ಸೂಕ್ತ ಪರವಾನಗಿ ಪಡೆದುಕೊಂಡೇ ಆಯೋಜಕರು ಸಮಾವೇಶ ನಡೆಸುತ್ತಿದ್ದಾರೆ. ಕಪ್ಪು ಬಣ್ಣದ ಕೊಡೆಗಳನ್ನು ಹಿಡಿದುಕೊಂಡು ನಡೆಯುವುದು ರ್ಯಾಲಿ ವಿಶೇಷ - ಕೊಡೆಗಳ ಮೇಲೆಲ್ಲಾ ವಿವಿಧ ಬಗೆಯ ಖಂಡನಾ ಹೇಳಿಕೆಗಳ ಚಿತ್ರಣ - ಕರ್ನಾಟಕ ಚಿತ್ರಕಲಾ ಪರಿಷತ್ ವಿದ್ಯಾರ್ಥಿಗಳಿಂದ ಕೊಡೆಗಳ ಮೇಲೆ ಬರಹ - ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದು ಬರೆದಿರುವ ಕೊಡೆಗಳು - ವಿಭಿನ್ನ ಬಗೆಯ ಬರಹಗಳನ್ನು ಕೊಡೆಗಳ ಮೇಲೆ ಚಿತ್ರಿಸಿರುವ ವಿದ್ಯಾರ್ಥಿಗಳು - ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಪ್ರತಿರೋಧಿಸಿ ಬರೆದಿರುವ ಬರಹಗಳು - ಬರಹಗಳುಳ್ಳ ಕಪ್ಪು ಕೊಡೆ ಹಿಡಿದು ಸಾಗುವ ಪ್ರಗತಿಪರರು ಹಾಗೂ ಚಿಂತಕರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಮಾಡಿರುವ ಆರೋಪದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹತ್ಯೆಯ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ಕಾಂಗ್ರೇಸ್ ಸರ್ಕಾರ ಗೌರಿ ಲಂಕೇಶ್ಗೆ ಏಕೆ ಭದ್ರತೆ ನೀಡಲಿಲ್ಲ ಎಂದು ಕೇಳಿದ್ದಾರೆ.
ಈ ಹಿಂದೆ ಮಹಾರಾಷ್ಟದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಗೂ, ಗೌರಿ ಲಂಕೇಶ್ ಅವರ ಹತ್ಯೆಗೂ ಸಾಮ್ಯತೆ ಇರುವ ಬಗ್ಗೆ ಈಗಲೇ ಸ್ಪಷ್ಟತೆ ನೀಡುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿರುವುದು ಒಬ್ಬ ಆಗಂತುಕ ಮಾತ್ರ, ಗೌರಿ ಲಂಕೇಶ್ ಗೇಟ್ ತೆಗೆಯುತ್ತಿದ್ದಂತೆ ಗುಂಡು ಹಾರಿಸಿದ ಕಿಡಿಗೇಡಿ ತಪ್ಪಿಸಿಕೊಳ್ಳಲು ಮನೆ ಒಳಗೆ ಓದಲು ಪ್ರಯತ್ನಿಸಿದ್ದಾನೆ ಹಾಗೂ ಗೌರಿ ಲಂಕೇಶ್ ಕುಸಿದು ಬೀಳುತ್ತಿದ್ದ ಹಾಗೆ ಹತ್ತಿರಕ್ಕೆ ಬಂದು ಗೌರಿಯ ಎದೆಗೆ ದುಷ್ಕರ್ಮಿ ಗುಂಡಿಕ್ಕಿ ಕೊಳ್ಳುತ್ತಿರುವ ಇಷ್ಟೂ ದೃಶ್ಯಗಳು ಗೌರಿ ಲಂಕೇಶ್ ಮನೆಯ ಸಿಸಿಟಿವಿಯಲ್ಲಿ ಎಂದು ತನಿಖಾ ತಂಡ ತಿಳಿಸಿದೆ.
ಗೌರಿ ಲಂಕೇಶ್ ಓರ್ವ ಭಯವಿಲ್ಲದ, ದಿಟ್ಟ ಪತ್ರಕರ್ತೆ ಎಂದು ಹಿರಿಯ ಪತ್ರಕರ್ತ ಮತ್ತು ಇಂಟಿಗ್ರೇಟೆಡ್ ಮಲ್ಟಿಮೀಡಿಯಾ ನ್ಯೂಸ್ ರೂಮ್ ಮತ್ತು ಜೀ ಮೀಡಿಯಾ ಕಾರ್ಪೊರೇಶನ್ ಲಿಮಿಟೆಡ್ ಸಂಪಾದಕ ಸಂಜಯ್ ಬ್ರಗ್ತಾ ಸ್ಮರಿಸಿದ್ದಾರೆ.
ಗೌರಿ ಲಂಕೇಶ್ ಪತ್ರಕರ್ತೆ ಜೊತೆಗೆ ವಿಚಾರವಾದಿ, ಸಾಹಿತಿಯೂ ಆಗಿದ್ದರು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರಿಸಿದ್ದವರು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದತ್ತಿದ್ದ ದಿಟ್ಟ ಮಹಿಳೆ - ಸಿಎಂ.
ಹಿರಿಯ ಪತ್ರಕರ್ತ ಹಾಗೂ ಲಂಕೇಶ್ ಪತ್ರಿಕೆಯ ರೂವಾರಿಯಾಗಿದ್ದ ಪಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ರನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ 08:07 ರ ಸಮಯದಲ್ಲಿ ಗುಂಡು ಹಾರಿಸಿ ಕೊಲೆಗೈದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.