FASTag ಕೆವೈಸಿ ಪೂರ್ಣಗೊಳಿಸಲು ಇನ್ನೆರಡು ದಿನವಷ್ಟೇ ಬಾಕಿ! ಇಲ್ಲಿದೆ ಅದರ ಸಂಪೂರ್ಣ ಪ್ರಕ್ರಿಯೆ

FASTag KYC: ಎನ್‌ಎಚ್‌ಎಐ  ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್ ಎಂಬ ಅಭಿಯಾನವನ್ನು ಆರಂಭಿಸಿದ್ದು, ಇದರ ಭಾಗವಾಗಿ ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನೀವು ಎರಡು ದಿನಗಳಲ್ಲಿ ಅಂದರೆ 31 ಜನವರಿ 2024 ರೊಳಗೆ ಫಾಸ್ಟ್‌ಟ್ಯಾಗ್  ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ   ಫಾಸ್ಟ್‌ಟ್ಯಾಗ್ ಬಳಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು.

Written by - Yashaswini V | Last Updated : Jan 29, 2024, 12:58 PM IST
  • NHAI ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದೆ.
  • ಇದರ ಅಡಿಯಲ್ಲಿ, ಫಾಸ್ಟ್‌ಟ್ಯಾಗ್ ಬಳಕೆದಾರರು ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
  • 31 ಜನವರಿ 2024 ರೊಳಗೆ ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸಬೇಕಾಗುತ್ತದೆ.
FASTag ಕೆವೈಸಿ ಪೂರ್ಣಗೊಳಿಸಲು ಇನ್ನೆರಡು ದಿನವಷ್ಟೇ ಬಾಕಿ! ಇಲ್ಲಿದೆ ಅದರ ಸಂಪೂರ್ಣ ಪ್ರಕ್ರಿಯೆ  title=

FASTag KYC Update: ರಾಷ್ಟ್ರೀಯ ಹೆದ್ದಾರಿಯಲ್ಲಿ ನೀವು ಪ್ರಯಾಣಿಸುವಾಗ ನಿಮ್ಮ ವಾಹನದಲ್ಲಿ  ಫಾಸ್ಟ್‌ಟ್ಯಾಗ್ ಹೊಂದಿರುವುದು ಅತ್ಯಗತ್ಯವಾಗಿದೆ. ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ಸಹಕಾರಿಯಾಗಿರುವ ಫಾಸ್ಟ್‌ಟ್ಯಾಗ್ ಬಗ್ಗೆ ಈ ಪ್ರಮುಖ ಸುದ್ದಿಯನ್ನು ನೀವು ಓದಲೇಬೇಕು. 

ವಾಸ್ತವವಾಗಿ, NHAI ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ 31 ಜನವರಿ 2024ರ ಗಡುವನ್ನು ನಿಗಡಿಗೊಳಿಸಲಾಗಿದೆ. ನೀವು ಇನ್ನೂ ಕೂಡ ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ ಇನ್ನೆರಡು ದಿನಗಳಲ್ಲಿ ಈ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಿ. 

ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ಯಾವ್ಯಾವ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು. ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ... 

ಇದನ್ನೂ ಓದಿ- ಹಳೆಯ Facebook ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ..?

ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ಅಗತ್ಯ ದಾಖಲೆಗಳು: 
ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ನಿಮ್ಮ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ದಂತಹ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ. 

ಇದನ್ನೂ ಓದಿ- UPI ATM: ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಸುಲಭ ಪ್ರಕ್ರಿಯೆ

ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ? 
ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎರಡು ರೀತಿಯಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಬಹುದು. 

ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡುವ ಹಂತ-ಹಂತದ ಪ್ರಕ್ರಿಯೆ:- 
>> ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಮೊದಲಿಗೆ  fastag.ihmcl.com ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. 
>>  ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಲಾಗ್ ಇನ್ ಮಾಡಿ. 
>> ನಂತರ ತೆರೆಯುವ ಹೊಸ ವಿಂಡೋದಲ್ಲಿ "ಮೈ ಪ್ರೊಫೈಲ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಬಳಿಕ ಇಲ್ಲಿ ನಿಮ್ಮ ಫಾಸ್ಟ್‌ಟ್ಯಾಗ್ ಸ್ಟೇಟಸ್ ಪರಿಶೀಲಿಸಿ.
>> ಒಂದೊಮ್ಮೆ ನೀವು ಫಾಸ್ಟ್‌ಟ್ಯಾಗ್ ಕೆವೈಸಿ ಪೂರ್ಣಗೊಳಿಸದೇ ಇದ್ದಲ್ಲಿ ಮಾಡದಿದ್ದಲ್ಲಿ ಇಲ್ಲಿ ನಿಗದಿತ ಜಾಗದಲ್ಲಿ ನಿಮ್ಮ ದಾಖಲೆಗಳ ಜೊತೆಗೆ ವಿವರಗಳನ್ನು ಭರ್ತಿ ಮಾಡಿ. 
>> ಇದರ ನಂತರ ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಆಗಿರುತ್ತದೆ. 

ಆಫ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡುವ ವಿಧಾನ: 
ಒಂದೊಮ್ಮೆ ನೀವು ಆಫ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಬಯಸಿದರೆ ಇದಕ್ಕಾಗಿ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ. 
* ಇದಕ್ಕಾಗಿ, ಮೊದಲು ನಿಮ್ಮ ಹತ್ತಿರದ ಫಾಸ್ಟ್‌ಟ್ಯಾಗ್ ನೀಡುವ ಬ್ಯಾಂಕ್‌ಗೆ ಭೇಟಿ ನೀಡಬೇಕು. 
*  ಬ್ಯಾಂಕಿನಲ್ಲಿ ಫಾಸ್ಟ್‌ಟ್ಯಾಗ್ ಕೆವೈಸಿ ಫಾರ್ಮ್ ಅನ್ನು ಪಡೆಯಿರಿ. 
* ಈ  ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
* ಇದರ ನಂತರ, ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯ ಕೆವೈಸಿ ಪೂರ್ಣಗೊಳ್ಳುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News