UP SHOCKING NEWS: ಮದುವೆಗೆ ಒಪ್ಪದ ಯುವಕನ ಖಾಸಗಿ ಅಂಗವನ್ನೇ ಗೆಳತಿಯೊಬ್ಬಳು ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ಬೇರೊಬ್ಬ ಯುವತಿಯನ್ನು ಮದುವೆಯಾಗಲು ಆಕೆಯ ಪ್ರಿಯಕರ ಸಿದ್ಧವಾಗಿದ್ದ. ಆತನನ್ನು ಕೊನೆಯ ಬಾರಿಗೆ ನೋಡಲು ಕರೆಸಿಕೊಂಡು ಆತನ ಖಾಸಗಿ ಅಂಗವನ್ನೇ ಯುವತಿ ಚಾಕುವಿನಿಂದ ಕತ್ತರಿಸಿದ್ದಾಳೆ.
ಈ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಈ ಜೋಡಿ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಯುವಕ ಬೇರೆ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ಈ ವಿಷಯ ಆತನ ಗೆಳತಿಗೆ ತಿಳಿದಿದೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಆಕೆ ನಿರ್ಧರಿಸಿದ್ದಾಳೆ. ಇದೇ ವೇಳೆ ಆಕೆ ತನ್ನ ಪ್ರಿಯಕರನನ್ನು ಕೊನೆಯ ಬಾರಿಗೆ ಭೇಟಿಯಾಗಲು ಕರೆದಿದ್ದಾಳಂತೆ.
ಇದನ್ನೂ ಓದಿ: Pushpa 2 ಸಿನಿಮಾ ನೋಡಲು ಆಗಲಿಲ್ಲ ಅಂತ 3ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ..!
मुज़फ्फरनगर : प्रेमिका ने प्रेमी का काटा गुप्तांग
➡प्रेमी द्वारा प्यार में धोखा मिलने से काटा गुप्तांग
➡प्रेमिका ने मिलने के बहाने बुलाकर गुप्तांग काटा
➡8 साल से चल रहा था दोनों के बीच अफेयर
➡प्रेमी की शादी दूसरी लड़की से तय होने से थी नाराज
➡पुलिस ने प्रेमी को जिला… pic.twitter.com/OIQydCiPa0— भारत समाचार | Bharat Samachar (@bstvlive) December 22, 2024
ಏಕಾಂತ ಪ್ರದೇಶದಲ್ಲಿ ಭೇಟಿಯಾದ ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನಲೆ ಯುವತಿ ತಾನು ತಂದಿದ್ದ ಚಾಕುವಿನಿಂದ ಯುವಕನ ಖಾಸಗಿ ಅಂಗವನ್ನು ಕತ್ತರಿಸಿ ಹಾಕಿದ್ದಾಳೆ. ಬಳಿಕ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮತ್ತೊಂದೆಡೆ ಆ ವ್ಯಕ್ತಿ ತನ್ನ ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದರೂ ಗೆಳತಿಯ ಕೈ ಗಾಯಕ್ಕೆ ಬಟ್ಟೆ ತೊಡಿಸಿ ಆಕೆಯ ಪ್ರಾಣ ಉಳಿಸಿದ್ದಾನೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.