ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ದಂಧೆಕೋರರ ಬಂಧನ

ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಆರೋಪಿಗಳು, ಕೂತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು‌. ಲೈವ್ ಮ್ಯಾಚ್‌ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳು ವ್ಯತ್ಯಾಸವಿದ್ದು ಇದನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದ್ದರು.  

Written by - VISHWANATH HARIHARA | Edited by - Krishna N K | Last Updated : Apr 14, 2023, 06:38 PM IST
  • ಚುನಾವಣೆ ಹೊಸ್ತಿಲಲ್ಲೂ ರಾಜ್ಯದಲ್ಲಿ ಐಪಿಎಲ್ ಫೀವರ್.
  • ಕ್ರೀಡಾಂಗಣಕ್ಕೆ ತೆರಳಿ ಮ್ಯಾಚ್ ನಡೆಯುವಾಗ ಲೈವ್ ಆಗಿ ಬೆಟ್ಟಿಂಗ್.
  • ಆರೋಪಿಗಳು ಪ್ರತಿ ಬಾಲ್‌ಗೂ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು‌‌.
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ದಂಧೆಕೋರರ ಬಂಧನ title=

ಬೆಂಗಳೂರು : ಚುನಾವಣೆ ಹೊಸ್ತಿಲಲ್ಲೂ ಸಹ ರಾಜ್ಯದಲ್ಲಿ ಐಪಿಎಲ್ ಫೀವರ್ ಇದೆ. ಕ್ರಿಕೆಟ್ ಹಬ್ಬವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆಕೋರರು ಪಂದ್ಯ ನಡೆಯುವ ಕ್ರೀಡಾಂಗಣಕ್ಕೆ ತೆರಳಿ ಮ್ಯಾಚ್ ನಡೆಯುವಾಗ ಲೈವ್ ಆಗಿ ಬೆಟ್ಟಿಂಗ್ ನಡೆಸುತ್ತಿದ್ದಾರೆ. ‌ಸದ್ಯ ಈ ರೀತಿ ದಂಧೆ‌ ನಡೆಸುತ್ತಿದ್ದ ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರಾ ಹಾಗೂ ದುಶ್ಯಂತ್ ಕುಮಾರ್ ಸೋನಿ ಬಂಧಿತರು. ದಂಧೆಯ ಹಿಂದೆ ಹಲವರ ಕೈವಾಡವಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌. ವ್ಯವಸ್ಥಿತ ಸಂಚು ರೂಪಿಸಿ ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಆರೋಪಿಗಳು, ಕೂತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು‌. ಲೈವ್ ಮ್ಯಾಚ್‌ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳು ವ್ಯತ್ಯಾಸವಿದ್ದು ಇದನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದ್ದರು.  

ಇದನ್ನೂ ಓದಿ:

ಆರೋಪಿಗಳು ಪ್ರತಿ ಬಾಲ್‌ಗೂ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು‌‌. ಇದನ್ನ ತಿಳಿಯದ ಸಾರ್ವಜನಿಕರು ಆರೋಪಿಗಳು ತೋಡಿದ್ದ ಹಳ್ಳಕ್ಕೆ ಬೀಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ಕೈಗೊಂಡ ಕಬ್ಬನ್ ಪಾರ್ಕ್ ಪೊಲೀಸರು ಕ್ರೀಡಾಂಗಣದಲ್ಲಿ 30ಕ್ಕಿಂತ ಹೆಚ್ಚು ಸಿಬ್ಬಂದಿ ನಿಯೋಜಿಸಿ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಬೆಂಗಳೂರು ಮಾತ್ರವಲ್ಲದೆ‌ ದೇಶದಲ್ಲಿ ಬೇರೆ ಕಡೆ ಐಪಿಎಲ್ ಮ್ಯಾಚ್ ಗಳು ನಡೆಯುವ ಕ್ರೀಡಾಂಗಣದಲ್ಲಿಯೂ ವ್ಯವಸ್ಥಿತ ಜಾಲದ ಮೂಲಕ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ.

 

Trending News