IPLನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಕೊನೆಯಾಯ್ತು ಈ ಆಟಗಾರರ ವೃತ್ತಿಜೀವನ! ಕಾರಣ ಶಾಕಿಂಗ್

Cricketer who played one match in IPL: ಕೆಲವು ಆಟಗಾರರಿಗೆ ಐಪಿಎಲ್‌’ನಲ್ಲಿ ಹೆಚ್ಚು ಆಡಲು ಅವಕಾಶ ಸಿಗುತ್ತಿಲ್ಲ. ಇಂದು ನಾವು ಐಪಿಎಲ್‌’ನಲ್ಲಿ ಒಂದು ಪಂದ್ಯವನ್ನು ಆಡಿ, ಬಳಿಕ ವೃತ್ತಿಜೀವನವನ್ನು ಕೊನೆಗೊಳಿಸಿದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Apr 17, 2023, 10:13 PM IST
    • ಐಪಿಎಲ್ ಎಂದರೆ ಒಬ್ಬ ಆಟಗಾರ ರಾತ್ರೋರಾತ್ರಿ ಸ್ಟಾರ್ ಆಗುವ ವೇದಿಕೆ ಎಂದೇ ಹೇಳಬಹುದು
    • ಒಂದು ಪಂದ್ಯವನ್ನು ಆಡಿ, ಬಳಿಕ ವೃತ್ತಿಜೀವನವನ್ನು ಕೊನೆಗೊಳಿಸಿದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.
    • ಪ್ರತಿ ವರ್ಷ ಕ್ರಿಕೆಟ್ ಲೋಕದ ಅನೇಕ ದೊಡ್ಡ ತಂಡಗಳ ಅನುಭವಿ ಆಟಗಾರರು ಈ ಲೀಗ್‌’ನಲ್ಲಿ ಆಡಲು ಬರುತ್ತಾರೆ
IPLನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಕೊನೆಯಾಯ್ತು ಈ ಆಟಗಾರರ ವೃತ್ತಿಜೀವನ! ಕಾರಣ ಶಾಕಿಂಗ್ title=
IPL

Cricketer who played one match in IPL: ಐಪಿಎಲ್ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂಬ ಖ್ಯಾತಿಗೆ ಒಳಗಾಗಿದೆ. ಪ್ರತಿ ವರ್ಷ ಕ್ರಿಕೆಟ್ ಲೋಕದ ಅನೇಕ ದೊಡ್ಡ ತಂಡಗಳ ಅನುಭವಿ ಆಟಗಾರರು ಈ ಲೀಗ್‌’ನಲ್ಲಿ ಆಡಲು ಬರುತ್ತಾರೆ. ಸೀಸನ್ 16ರಲ್ಲಿಯೂ ಅನೇಕ ಅನುಭವಿ ಆಟಗಾರರು ಆಡುತ್ತಿರುವುದನ್ನು ಕಾಣಬಹುದು. ಐಪಿಎಲ್ ಎಂದರೆ ಒಬ್ಬ ಆಟಗಾರ ರಾತ್ರೋರಾತ್ರಿ ಸ್ಟಾರ್ ಆಗುವ ವೇದಿಕೆ ಎಂದೇ ಹೇಳಬಹುದು. ಇದಕ್ಕೆ ತಕ್ಕ ಉದಾಹರಣೆ, ರಿಂಕು ಸಿಂಗ್. ಆದರೆ ಕೆಲವು ಆಟಗಾರರಿಗೆ ಐಪಿಎಲ್‌’ನಲ್ಲಿ ಹೆಚ್ಚು ಆಡಲು ಅವಕಾಶ ಸಿಗುತ್ತಿಲ್ಲ. ಇಂದು ನಾವು ಐಪಿಎಲ್‌’ನಲ್ಲಿ ಒಂದು ಪಂದ್ಯವನ್ನು ಆಡಿ, ಬಳಿಕ ವೃತ್ತಿಜೀವನವನ್ನು ಕೊನೆಗೊಳಿಸಿದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ‘ಐಟಂ’ ಡ್ಯಾನ್ಸ್ ಮಾಡೋ ಆಫರ್ ಕೊಟ್ಟ ‘ದೇಶದ್ರೋಹಿ’ ನಟ!

ಮಶ್ರಫೆ ಮುರ್ತಾಜಾ:

ಮಶ್ರಫೆ ಮುರ್ತಾಜಾ ಬಾಂಗ್ಲಾದೇಶ ತಂಡದ ನಾಯಕರಾಗಿ ಸುದೀರ್ಘ ಕಾಲ ಆಟವಾಡಿದ್ದರು. ಬಾಂಗ್ಲಾದೇಶ ಕ್ರಿಕೆಟ್‌’ನಲ್ಲಿ ಇವರು ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಮಶ್ರಫೆ ಮೊರ್ತಜಾ ಐಪಿಎಲ್‌’ನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಮಶ್ರಫೆ ಮುರ್ತಾಜಾ ಅವರನ್ನು 2009ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತ್ತು. ಈ ಸಂದರ್ಭದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಆಡುವ ಅವಕಾಶವನ್ನು ಪಡೆದಿದ್ದರು. ಈ ಪಂದ್ಯ ಮುರ್ತಾಜಾ ಹಿನ್ನಡೆಯನ್ನು ಅನುಭವಿಸುವಂತೆ ಮಾಡಿತು. ತಮ್ಮ ನಾಲ್ಕು ಓವರ್‌’ಗಳಲ್ಲಿ 58 ರನ್‌’ಗಳನ್ನು ನೀಡಿದ್ದರು. ಇದುವೇ ಮುರ್ತಾಜಾಗೆ ಐಪಿಎಲ್‌’ನ ಮೊದಲ ಮತ್ತು ಕೊನೆಯ ಪಂದ್ಯ.

ಯೂನಿಸ್ ಖಾನ್:

ಪಾಕಿಸ್ತಾನದ ದಿಗ್ಗಜ ಆಟಗಾರ ಯೂನಿಸ್ ಖಾನ್ ಕೂಡ 2008ರ ಐಪಿಎಲ್‌’ನ ಭಾಗವಾಗಿದ್ದರು. ಈ ಸೀಸನ್’ನಲ್ಲಿ 11 ಪಾಕಿಸ್ತಾನಿ ಆಟಗಾರರು ಭಾಗವಹಿಸಿದ್ದರು. ಅವರಲ್ಲಿ ಒಬ್ಬರು ಯೂನಿಸ್ ಖಾನ್. ಯೂನಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿ, ಕಿಂಗ್ಸ್ XI ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ನೀಡಿತು. ಈ ಪಂದ್ಯದಲ್ಲಿ ಯೂನಿಸ್ ಖಾನ್ 7 ಎಸೆತಗಳಲ್ಲಿ 3 ರನ್ ಸಿಡಿಸಿದ್ದರು. ಇದು ಅವರ ಪ್ರಥಮ ಮತ್ತು ಅಂತಿಮ ಪಂದ್ಯವಾಗಿದೆ.

ಇದನ್ನೂ ಓದಿ: ಒಂದು ಬಾಲ್ ಕ್ಯಾಚ್ ಹಿಡಿಯೋಕೆ 4 ಮಂದಿ ಬೇಕಾ..? IPL ಮಧ್ಯೆ ನಡೆದ ಈ ವಿಚಿತ್ರ ಘಟನೆ ನೋಡಿದ್ರೆ ಶಾಕ್ ಆಗ್ತೀರ

ಅಕಿಲ ಧನಂಜಯ:

ಅಕಿಲ ದನಂಜಯ ಶ್ರೀಲಂಕಾದ ಅತ್ಯುತ್ತಮ ಸ್ಪಿನ್ನರ್‌’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಐಪಿಎಲ್‌’ನಲ್ಲಿ ಒಮ್ಮೆ ಮಾತ್ರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದ ಅಕಿಲಾ ಧನಂಜಯ್ ಈ ಪಟ್ಟಿಯಲ್ಲಿ ಸೇರಿದ್ದಾರೆ. ಈ ಶ್ರೀಲಂಕಾದ ಆಫ್ ಸ್ಪಿನ್ನರ್ 2018ರಲ್ಲಿ IPLಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯ ಧನಂಜಯ್ ಅವರ ಮೊದಲ ಮತ್ತು ಕೊನೆಯ ಪಂದ್ಯವಾಗಿತ್ತು. ಅಕಿಲಾ ಧನಂಜಯ್ 2018 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಈ ಋತುವಿನಲ್ಲಿ ಧನಂಜಯ್ ಡೆಲ್ಲಿ ವಿರುದ್ಧ ಆಡಿದ್ದರು. 4 ಓವರ್ ಬೌಲ್ ಮಾಡಿದರೂ ಸಹ ಯಶಸ್ಸು ಕಾಣಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News