Mahira Khan And Ranbir Kapoor Leaked photos: ಮಹಿರಾ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಸಿಗರೇಟ್ ಸೇದುತ್ತಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದವು. ಯುಎಸ್ಎದಲ್ಲಿ ಕ್ಲಿಕ್ ಮಾಡಲಾದ ಫೋಟೋಗಳು ಇಂಟರ್ನೆಟ್ನಲ್ಲಿ ಕೋಲಾಹಲವನ್ನು ಸೃಷ್ಟಿಸಿದವು. ಅವರ ಸಂಬಂಧದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದವು. ಅದೇ ವರ್ಷ ದುಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮಹಿರಾ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡರು. .
ಮಹಿರಾ ಖಾನ್ ಈಗ ಆ ಫೋಟೋಗಳ ಬಗ್ಗೆ ಮೌನ ಮುರಿದಿದ್ದಾರೆ. ರಣಬೀರ್ ಅವರೊಂದಿಗಿನ ಫೋಟೋಗಳು ವೈರಲ್ ಆದ ನಂತರ ಪ್ರತಿದಿನ ಅಳುತ್ತಿದ್ದರಂತೆ. ವೃತ್ತಿಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದರಂತೆ.
ಇದನ್ನೂ ಓದಿ : ವಿಜಯ ರಾಘವೇಂದ್ರ ನಟನೆಯ FIR 6to6 ಚಿತ್ರದ ಟ್ರೈಲರ್ ಬಿಡುಗಡೆ
ಇತ್ತೀಚಿನ ಸಂದರ್ಧನಲ್ಲಿ ಮಾತನಾಡಿದ ಪಾಕಿಸ್ತಾನಿ ನಟಿ ಮಹಿರಾ ಖಾನ್, "ಇದೊಂದು ಕ್ರೇಜಿ ರೈಡ್. ನನ್ನ ಫ್ಯಾನ್ಸ್ ನನ್ನೊಂದಿಗೆ ಈ ಪ್ರಯಾಣದ ಭಾಗವಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಫೋಟೋ ಲೀಕ್ ಆದಾಗ ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಫೋಟೋ ವೈರಲ್ ಆದ ದಿನಗಳಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಮಹಿರಾ ಖಾನ್ ಹೇಳಿದ್ದಾರೆ.
ಭಾರತೀಯ ಚಾನೆಲ್ ಗಳಲ್ಲಿ ನನ್ನ ಫೋಟೋಗಳು ಸಿಕ್ಕಾಪಟ್ಟೆ ಹರಿದಾಡಿದ್ದವು. ಕೆಟ್ಟ ಟ್ವೀಟ್ ಗಳನ್ನು ನೋಡಿ ನೊಂದೆ. ಕಮೆಂಟ್ ಗಳನ್ನು ಓದಿದಾಗ ವಿಶ್ವಾಸ ಕಳೆದುಕೊಂಡೆ. ಆ ದಿನಗಳನ್ನ ಎದುರಿಸೋದು ದೊಡ್ಡ ಸವಾಲಾಗಿತ್ತು. ಮನೆ ಹಾಗೂ ಮಾಧ್ಯಮಗಳಿಂದ ಒತ್ತಡಕ್ಕೆ ಒಳಗಾಗಿ ಪ್ಯಾನಿಕ್ ಅಟ್ಯಾಕ್ ಆಗಿ ಮೂರ್ಛೆ ಹೋಗಿದ್ದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ಯಾರೂ ಸಹಾಯ ಮಾಡಲಿಲ್ಲ. ನಿದ್ದೆ ಬರುತ್ತಿರಲಿಲ್ಲ, ಕೈ ನಡುಗುತ್ತಿತ್ತು. ಜೀವನವೇ ನರಕವಾಗಿತ್ತು ಎಂದು ಮಹಿರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : BBK 11: ಚೈತ್ರಾ ಕುಂದಾಪುರರನ್ನ ಕಸದ ಬುಟ್ಟಿಗೆ ಹಾಕಿದ ಸ್ಪರ್ಧಿಗಳು; ಈ ಸೂಪರ್ ಸಂಡೆ ಹೇಗಿರಲಿದೆ..?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.