ಮೋದಿ ಸರ್ಕಾರದ ಈ ನಿರ್ಣಯದಿಂದ ನೌಕರರಿಗೆ ಸಿಗಲಿದೆ ಹೆಚ್ಚಿನ ಸಂಬಳ

EPFO ಅಂದರೆ ನೌಕರರ ಭವಿಷ್ಯ ನಿಧಿ ಸಂಘಟನೆ ನೌಕರ ವರ್ಗದವರಿಗೆ ಸಂತಸದ ಸುದ್ದಿಯೊಂದು ಪ್ರಕಟಿಸಿದೆ. ಮುಂಬರುವ 3 ತಿಂಗಳ ಅವಧಿಗೆ EPFO ಅಡಿ ಬರುವ ನೌಕರರ ಪ್ರಾವಿಡೆಂಟ್ ಫಂಡ್ ಕೊಡುಗೆಯನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದೆ.

Last Updated : Apr 7, 2020, 09:35 PM IST
ಮೋದಿ ಸರ್ಕಾರದ ಈ ನಿರ್ಣಯದಿಂದ ನೌಕರರಿಗೆ ಸಿಗಲಿದೆ ಹೆಚ್ಚಿನ ಸಂಬಳ title=

ದೇಶದ ಲಕ್ಷಾಂತರ ನೌಕರರಿಗೆ ಕೇಂದ್ರ ಭವಿಷ್ಯ ನಿಧಿ ಸಂಘಟನೆ ಒಂದು ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಮುಂಬರುವ ಮೂರು ತಿಂಗಳ ಅವಧಿಗೆ ಕೇಂದ್ರ ಭವಿಷ್ಯ ನಿಧಿ ಸಂಘಟನೆಯ ಅಡಿ ಬರುವ ನೌಕರರ ಭವಿಷ್ಯ ನಿಧಿ ಕೊಡುಗೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ನೌಕರಿದಾತರ ಕೊಡುಗೆಯನ್ನೂ ಸಹ ಸರ್ಕಾರವೇ ಭರಿಸಲಿದೆ. ಅಂದರೆ ಮುಂದಿನ ಮೂರು ತಿಂಗಳ ಅವಧಿಗೆ 15 ಸಾವಿರ ರೂ. ಸಂಬಳ ಪಡೆಯುವ ನೌಕರರಿಗೆ ಸಂಪೂರ್ಣ ಸ್ಯಾಲರಿ ಸಿಗಲಿದೆ.

ಈ ಕುರಿತು ತಮ್ಮ ಹೇಳಿಕೆ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ EPFO ಸದಸ್ಯರಿಗೆ ಸಹಾಯ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೌಕರರ ಹಾಗೂ ನೌಕರಿದಾತರ ಶೇ.12-ಶೇ.12 ರಷ್ಟು ಕೊಡುಗೆಯನ್ನು ಇದೀಗ ಸರ್ಕಾರವೇ ಭರಿಸಲಿದೆ.

ಆದರೆ, 100 ಕ್ಕೂ ಕಡಿಮೆ ಕಾರ್ಮಿಕರು ಕೆಲಸ ಮಾಡುವ ಕಂಪನಿಗಳಿಗೆ ಮಾತ್ರ ಸರ್ಕಾರ ಈ ಸೌಕರ್ಯ ನೀಡಲಿದೆ ಎಂದು ಸ್ಪಷ್ಟಪಡಿಸಿತ್ತು ಹಾಗೂ ಶೇ.90 ರಷ್ಟು ಕಾರ್ಮಿಕರು 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುತ್ತಾರೆ. ESIC ಯಲ್ಲಿ 15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವವರಿಗೆ ಆರೋಗ್ಯ ವಿಮೆಯ ಲಾಭ ಸಿಗುತ್ತದೆ. ಅಂದರೆ, ESIC ಸದಸ್ಯರಿಗೆ ಇದರಿಂದ ಹೆಚ್ಚಿನ ಲಾಭ ಸಿಗಲಿದೆ. ಅಂದರೆ, ಇಂತಹ ನೌಕರರ ಸಂಬಳ ಮೂರು ತಿಂಗಳ ಅವಧಿಗೆ ಹೆಚ್ಚಿಗೆ ಬರಲಿದೆ.

ಇದರ ಜೊತೆಗೆ ಸರ್ಕಾರ EPF ನಿಯಮಗಳಲ್ಲಿಯೂ ಕೂಡ ಸಡಿಲಿಕೆ ನೀಡಿದೆ. ಈ ಸಡಿಲಿಕೆಯ ಅಡಿ ನೌಕರರು ತಮ್ಮ PF ಖಾತೆಯಿಂದ ಶೇ.75 ರಷ್ಟು ಹಣವನ್ನು ಹಿಂಪಡೆಯಬಹುದಾಗಿದೆ. ಆದರೆ, ಈ ಮೊತ್ತ ಅವರ ಮೂರು ತಿಂಗಳ ಸಂಬಳಕ್ಕಿಂತ ಕಡಿಮೆಯಾಗಿರಬೇಕು. ಅತ್ತ ESIC ಕೂಡ ನೌಕರರ ತಿಂಗಳ ಕೊಡುಗೆ ಪಾವತಿಸಲು 15 ದಿನಗಳ ಹೆಚ್ಚುವರಿ ಅವಧಿಯನ್ನು ನೀಡಿದೆ.

Trending News