One Vehicle One FASTag: ಸೋಮವಾರದಿಂದ (ಏಪ್ರಿಲ್ 01) ದೇಶಾದ್ಯಂತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ನಿಯಮ ಜಾರಿಯಾಗಿದೆ. ನೀವು ಕಾರಿನಲ್ಲಿ ಹೊರ ಹೋಗುವ ಮೊದಲು ಏನಿದು ನಿಯಮ? ಇದರ ಪ್ರಯೋಜನವೇನು ಎಂಬುದನ್ನು ತಪ್ಪದೇ ತಿಳಿಯಿರಿ.
Paytm Fastag Alert: ನೀವು Paytm ವ್ಯಾಲೆಟ್ಗೆ ಲಿಂಕ್ ಮಾಡಲಾದ Fastag ಅನ್ನು ಬಳಸುತ್ತಿದ್ದರೆ, ಮಾರ್ಚ್ 15 ರ ನಂತರ ನಿಮ್ಮ Fastag ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಟೋಲ್ ಪ್ಲಾಜಾದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು, ಬೇರೆ ಯಾವುದಾದರೂ ಬ್ಯಾಂಕ್ನಿಂದ ಫಾಸ್ಟ್ಯಾಗ್ ಅನ್ನು ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
NHAI FASTag Issuer List: NHAI ಹೊರಡಿಸಿದ ಪರಿಷ್ಕೃತ ಪಟ್ಟಿಯಲ್ಲಿ 39 ಬ್ಯಾಂಕ್ಗಳ ಹೆಸರಿದೆ. ಈ ಬ್ಯಾಂಕ್ ಗಳ ಮೂಲಕ ನೀವು ಫಾಸ್ಟ್ಯಾಗ್ ಪಡೆಯಬಹುದು.ಈ ಎಲ್ಲಾ ಬ್ಯಾಂಕುಗಳು ಫಾಸ್ಟ್ಯಾಗ್ ನೀಡಲು ಮಾನ್ಯವಾಗಿರುತ್ತವೆ.
FASTag KYC Deadline Feb 29:ನಿಮ್ಮ ಫಾಸ್ಟ್ಯಾಗ್ನ KYC ಯನ್ನು ಇವತ್ತಿನ ಒಳಗೆ ಪೂರೈಸದೇ ಹೋದ ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮಾರ್ಚ್ 1 ರಿಂದ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
Paytm FASTag Port: ನಿಮ್ಮ ಫಾಸ್ಟ್ಟ್ಯಾಗ್ ಕೂಡ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಲಿಂಕ್ ಆಗಿದ್ದರೆ, ನೀವು ಅದನ್ನು ಡಿಲೀಟ್ ಮಾಡುವುದರ ಜೊತೆಗೆ ಸುಲಭವಾಗಿ ಪೋರ್ಟ್ ಕೂಡ ಮಾಡಬಹುದು.
FASTag: ಎನ್ಎಚ್ಎಐ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವಿಕೆಯ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಿದೆ. ಈ ಮೊದಲು ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ನಿಗದಿಗೊಳಿಸಿದ್ದ ಜನವರಿ 31, 2024 ರ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.
FASTag KYC: ಎನ್ಎಚ್ಎಐ ಒಂದು ವಾಹನ ಒಂದು ಫಾಸ್ಟ್ಟ್ಯಾಗ್ ಎಂಬ ಅಭಿಯಾನವನ್ನು ಆರಂಭಿಸಿದ್ದು, ಇದರ ಭಾಗವಾಗಿ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನೀವು ಎರಡು ದಿನಗಳಲ್ಲಿ ಅಂದರೆ 31 ಜನವರಿ 2024 ರೊಳಗೆ ಫಾಸ್ಟ್ಟ್ಯಾಗ್ ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ ಫಾಸ್ಟ್ಟ್ಯಾಗ್ ಬಳಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು.
FASTag Recharge: ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಫಾಸ್ಟ್ಯಾಗ್ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಪ್ರಯೋಜನವನ್ನು ಪಡೆಯಲು ನೀವು ಸೂಕ್ತ ಸಮಯದಲ್ಲಿ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಿಸುವುದು ಕೂಡ ಅತ್ಯಗತ್ಯವಾಗಿದೆ. ನೀವು ಇರುವಲ್ಲಿಯೇ ಆನ್ಲೈನ್ನಲ್ಲಿ ಬಹಳ ಸುಲಭವಾಗಿ ಫಾಸ್ಟ್ಯಾಗ್ ರೀಚಾರ್ಜ್ ಮಾಡಬಹುದು.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರ (NHAI) ಫಾಸ್ಟ್ಯಾಗ್ ವ್ಯವಸ್ಥೆಯ ಮೂಲಕ ಭಾರತದಾದ್ಯಂತ ಪ್ರತಿ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸುತ್ತದೆ. ಫಾಸ್ಟ್ಟ್ಯಾಗ್ಗಳನ್ನು ಭಾರತ ಸರ್ಕಾರದಿಂದ ಅಧಿಕೃತ 'ಟ್ಯಾಗ್-ವಿತರಕರು' ಅಥವಾ ಬ್ಯಾಂಕ್ಗಳ ಮೂಲಕ ನೀಡಬಹುದು.
FASTag Scam: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ವಂಚಕರೂ ಕೂಡ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಕಂಡು ಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
Toll Tax Collection with Number Plate: ಈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಟೋಲ್ ಪ್ಲಾಜಾದಲ್ಲಿ ವಾಹನಗಳ ಕಾಯುವ ಅವಧಿಯು ಕಡಿಮೆಯಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಹೇಳಿಕೊಂಡಿದೆ. ಪ್ರಸ್ತುತ, ದೇಶದಲ್ಲಿ ಸುಮಾರು 97 ಪ್ರತಿಶತದಷ್ಟು ಟೋಲ್ ಸಂಗ್ರಹವನ್ನು ಫಾಸ್ಟ್ಯಾಗ್ ಮೂಲಕ ಮಾಡಲಾಗುತ್ತಿದೆ. ಆದರೆ ಟೋಲ್ ಪ್ಲಾಜಾಗಳು ಜಾಮ್ ಆಗುತ್ತವೆ.
FASTag: ನೀವು ನಿಮ್ಮ ಕಾರನ್ನು ಸಹ ಮಾರಾಟ ಮಾಡುತ್ತಿದ್ದರೆ ಅಥವಾ ಇತ್ತೀಚೆಗೆ ನಿಮ್ಮ ಕಾರನ್ನು ಮಾರಾಟ ಮಾಡಿದ್ದರೆ, ಅದರಲ್ಲಿ ಸ್ಥಾಪಿಸಲಾದ ಫಾಸ್ಟ್ಟ್ಯಾಗ್ ಏನಾಗುತ್ತದೆ ಎಂದು ತಿಳಿಯಿರಿ?
‘ನನ್ನ ಫಾಸ್ಟ್ಟ್ಯಾಗ್ ಅಪ್ಲಿಕೇಶನ್ಗೆ’ (My FASTag App) ‘ಚೆಕ್ ಬ್ಯಾಲೆನ್ಸ್ ಸ್ಥಿತಿ’ (Check Balance Status) ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಅಪ್ಲಿಕೇಶನ್ ಬಣ್ಣ ಸಂಕೇತಗಳಲ್ಲಿ ಫಾಸ್ಟ್ಯಾಗ್ ವಾಲೆಟ್ ಬ್ಯಾಲೆನ್ಸ್ ಸ್ಥಿತಿಯನ್ನು ತೋರಿಸುತ್ತದೆ. ಸಾಕಷ್ಟು ಬ್ಯಾಲೆನ್ಸ್ ಹೊಂದಿರುವ ಟ್ಯಾಗ್ಗೆ ಹಸಿರು, ಕಡಿಮೆ ಬ್ಯಾಲೆನ್ಸ್ ಹೊಂದಿರುವ ಫಾಸ್ಟ್ಯಾಗ್ ಕಿತ್ತಳೆ ಮತ್ತು ಕಡಿಮೆ ಬ್ಯಾಲೆನ್ಸ್ ಹೊಂದಿರುವ ಫಾಸ್ಟ್ಯಾಗ್ಗನಲ್ಲಿ ಕೆಂಪು ಬಣ್ಣ ಗೋಚರಗೊಳ್ಳುತ್ತದೆ.
ಫಾಸ್ಟ್ಟ್ಯಾಗ್ ಇಲ್ಲದೆ ಬೆಳೆಸುವ ಪ್ರಯಾಣವು ಇನ್ನು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ. ಈ ನಡುವೆ ನೀವು ಖರೀದಿಸಿರುವ ಫಾಸ್ಟ್ಯಾಗ್ ಅಸಲಿಯೋ ನಕಲಿಯೋ ಎಂಬ ಬಗ್ಗೆ ಚೆಕ್ ಮಾಡಿಕೊಳ್ಳಿ. ನಕಲಿ ಫಾಸ್ಟ್ಯಾಗ್ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರಿಗೆ ಎಚ್ಚರಿಕೆ ನೀಡಿದೆ.
Fastag Mandatory: ನೀವು ಈಗ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರಯಾಣಿಸಬೇಕಾದರೆ, ನಿಮ್ಮ ಕಾರಿನಲ್ಲಿ ಫಾಸ್ಟ್ಟ್ಯಾಗ್ (FASTag) ಇರುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಎರಡು ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.