UPSC Recruitment: ಯುಪಿಎಸ್ಸಿ ಇತ್ತೀಚೆಗೆ ಕೇಂದ್ರ ಕಾರ್ಮಿಕ ಇಲಾಖೆಯ ಅಡಿಯಲ್ಲಿನ ನೌಕರರ ರಾಜ್ಯ ವಿಮಾ ನಿಗಮದಲ್ಲಿ (ESIC) ನರ್ಸಿಂಗ್ ಅಧಿಕಾರಿ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Pension Scheme: ಮರಣ ಹೊಂದಿದ ಸರ್ಕಾರಿ ನೌಕರರ (Central Government Employees) ಮಾನಸಿಕ ವಿಕಲಚೇತನರ ಮಕ್ಕಳಿಗೂ ಕುಟುಂಬ ಪಿಂಚಣಿ (EPFO Pensioners) ಸೌಲಭ್ಯ ದೊರೆಯಲಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ.
Corona Pandemic - ಕರೋನಾ ಕಾಲದಲ್ಲಿ (Corona Pandemic) ಉದ್ಯೋಗ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ (ಇಸಿಎಸ್ಐ) ಸದಸ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು (Modi Government) ಮೂರು ತಿಂಗಳ ವೇತನವನ್ನು ನೀಡಲಿದೆ.
ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ ಯೋಜನೆ ಅಡಿಯಲ್ಲಿ, ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು ಈ ಭತ್ಯೆಯ ಲಾಭವನ್ನು 3 ತಿಂಗಳವರೆಗೆ ಪಡೆಯಬಹುದು.
Good News: ರಾಜ್ಯ ಉದ್ಯೋಗಿಗಳ ವಿಮಾ ನಿಗಮ (ESIC), ತನ್ನ ವೈದ್ಯಕೀಯ ಯೋಜನೆಯ ವ್ಯಾಪ್ತಿಯನ್ನು ರೂ. 30,000 ವೇತನಕ್ಕೆ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ, ರೂ. 21 ಸಾವಿರ ವೇತನ ಪಡೆಯುವ ಉದ್ಯೋಗಿಗಳು ಮಾತ್ರ ಇದರ ಅಡಿ ಬರುತ್ತಾರೆ.
ಕೊರೋನಾದಿಂದ ಆರ್ಥಿಕವಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕುಟುಂಬದಲ್ಲಿ ಒಬ್ಬರನ್ನೇ ಜೀವನಾಧಾರವಾಗಿಸಿದ್ದ ಕುಟುಂಬಗಳು ಇಂದು ಕೊರೋನಾದಿಂದಾಗಿ ಆಸರೆಯನ್ನೇ ಕಳೆದುಕೊಂಡಿದೆ. ಇಂತಹ ಕುಟುಂಬಳಿಗೆ ಸರ್ಕಾರ ಪರಿಹಾರ ಧನ ಒದಗಿಸುತ್ತಿದೆ. ಇನ್ನೊಂದೆಡೆ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್(EPFO) ಕೂಡ ಹೀಗೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯದ ಹಸ್ತ ನೀಡಲು ಮುಂದಾಗಿವೆ.
EPFO-EDLI ಯೋಜನೆಯಡಿ, ಇದುವರೆಗೂ ಮೃತ ಕುಟುಂಬಗಳಿಗೆ 6 ಲಕ್ಷ ರೂ. ಸಿಗುತ್ತಿತ್ತು, ಇದನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ ಫೆಬ್ರವರಿಯಿಂದ ಮುಂದಿನ ಮೂರು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎನ್ನಲಾಗಿತ್ತು.
ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಸೋಮವಾರ ತನ್ನ ಫಲಾನುಭವಿಗಳಿಗೆ ತುರ್ತು ಸಂದರ್ಭಗಳಲ್ಲಿ ಯಾವುದೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ನೇರವಾಗಿ ಪಡೆಯಲು ಅನುಮತಿ ನೀಡಿದೆ.
ಇದೆ ರೀತಿ ಆಯುಷ್ಮಾನ್ ಭಾರತದ ಫಲಾನುಭವಿಗಳು ಕೂಡ ಇಎಸ್ಐಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಎರಡೂ ಆರೋಗ್ಯ ಯೋಜನೆಗಳ ವಿಲೀನದಿಂದ ದೇಶದ ಕೋಟ್ಯಂತರ ಜನರು ಪ್ರಯೋಜನ ಪಡೆಯಲಿದ್ದಾರೆ.
ಒಂದು ವೇಳೆ ನೀವೂ ಕೂಡ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಮಹಾಮಾರಿಯ ಕಾರಣ ನೀವು ನಿಮ್ಮ ಕೆಲಸ ಕಳೆದುಕೊಂಡರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸರ್ಕಾರ ನಿಮಗೆ ಎರಡು ವರ್ಷಗಳ ಕಾಲ ಅಂದರೆ 24 ತಿಂಗಳು ಧನಸಹಾಯ ನೀಡಲಿದೆ.
EPFO ಅಂದರೆ ನೌಕರರ ಭವಿಷ್ಯ ನಿಧಿ ಸಂಘಟನೆ ನೌಕರ ವರ್ಗದವರಿಗೆ ಸಂತಸದ ಸುದ್ದಿಯೊಂದು ಪ್ರಕಟಿಸಿದೆ. ಮುಂಬರುವ 3 ತಿಂಗಳ ಅವಧಿಗೆ EPFO ಅಡಿ ಬರುವ ನೌಕರರ ಪ್ರಾವಿಡೆಂಟ್ ಫಂಡ್ ಕೊಡುಗೆಯನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.