ಬೆಂಗಳೂರು : ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿದ್ದರೆ, ಯಾವ ಕೆಲಸ ಕಾರ್ಯಗಳನ್ನು ಮಾಡಿದರೂ ಯಶಸ್ಸು ಸಿಗುತ್ತದೆ. ನವಗ್ರಹಗಳಲ್ಲಿ, ದೇವಗುರುವನ್ನು ಲಾಭದಾಯಕ ಗ್ರಹ ಎಂದು ಹೇಳಲಾಗುತ್ತದೆ. ಗುರು ಗ್ರಹವನ್ನು ವೈವಾಹಿಕ ಜೀವನ, ಅದೃಷ್ಟ, ಶಿಕ್ಷಣ, ಮಕ್ಕಳು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗುರು ಗ್ರಹ ಯಾರ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿರುವುದೋ ಆ ವ್ಯಕ್ತಿ ಜೀವನದಲ್ಲಿ ಸಕಲ ಸಂಪತ್ತು ಮತ್ತು ಯಶಸ್ಸು ಗಳಿಸುತ್ತಾನೆ ಎನ್ನುವುದು ನಂಬಿಕೆ.
ಏಪ್ರಿಲ್ 22, 2023 ರಂದು ಗುರುವು ಮೇಷ ರಾಶಿಗೆ ಪ್ರವೇಶ ಮಾಡುವುದರೊಂದಿಗೆ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಈ ರಾಜಯೋಗದ ಪರಿಣಾಮ ಕೆಲವು ರಾಶಿಯವರ ಮೇಲೆ ಅದ್ಭುತವಾಗಿರಲಿದೆ.
ಮಿಥುನ ರಾಶಿ : ಗುರು ಸಂಕ್ರಮಣದಿಂದ ರೂಪುಗೊಂಡ ಗಜಲಕ್ಷ್ಮಿ ರಾಜಯೋಗ ಮಿಥುನ ರಾಶಿಯವರಿಗೆ ಸಂಪತ್ತು ಮತ್ತು ಸಂತೋಷವನ್ನು ಕರುಣಿಸುತ್ತದೆ. ಎಲ್ಲಾ ಕಾರ್ಯಗಳಲ್ಲಿ ಅದೃಷ್ಟ ಕೈ ಹಿಡಿಯುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗಲಿದೆ.
ಮೇಷ ರಾಶಿ : ಮೇಷ ರಾಶಿಯವರ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಈ ರಾಶಿಯವರಿಗೆ ಜೀವನದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಈ ರಾಶಿಯವರ ಆದಾಯ ಹೆಚ್ಚಾಗುವುದು.
ಧನು ರಾಶಿ : ಗಜಲಕ್ಷ್ಮಿ ರಾಜಯೋಗದಿಂದಾಗಿ ಧನು ರಾಶಿಯವರಿಗೆ ಹಠಾತ್ ಧನಲಾಭವಾಗುವುದು. ವಿಶೇಷವಾಗಿ ವ್ಯವಹಾರದಲ್ಲಿ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಬಹುದು. ಆರ್ಥಿಕವಾಗಿ ಭಾರೀ ಲಾಭವಾಗುವುದು. (Disclaimer: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)