ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವು ಪ್ರಸ್ತುತ ತನ್ನದೇ ಆದ ಮೀನ ರಾಶಿಯಲ್ಲಿದೆ. 12 ವರ್ಷಗಳ ನಂತರ ಏಪ್ರಿಲ್ 22, 2023 ರಂದು ಮೇಷ ರಾಶಿಯಲ್ಲಿ ಸಂಕ್ರಮಿಸುತ್ತಾನೆ. ಇದಾದ ನಂತರ ಏಪ್ರಿಲ್ 27 ರಂದು ಮೇಷ ರಾಶಿಯಲ್ಲಿ ಉದಯಿಸುತ್ತಾನೆ.
Guru Asta: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆ ಎಂದರೆ ಮಾರ್ಚ್ 28ರಂದು ದೇವಗುರು ಬೃಹಸ್ಪತಿಯು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಈ ಸಮಯದಲ್ಲಿ ಗುರು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡುತ್ತಾನೆ. ಆದಾಗ್ಯೂ, ಈ ಒಂದು ತಿಂಗಳು ಐದು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Mercury-Jupiter Conjunction 2023: ಜ್ಯೋತಿಷ್ಯದಲ್ಲಿ ಬುದ್ದಿವಂತಿಕೆ ಸಂಪತ್ತುಕಾರಕ ಎಂದು ಬಣ್ಣಿಸಲ್ಪಡುವ ಬುಧನು ನಿನ್ನೆಯಷ್ಟೇ (ಮಾರ್ಚ್ 16) ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಮೊದಲೇ ಈ ರಾಶಿಯಲ್ಲಿ ಉಪಸ್ಥಿತನಿದ್ದ ದೇವಗುರು ಬೃಹಸ್ಪತಿಯೊಂದಿಗೆ ಸಂಯೋಗ ಹೊಂದಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯವನ್ನು ನೀಡುವ ಗ್ರಹವಾದ ಶುಕ್ರವು ಪ್ರಸ್ತುತ ಮೀನ ರಾಶಿಯಲ್ಲಿದೆ. ಅದೇ ಸಮಯದಲ್ಲಿ, ಅದೃಷ್ಟ, ಮದುವೆ, ಧಾರ್ಮಿಕ ಕಾರ್ಯಗಳಿಗೆ ಕಾರಣವಾದ ಗುರು ಗ್ರಹವು ಕೂಡಾ ಮೀನರಾಶಿಯಲ್ಲಿಯೇ ಇದೆ. ಈ ರೀತಿಯಾಗಿ, ಮೀನದಲ್ಲಿ ಗುರು ಮತ್ತು ಶುಕ್ರನ ಸಂಯೋಗವಿದೆ. ಮಾರ್ಚ್ 7 ರಂದು ಹೋಲಿಕಾ ದಹನದ ದಿನ ಮತ್ತು ಮಾರ್ಚ್ 8 ರಂದು ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗ ಇರುತ್ತದೆ.
Malavya-Hamsa Raja Yoga Effects: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರೇಮಿಗಳ ದಿನಾಚರಣೆಯ ಮರುದಿನ ಮೀನ ರಾಶಿಯಲ್ಲಿ ಅತ್ಯಂತ ಮಂಗಳಕರವಾದ ಮಾಲವ್ಯ ರಾಜ ಯೋಗ ಮತ್ತು ಹಂಸ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದು ಕೆಲವು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Surya Guru Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಯಲ್ಲಿ ಎರಡು ಗ್ರಹಗಳು ಭೇಟಿಯಾದಾಗ ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಎಪ್ರಿಲ್ ತಿಂಗಳಲ್ಲಿ ಗ್ರಹಗಳ ರಾಜನಾದ ಸೂರ್ಯ ಮತ್ತು ದೇವ-ದೇವತೆಗಳು ಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿಯು ಮೇಷ ರಾಶಿಯಲ್ಲಿ ಭೇಟಿಯಾಗಲಿದ್ದಾರೆ. ಈ ಸಮಯವು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.
ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿದ್ದರೆ, ಯಾವ ಕೆಲಸ ಕಾರ್ಯಗಳನ್ನು ಮಾಡಿದರೂ ಯಶಸ್ಸು ಸಿಗುತ್ತದೆ. ನವಗ್ರಹಗಳಲ್ಲಿ, ದೇವಗುರುವನ್ನು ಲಾಭದಾಯಕ ಗ್ರಹ ಎಂದು ಹೇಳಲಾಗುತ್ತದೆ. ಗುರು ಗ್ರಹವನ್ನು ವೈವಾಹಿಕ ಜೀವನ, ಅದೃಷ್ಟ, ಶಿಕ್ಷಣ, ಮಕ್ಕಳು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.