ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್

ಹಿರಿಯ ಪತ್ರಕರ್ತ ಹಾಗೂ ಲಂಕೇಶ್ ಪತ್ರಿಕೆಯ ರೂವಾರಿಯಾಗಿದ್ದ ಪಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ರನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ 08:07 ರ ಸಮಯದಲ್ಲಿ ಗುಂಡು ಹಾರಿಸಿ ಕೊಲೆಗೈದಿದ್ದಾರೆ.

Last Updated : Sep 6, 2017, 09:38 AM IST
ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್  title=
Pic Courtesy : Twitter

ಬೆಂಗಳೂರು: ಲಂಕೇಶ್ ಪತ್ರಿಕೆಯ ಸಂಪಾದಕಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ 08:07ರ ಸುಮಾರಿಗೆ ಗುಂಡಿಕ್ಕಿ ಕೊಂಡಿದ್ದಾರೆ. ಸುಮಾರು 7 ಬಾರಿ ಗುಂಡಿಕ್ಕಿ ಕೊಂಡಿರುವ ಕಿಡಿಗೇಡಿಗಳು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ನಿನ್ನೆ ಸಂಜೆ 6 ಗಂಟೆಗೆ ಗಾಂಧಿ ನಗರದ ತಮ್ಮ ಕಚೇರಿಯಿಂದ ಹೋರಾಟ ಗೌರಿ ಲಂಕೇಶ್ 8 ಗಂಟೆಗೆ ರಾಜ ರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ತಲುಪಿದ್ದಾರೆ. ಗೌರಿ ಕಾರಿನಿಂದ ಇಳಿದು ಗೇಟ್ ಬೀಗ ತೆಗೆದು ಒಳನಡೆಯುವ ಸಮಯದಲ್ಲಿ ದುಷ್ಕರ್ಮಿಗಳು ಹತ್ತಿರದಿಂದ 7 ಬಾರಿ ಗುಂಡು ಹಾರಿಸಿದ್ದಾರೆ.

ಕರ್ನಾಟಕ ಪೋಲೀಸ್ ಅಧಿಕಾರಿಗಳು ಕೃತ್ಯದ ತನಿಖೆ ನಡೆಸುತ್ತಿದ್ದು, ಪ್ರಕರಣದ ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ತಿಳಿಸಿದ್ದಾರೆ. ಯಾರೋ ಬೇಕಂತಲೇ ಮೊದಲೇ ಪ್ಲಾನ್ ಮಾಡಿ ಕೃತ್ಯ ನಡೆಸಿರುವ ಶಂಕೆಯನ್ನು ಪೋಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಬೆಂಗಳೂರಿನ ಪೊಲೀಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಅವರು, "ಗೌರಿ ರಕ್ತದ ಕೊಳದಲ್ಲಿ ಮಲಗಿರುವುದನ್ನು ನಾವು ಕಂಡುಕೊಂಡಿದ್ದೇವೆ, ಅಪರಾಧದ ದೃಶ್ಯದಿಂದ ನಾಲ್ಕು ಖಾಲಿ ಕಾರ್ಟ್ರಿಜಸ್ಗಳನ್ನು ಕಂಡುಕೊಂಡಿದ್ದೇವೆ, ನಾಲ್ಕಲ್ಲರಲ್ಲಿ, ಎಷ್ಟು ಮಂದಿ ದೇಹಕ್ಕೆ ಪ್ರವೇಶಿಸಿದರು, ಕೇವಲ ಮರಣೋತ್ತರ ವರದಿ ಬಂದ ಬಳಿಕ ಮಾತ್ರ ತಿಳಿಸಲು ಸಾಧ್ಯ ಎಂದು ತಿಳಿಸಿದ್ದಾರೆ".

ಎರಡು ವರ್ಷಗಳ ಹಿಂದೆ ಎಂ.ಎಂ.ಕಲಬುರ್ಗಿ ಅವರನ್ನು ಸಹ ಇದೇ ರೀತಿ ಗುಂಡಿಕ್ಕಿ ಕೊಲ್ಲಲಾಗಿತ್ತು. 

ತಿಂಗಳ ಹಿಂದೆ ಬೆದರಿಕೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ದ ಗೌರಿ :

ಬೆದರಿಕೆ ಕರೆಯ ಬಗ್ಗೆ ಆಪ್ತರ ಬಳಿ ಹೇಳಿಕೊಂಡು ನಂಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ ಅಂತಾ ಹೇಳ್ತಾನೆ ಇದ್ದಾರೆ ಅಂತಾ ಬೆದರಿಕೆ ಕರೆ ಬಗ್ಗೆ ಗೌರಿ ಲಂಕೇಶ್ ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದರು ಎನ್ನಲಾಗುತ್ತಿದೆ. 

ಗೌರಿ ಲಂಕೇಶ್ ಅವರ ಸ್ನೇಹಿತೆ ಬಿ.ಟಿ. ಲಲಿತಾ ನಾಯ್ಕ್ ಜೊತೆ ಕರೆಯ ಬಗ್ಗೆ ಗೌರಿ ಹೇಳಿಕೊಂಡಿದ್ದರಂತೆ. ಇದರ  ಜೊತೆಗೆ ಈ ಹಿಂದೆ ಬಿ.ಟಿ. ಲಲಿತ ನಾಯ್ಕ್ ಗೆ ನಿಮಗೆ ಜೀವ ಬೆದರಿಕೆ ಕರೆ ಬಂದ ಮೇಲೆ ಕಂಪ್ಲೇಂಟ್ ಕೊಟ್ಟಿದ್ದರ ಎಂದೂ ಸಹ ಗೌರಿ ವಿಚಾರಿಸಿಕೊಂಡಿದ್ದರಂತೆ, ದೂರು ಕೊಟ್ಟರೂ  ಏನು ಪ್ರಯೋಜನ ಆಗಿಲ್ಲ  ಎಂದು ಲಲಿತ ನಾಯಕ್ ಪ್ರತಿಕ್ರಿಯಿಸಿದಾಗ, ಗೌರಿ ಪೊಲೀಸ್ ವ್ಯವಸ್ಥೆ ಅಷ್ಟೇ ಬಿಡಿ ಎಂದು ಸುಮ್ಮನಾಗಿದ್ದರೆಂದು ಪ್ರಾಥಮಿಕ ವರಿದಿಗಳಿಂದ ತಿಳಿದು ಬಂದಿದೆ. 

ಸಾವಿನ ಸಂಚಿನ ಒಂದು ತಿಂಗಳ ಹಿಂದೆ ಬಂದಿದ್ದ ಬೆದರಿಕೆ ಕರೆಯ ಬಗ್ಗೆ ಸಿರಿಯೇಸ್ ಆಗಿ ತೆಗೆದುಕೊಂಡಿರಲಿಲ್ಲ ಎಂದು ಅನಿಸುತ್ತದೆ. 

ರಾತ್ರಿ ಮಹಜರ್  ನಡೆಸಿದ ಬಳಿಕ ಗೌರಿ ಲಂಕೇಶ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮೃತ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.

ಹತ್ಯೆ ಖಂಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಪ್ರತಿಭಟನೆ: 

ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಕೊಲೆಗಡುಕರನ್ನು ಕೂಡಲೆ ಬಂದಿಸುವಂತೆ ಮಂಡ್ಯದ ಜನಪರ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಇಂದು 10:20 ಗಂಟೆಗೆ ಮಂಡ್ಯದ ಸಂಜಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರಗತಿಪರರು, ಪತ್ರಕರ್ತರು, ಪ್ರಜಾತಂತ್ರವಾದಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಇಂದು ಬೆಳಿಗ್ಗೆ 11:30 ಗಂಟೆಗೆ ಎಸ್ ಡಿ ಪಿ ಐ ವತಿಯಿಂದ ಮಡಿಕೇರಿಯ ಚೌಕಿ ಬಳಿ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ. 

Trending News