಗ ಆಕೆ ಸುದ್ದಿಯಲ್ಲಿರುವುದೇಕೆ..?

ಮಿಸ್ ಅಟ್ಟಿಯಾ ಅವರ ಮತ್ತೊಂದು ಟ್ವೀಟ್‌ನಲ್ಲಿ "ಈಗ ಟ್ವಿಟ್ಟರ್ ಮತ್ತು ಜಾಕ್‌ಗೆ ಭಾರತದಲ್ಲಿ ಬೃಹತ್ # Farmersprotest‌ ಗಳಿಗೆ ಅವರು  #BlackLivesMatter ಮತ್ತು #EndSars ನಂತಹ ಐತಿಹಾಸಿಕ ಅಂತರರಾಷ್ಟ್ರೀಯ ಪ್ರತಿಭಟನೆಗಳಿಗೆ ಮಾಡಿದಂತೆ ಟ್ವಿಟರ್ ಎಮೋಜಿಯನ್ನು ಸೇರಿಸಲು ಒಳ್ಳೆಯ ಸಮಯವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆ ರಿಹಾನ್ನಾ ಮತ್ತು ಥನ್ಬರ್ಗ್ ಅವರ ಟ್ವೀಟ್ಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗತಿಕವಾಗಿ ಹೊಸ ಅಲೆಯನ್ನು ಸೃಷ್ಟಿಸಿವೆ. ಇನ್ನೊಂದೆಡೆಗೆ ಕೇಂದ್ರ ಸರ್ಕಾರದ ಸಚಿವರು ಹಾಗೂ ಸೆಲೆಬ್ರಿಟಿಗಳು ಇದಕ್ಕೆ ಪ್ರತಿಯಾಗಿ #IndiaTogether ಮತ್ತು #IndiaAgainstPropaganda ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು "ಬಾಹ್ಯ ಶಕ್ತಿಗಳಿಗೆ" ಸಾರ್ವಭೌಮತ್ವಕ್ಕೆ ಹಾನಿ ಮಾಡಲು ಅನುಮತಿಸಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆಗೆ ಸಾಗರೋತ್ತರ ಪಿತೂರಿ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಹೆಚ್ಚಿಸುವ ಪ್ರಯತ್ನ ಎಂದು ಆರೋಪಿಸಿರುವ ದೆಹಲಿ ಪೊಲೀಸರು ಇಂದು ಗ್ರೇಟಾ ಥನ್ಬರ್ಗ್ ಅವರ ಮೇಲೆ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗ್ರೇಟಾ ತಾವು ಇನ್ನೂ ರೈತರ ಜೊತೆಗೆ ನಿಂತಿದ್ದೇನೆ ಯಾವುದೇ ಬೆದರಿಕೆಗಳು ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News