Paytm Fastag Deadline: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ ) ನೀಡಿದ್ದ ವಿಸ್ತೃತ ಗಡುವು ಇಂದಿಗೆ ಎಂದರೆ ಮಾರ್ಚ್ 15 ರಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( ಎನ್‌ಎಚ್‌ಎಐ ) ತನ್ನ ಅಧಿಕೃತ ಪಟ್ಟಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನು ತೆಗೆದುಹಾಕಿದೆ. ನಾಳೆಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗೆ ಪೇಟಿಎಂ ಫಾಸ್ಟ್ಯಾಗ್ ಸೇವೆಯೂ ಸ್ಥಗಿತಗೊಳ್ಳಲಿದೆ. ಹಾಗಾಗಿ, ನೀವಿನ್ನೂ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು ಬದಲಾಯಿಸದಿದ್ದರೆ ಇಂದೇ ಈ ಕೆಲಸಬನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ, ನಾಳೆಯಿಂದ ಟೋಲ್ ಪ್ಲಾಜಾದಲ್ಲಿ ದುಪ್ಪಟ್ಟು ಟೋಲ್ ಪಾವತಿಸಬೇಕಾಗಬಹುದು.
ಹೌದು, ನೀವು Paytm ವ್ಯಾಲೆಟ್‌ಗೆ ಲಿಂಕ್ ಮಾಡಲಾದ Fastag ಅನ್ನು ಬಳಸುತ್ತಿದ್ದರೆ, ಮಾರ್ಚ್ 15 ರ ನಂತರ ನಿಮ್ಮ Fastag ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಟೋಲ್ ಪ್ಲಾಜಾದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು, ಬೇರೆ ಯಾವುದಾದರೂ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಅನ್ನು ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಪೇಟಿಎಂ ಫಾಸ್ಟ್ಯಾಗ್ ನಲ್ಲಿ ರೀಚಾರ್ಜ್ ಮಾಡಿರುವ ಹಣ ಆಗಲ್ಲ ವ್ಯರ್ಥ:
ಮಾರ್ಚ್ 16 ರಿಂದ ಪೇಟಿಎಂ ಫಾಸ್ಟ್ಯಾಗ್ ಸೇವೆ ಸ್ಥಗಿತಗೊಳ್ಳಲಿದೆ. ಹಾಗಾಗಿ, ಮಾರ್ಚ್ 15, 2024 ರ ನಂತರ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು ರಿಚಾರ್ಜ್ ಮಾಡುವುದಾಗಲಿ, ಅಥವಾ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ನಿಮ್ಮ ಹಳೆಯ ಪೇಟಿಎಂ ಫಾಸ್ಟ್ಯಾಗ್‌ನಲ್ಲಿ ನೀವು ಈಗಾಗಲೇ ಬ್ಯಾಲೆನ್ಸ್ ಹೊಂದಿದ್ದರೆ ಆ ಹಣ ವ್ಯರ್ಥವಾಗುವುದಿಲ್ಲ. ಇದನ್ನು ನೀವು ಟೋಲ್‌ಗಳಲ್ಲಿ ಬಳಸಬಹುದು.
ಇದನ್ನೂ ಓದಿ- Financial Mistakes: ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆ..!ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ
ಗಮನಾರ್ಹವಾಗಿ, "ಒಂದು ವಾಹನ, ಒಂದು ಫಾಸ್ಟ್ಯಾಗ್ " ನಿಯಮದ ಪ್ರಕಾರ, ಒಂದು ವಾಹನಕ್ಕೆ ಒಂದು ಫಾಸ್ಟ್ಯಾಗ್ ಅನ್ನು ಮಾತ್ರ ಲಿಂಕ್ ಮಾಡಬಹುದು. ಹಾಗಾಗಿ, ನೀವಿನ್ನೂ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸದಿದ್ದಲ್ಲಿ ಇಂದೇ ಈ ಕೆಲಸ ಮಾಡಿ. ಇದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ...
ಪೇಟಿಎಂ ಅಪ್ಲಿಕೇಶನ್ ಬಳಸಿ Paytm ಫಾಸ್ಟ್ಯಾಗ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕ್ರಮಗಳು:
* ಮೊದಲನೆಯದಾಗಿ ಪೇಟಿಎಂ ಅಪ್ಲಿಕೇಷನ್ ತೆರೆಯಿರಿ.
* ಮೇಲಿನ ಎಡ ಮೂಲೆಯಲ್ಲಿ ಕಾಣುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಇಲ್ಲಿ ಸಹಾಯ ಮತ್ತು ಬೆಂಬಲ ಆಯ್ಕೆಯನ್ನು ಆರಿಸಿ.
* ಇದರಲ್ಲಿ ಬ್ಯಾಂಕಿಂಗ್ ಸೇವೆಗಳು ಮತ್ತು ಪಾವತಿಗಳು ಎಂಬ ವಿಭಾಗದಲ್ಲಿ ಫಾಸ್ಟ್ಯಾಗ್ ಅನ್ನು ಆಯ್ಕೆ ಮಾಡಿ.
* ಇದರ ಕೆಳಭಾಗದಲ್ಲಿರುವ ನಮ್ಮೊಂದಿಗೆ ಚಾಟ್ ಮಾಡಿ ಆಯ್ಕೆಯನ್ನು ಆರಿಸಿ Paytm ಫಾಸ್ಟ್ಯಾಗ್ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ವಿನಂತಿಸಿ.
ಇದನ್ನೂ ಓದಿ- Business News: ಬಾಡಿಗೆಗೆ ಹೆಲಿಕಾಪ್ಟರ್, ಚಾರ್ಟರ್ಡ್ ಫ್ಲೈಟ್..! ಗಂಟೆ ಬಾಡಿಗೆ ಎಷ್ಟು ಗೊತ್ತಾ..?
ಪೇಟಿಎಂ ಪೋರ್ಟಲ್ ಬಳಸಿ ಪೇಟಿಎಂ ಫಾಸ್ಟ್ಯಾಗ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
>> ಫಾಸ್ಟ್ಯಾಗ್ ಪೇಟಿಎಂ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ರುಜುವಾತುಗಳನ್ನು ಬಳಸಿಕೊಂಡು ಲಾಗ್ ಇನ್ ಆಗಿ.
>> ನಂತರ ಪರಿಶೀಲನೆಗಾಗಿ ನಿಮ್ಮ ಫಾಸ್ಟ್ಯಾಗ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ, ಇನ್ನಿತರ ಅಗತ್ಯ ಮಾಹಿತಿಗಳನ್ನು ನಮೂಡಿದಿ.
>> ಸ್ಕ್ರಾಲ್ ಡೌನ್ ಮಾಡಿ, ಸಹಾಯ ಮತ್ತು ಬೆಂಬಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಇದರಲ್ಲಿ ನಾನು ನನ್ನ ಫಾಸ್ಟ್ಯಾಗ್ ಪ್ರೊಫೈಲ್ ಅನ್ನು ಮುಚ್ಚಲು ಬಯಸುತ್ತೇನೆ ಎಂಬ ಆಯ್ಕೆಯನ್ನು ಆರಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.