ಈ ಬ್ಯಾಂಕ್ ಗಳಿಂದ ಮಾತ್ರ ಖರೀದಿಸಬೇಕು Fastag : ಇಲ್ಲಿದೆ ನೋಡಿ NHAI ಬಿಡುಗಡೆ ಮಾಡಿದ ಲಿಸ್ಟ್

NHAI FASTag Issuer List: NHAI ಹೊರಡಿಸಿದ ಪರಿಷ್ಕೃತ ಪಟ್ಟಿಯಲ್ಲಿ 39 ಬ್ಯಾಂಕ್‌ಗಳ ಹೆಸರಿದೆ. ಈ ಬ್ಯಾಂಕ್ ಗಳ ಮೂಲಕ ನೀವು ಫಾಸ್ಟ್ಯಾಗ್ ಪಡೆಯಬಹುದು.ಈ ಎಲ್ಲಾ ಬ್ಯಾಂಕುಗಳು ಫಾಸ್ಟ್ಯಾಗ್ ನೀಡಲು ಮಾನ್ಯವಾಗಿರುತ್ತವೆ.

Written by - Ranjitha R K | Last Updated : Mar 13, 2024, 10:10 AM IST
  • ಫಾಸ್ಟ್ಯಾಗ್ ನೀಡುವ ಬ್ಯಾಂಕ್‌ಗಳ ಪಟ್ಟಿ ಪರಿಷ್ಕಾರ
  • ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಪಟ್ಟಿ ಬಿಡುಗಡೆ
  • Paytm ನಿಂದ Fastag ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಈ ಬ್ಯಾಂಕ್ ಗಳಿಂದ ಮಾತ್ರ ಖರೀದಿಸಬೇಕು Fastag : ಇಲ್ಲಿದೆ ನೋಡಿ NHAI ಬಿಡುಗಡೆ ಮಾಡಿದ ಲಿಸ್ಟ್  title=

NHAI FASTag Issuer List : ಫಾಸ್ಟ್ಯಾಗ್ ನೀಡುವ ಬ್ಯಾಂಕ್‌ಗಳ ಪಟ್ಟಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪರಿಷ್ಕರಿಸಿದೆ.RBI Paytm ಮೇಲೆ ನಿಷೇಧ ಹೇರಿದ ನಂತರ, ಇದೀಗ NHAI Paytm Payments Bank Ltd ಹೆಸರನ್ನು ಫಾಸ್ಟ್ಯಾಗ್ ವಿತರಕರ ಪಟ್ಟಿಯಿಂದ ತೆಗೆದುಹಾಕಿದೆ. ಅಂದರೆ Paytmನಿಂದ Fastag ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 

NHAI ಹೊರಡಿಸಿದ ಪರಿಷ್ಕೃತ ಪಟ್ಟಿಯಲ್ಲಿ 39 ಬ್ಯಾಂಕ್‌ಗಳ ಹೆಸರಿದೆ. ಈ ಬ್ಯಾಂಕ್ ಗಳ  ಮೂಲಕ ನೀವು ಫಾಸ್ಟ್ಯಾಗ್ ಪಡೆಯಬಹುದು. ಈ ಎಲ್ಲಾ ಬ್ಯಾಂಕುಗಳು ಫಾಸ್ಟ್ಯಾಗ್ ನೀಡಲು ಮಾನ್ಯವಾಗಿರುತ್ತವೆ. ಫಾಸ್ಟ್ಯಾಗ್ ತೆಗೆದುಕೊಳ್ಳುವ ಮೊದಲು, ನೀವು ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿಕೊಂಡರೆ ಒಳ್ಳೆಯದು. 

ಇದನ್ನೂ ಓದಿ : Karnataka Govt DA Hike: ರಾಜ್ಯ ಸರ್ಕಾರಿ ನೌಕರರಿಗೂ ಸಿಕ್ತು ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ

ಯಾವ ಬ್ಯಾಂಕುಗಳನ್ನು ಸೇರಿಸಲಾಗಿದೆ? : 
NHAI ಯ ಪರಿಷ್ಕೃತ ಪಟ್ಟಿಯ ಪ್ರಕಾರ ಈಗ ಒಟ್ಟು 39 ಬ್ಯಾಂಕ್‌ಗಳು ಮತ್ತು NBFCಗಳನ್ನು ಫಾಸ್ಟ್ಯಾಗ್ ನೀಡಲು ಮಾನ್ಯ ಎಂದು ಘೋಷಿಸಲಾಗಿದೆ. ಇವುಗಳಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯಸ್ ಬ್ಯಾಂಕ್ ಸೇರಿದೆ. 

NBFC ಪಟ್ಟಿಯಲ್ಲಿರುವ ಇತರ ಬ್ಯಾಂಕ್ ಗಳು : 
ಇದಲ್ಲದೆ, ಇತರ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಪಟ್ಟಿಯಲ್ಲಿ ಅಲಹಾಬಾದ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ,ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, ಕಾಸ್ಮಾಸ್ ಬ್ಯಾಂಕ್, ಡೊಂಬಿವಲಿ ನಗರಿ ಸಹಕಾರಿ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಫಿನೋ ಪೇಮೆಂಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಲಿವ್‌ಕ್ವಿಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ನಾಗ್ಪುರ್ ನಾಗರಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಮಹಾರಾಷ್ಟ್ರ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಜಲಗಾಂವ್ ಪೀಪಲ್ಸ್ ಕೋ-ಆಪ್ ಬ್ಯಾಂಕ್, ತ್ರಿಶೂರ್ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್. 

ಇದನ್ನೂ ಓದಿ : ಮುಕೇಶ್ ಅಂಬಾನಿ ಅವರ ಮಕ್ಕಳು ಇಷ್ಟು ಫೇಮಸ್ ಆಗಿದ್ದರೆ..! ಅನಿಲ್ ಅಂಬಾನಿ ಅವರ ಪುತ್ರರೇ ಏಕೆ ಇಲ್ಲ?

ಪಟ್ಟಿಯಿಂದ ಹೊರಬಿದ್ದ ಪೇಟಿಎಂ :
ಫಾಸ್ಟ್ಯಾಗ್ ನೀಡುವ ಬ್ಯಾಂಕ್‌ಗಳ ಪಟ್ಟಿಯಿಂದ NHAI Paytm ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ಅನ್ನು ತೆಗೆದುಹಾಕಿದೆ. ಪೇಟಿಎಂ ವಿರುದ್ಧ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಕ್ರಮದಿಂದಾಗಿ ಎನ್‌ಎಚ್‌ಐ ಈ ನಿರ್ಧಾರ ಕೈಗೊಂಡಿದೆ. 

ಉಳಿದ ಮೊತ್ತವನ್ನು ನೀವು ಬಳಸಬಹುದು :
ತಮ್ಮ ಫಾಸ್ಟ್ಯಾಗ್‌ನಲ್ಲಿ ಹಣ ಬಾಕಿ ಉಳಿದಿದ್ದರೆ,Paytm ಬಳಕೆದಾರರು ಅದನ್ನು ಬಳಸಬಹುದು. ಬ್ಯಾಲೆನ್ಸ್ ಖಾಲಿಯಾಗುವವರೆಗೆ ನೀವು ಅದನ್ನು ಬಳಸಬಹುದು. ಮಾರ್ಚ್ 15ರ ನಂತರ, ಗ್ರಾಹಕರು ಯಾವುದೇ ಪೇಟಿಎಂ ಫಾಸ್ಟ್ಯಾಗ್ ಅನ್ನು ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರಿಗೆ ಯಾವುದೇ ಅಧಿಕೃತ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಪಡೆಯಲು ಆರ್‌ಬಿಐ ಸಲಹೆ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News