12 ವರ್ಷಗಳ ನಂತರ ಹೋಳಿ ವೇಳೆ ಗ್ರಹಗಳ ಮಹಾ ಸಂಯೋಗ! ಈ ರಾಶಿಯವರಿಗೆ ಸಿಗುವುದು ಭಾರೀ ಯಶಸ್ಸು

ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯವನ್ನು ನೀಡುವ ಗ್ರಹವಾದ ಶುಕ್ರವು ಪ್ರಸ್ತುತ ಮೀನ ರಾಶಿಯಲ್ಲಿದೆ. ಅದೇ ಸಮಯದಲ್ಲಿ, ಅದೃಷ್ಟ, ಮದುವೆ, ಧಾರ್ಮಿಕ ಕಾರ್ಯಗಳಿಗೆ ಕಾರಣವಾದ ಗುರು ಗ್ರಹವು ಕೂಡಾ ಮೀನರಾಶಿಯಲ್ಲಿಯೇ ಇದೆ. ಈ ರೀತಿಯಾಗಿ, ಮೀನದಲ್ಲಿ ಗುರು ಮತ್ತು ಶುಕ್ರನ ಸಂಯೋಗವಿದೆ. ಮಾರ್ಚ್ 7 ರಂದು ಹೋಲಿಕಾ ದಹನದ ದಿನ ಮತ್ತು ಮಾರ್ಚ್ 8 ರಂದು ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗ ಇರುತ್ತದೆ. 

ಬೆಂಗಳೂರು : ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯವನ್ನು ನೀಡುವ ಗ್ರಹವಾದ ಶುಕ್ರವು ಪ್ರಸ್ತುತ ಮೀನ ರಾಶಿಯಲ್ಲಿದೆ. ಅದೇ ಸಮಯದಲ್ಲಿ, ಅದೃಷ್ಟ, ಮದುವೆ, ಧಾರ್ಮಿಕ ಕಾರ್ಯಗಳಿಗೆ ಕಾರಣವಾದ ಗುರು ಗ್ರಹವು ಕೂಡಾ ಮೀನರಾಶಿಯಲ್ಲಿಯೇ ಇದೆ. ಈ ರೀತಿಯಾಗಿ, ಮೀನದಲ್ಲಿ ಗುರು ಮತ್ತು ಶುಕ್ರನ ಸಂಯೋಗವಿದೆ. ಮಾರ್ಚ್ 7 ರಂದು ಹೋಲಿಕಾ ದಹನದ ದಿನ ಮತ್ತು ಮಾರ್ಚ್ 8 ರಂದು ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರನ ಸಂಯೋಗ ಇರುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

12 ವರ್ಷಗಳ ನಂತರ 2 ಶುಭ ಗ್ರಹಗಳಾದ ಗುರು ಮತ್ತು ಶುಕ್ರರು ಹೋಳಿ ದಿನದಂದು ಮೀನ ರಾಶಿಯಲ್ಲಿಯೇ ಇರುವ ಕಾರಣ ಶುಭ ಸಂಯೋಗ ಏರ್ಪಡುತ್ತದೆ. ಹೀಗಾಗಿ ಕೆಲವು ರಾಶಿಯವರ ಮೇಲೆ ದೇವಾನು ದೇವತೆಗಳ ಅಪಾರ ಅನುಗ್ರಹ ಇರುತ್ತದೆ. ಹೋಳಿ ವೇಳೆ ಗುರು-ಶುಕ್ರ ಸಂಯೋಗವು ಯಾವ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತಾರೆ ನೋಡೋಣ.

2 /4

ಈ ಹೋಳಿಯು ಮೇಷ ರಾಶಿಯವರಿಗೆ  ಭಾರೀ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಕ್ಕಿ ವೇತನ ಹೆಚ್ಚಾಗಬಹುದು. ಅದೇ ಸಮಯದಲ್ಲಿ, ವ್ಯವಹಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭವಾಗುವುದು. ಸಿಕ್ಕಿಹಾಕಿಕೊಂಡಿರುವ ಹಣ ಮತ್ತೆ ಕೈ ಸೇರುತ್ತದೆ. 

3 /4

ಶುಕ್ರ ಮತ್ತು ಗುರು ಗ್ರಹಗಳ ಸಂಯೋಗವು ವೃಷಭ ರಾಶಿಯವರಿಗೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯವರ ಒಳ್ಳೆಯ ದಿನಗಳು ಹೋಳಿಯಿಂದ ಪ್ರಾರಂಭವಾಗುತ್ತವೆ.   ಆದಾಯದಲ್ಲಿ ಬಲವಾದ ಹೆಚ್ಚಳವಾಗಬಹುದು. ಉನ್ನತ ಸ್ಥಾನಕ್ಕೆ ಏರಿ  ಗೌರವ ಪ್ರಾಪ್ತಿಯಾಗುತ್ತದೆ. ಕೆಲವರಿಗೆ ಹೊಸ ಕೆಲಸಕ್ಕೆ ಸೇರುವ ಅವಕಾಶ ಸಿಗಬಹುದು. 

4 /4

ವೃಶ್ಚಿಕ ರಾಶಿಯವರಿಗೆ ಹೋಳಿಯು ಸುವರ್ಣ ದಿನಗಳನ್ನು ತರುತ್ತಿದೆ. ಈ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಎರಡೂ ಹೆಚ್ಚಾಗುತ್ತದೆ. ಹೊಸ ಮನೆ-ಕಾರು ಖರೀದಿಸಬಹುದು. ಆದಾಯ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ಮಕ್ಕಳಿಂದ ಕೆಲವು ಶುಭ ಸಮಾಚಾರ ಸಿಗಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)