ನೀವೂ ಕೆಲಸ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ನಿರುದ್ಯೋಗ ಭತ್ಯೆಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ

ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ ಯೋಜನೆ ಅಡಿಯಲ್ಲಿ, ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು ಈ ಭತ್ಯೆಯ ಲಾಭವನ್ನು 3 ತಿಂಗಳವರೆಗೆ ಪಡೆಯಬಹುದು.

Written by - Ranjitha R K | Last Updated : Sep 15, 2021, 03:47 PM IST
  • ಕೊರೊನಾ ಅವಧಿಯಲ್ಲಿ ಕೆಲಸ ಕಳೆದುಕೊಂಡವರ ಖಾತೆಗೆ ಹಣ
  • ಈ ಯೋಜನೆಗಾಗಿ ತಕ್ಷಣವೇ ನೋಂದಾಯಿಸಿಕೊಳ್ಳಿ
  • ಈ ಯೋಜನೆಯನ್ನು ಜೂನ್ 30, 2022 ರವರೆಗೆ ವಿಸ್ತರಿಸಿದ ಇಎಸ್ಐಸಿ
ನೀವೂ ಕೆಲಸ ಕಳೆದುಕೊಂಡಿದ್ದೀರಾ ?   ಹಾಗಿದ್ದರೆ ನಿರುದ್ಯೋಗ ಭತ್ಯೆಗಾಗಿ ಇಲ್ಲಿ ನೋಂದಾಯಿಸಿಕೊಳ್ಳಿ title=
ಕೊರೊನಾ ಅವಧಿಯಲ್ಲಿ ಕೆಲಸ ಕಳೆದುಕೊಂಡವರ ಖಾತೆಗೆ ಹಣ (file photo)

ನವದೆಹಲಿ: Unemployment allowance: ಕೊರೊನಾ ಅವಧಿಯಲ್ಲಿ ಅನೇಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.  ಸರ್ಕಾರ ನಿರುದ್ಯೋಗಿಗಳಿಗೆ (Unemployment) ನಿರುದ್ಯೋಗ ಭತ್ಯೆಯನ್ನು ನೀಡುತ್ತದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಸರ್ಕಾರವು 'ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ' (Atal Beemit Vyakti Kalyan Yojana) ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ 50 ಸಾವಿರಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ನೌಕರರ ರಾಜ್ಯ ವಿಮಾ ನಿಗಮ (ESIC) ಈ ಯೋಜನೆಯನ್ನು ನಡೆಸುತ್ತಿದೆ. ಕರೋನಾ (Coronavirus) ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು 'ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ ಯೋಜನೆ' ಯನ್ನು ಜೂನ್ 30,  2022 ರವರೆಗೆ ವಿಸ್ತರಿಸಿದೆ. 

'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಕಲ್ಯಾಣ ಯೋಜನೆ' ಎಂದರೇನು?
ಅಟಲ್ ಬೀಮಿಟ್ ವ್ಯಕ್ತಿ ಕಲ್ಯಾಣ ಯೋಜನೆ (Atal Beemit Vyakti Kalyan Yojana) ಅಡಿಯಲ್ಲಿ, ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು ಈ ಭತ್ಯೆಯ ಲಾಭವನ್ನು 3 ತಿಂಗಳವರೆಗೆ ಪಡೆಯಬಹುದು. 3 ತಿಂಗಳವರೆಗೆ ವ್ಯಕ್ತಿಯ ಸರಾಸರಿ ಸಂಬಳದ 50%ದಷ್ಟನ್ನು ಕ್ಲೇಮ್ ಮಾಡಬಹುದು. ನಿರುದ್ಯೋಗಿಯಾದ 30 ದಿನಗಳ ನಂತರ, ಈ ಯೋಜನೆಯ ಲಾಭವನ್ನು ಪಡೆಯಬಹುದು. 

ಇದನ್ನೂ ಓದಿ :  EPFO New Rule : ತುರ್ತು ಸಮಯದಲ್ಲಿ ನೀವು 1 ಗಂಟೆಯಲ್ಲಿ PF ಖಾತೆಯಿಂದ ₹1 ಲಕ್ಷ ಹಿಂಪಡೆಯಬಹುದು : ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ :
ಈ ಯೋಜನೆಯ ಲಾಭ ಪಡೆಯಲು, ESIC ಗೆ ಸಂಬಂಧಿಸಿದ ಉದ್ಯೋಗಿಗಳು ESIC ಯ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತರ, ಅರ್ಜಿಯನ್ನು ಇಎಸ್‌ಐಸಿ  ಧೃಡೀಕರಿಸುತ್ತದೆ. ನಿಮ್ಮ ಅರ್ಜಿಯು ಸರಿಯಾಗಿದ್ದರೆ,  ಮೊತ್ತವನ್ನು ಸಂಬಂಧಪಟ್ಟ ಉದ್ಯೋಗಿಯ ಖಾತೆಗೆ ಕಳುಹಿಸಲಾಗುತ್ತದೆ.

ಯೋಜನೆಯ ಲಾಭವನ್ನು ಯಾರು ಪಡೆಯಬಹುದು?
1.  ಖಾಸಗಿ ವಲಯದಲ್ಲಿ (ಸಂಘಟಿತ ವಲಯದಲ್ಲಿ) ಕೆಲಸ ಮಾಡುವವರು ಅಂದರೆ ಯಾರ ಕಂಪನಿ ಪ್ರತಿ ತಿಂಗಳು PF / ESI ವೇತನವನ್ನು ಕಡಿತಗೊಳಿಸುತ್ತದೆಯೋ  ಅವರು ನಿರುದ್ಯೋಗಿಗಳಾದಾಗ ಈ ಯೋಜನೆಯ ಲಾಭವನ್ನು ತೆಗೆದುಕೊಳ್ಳಬಹುದು. 
2. ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ESI ಯ ಲಾಭ ಸಿಗುತ್ತದೆ. ಈ ಕಾರಣಕಾಗಿ, ಇಎಸ್‌ಐ ಕಾರ್ಡ್ (ESI Card) ಮಾಡಿಸಲಾಗಿರುತ್ತದೆ.  
3. ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆಯ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ 21 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ.

ಇದನ್ನೂ ಓದಿ : Bank of India: ವಿಶೇಷ ಯೋಜನೆ ಆರಂಭಿಸಿದ ಬ್ಯಾಂಕ್ ಆಫ್ ಇಂಡಿಯಾ, ಸಿಗುತ್ತೆ 1 ಕೋಟಿ ರೂ.ಗಳ ಲಾಭ

ಈ ರೀತಿ ನೋಂದಾಯಿಸಿಕೊಳ್ಳಿ : 
1. ಯೋಜನೆಯ ಲಾಭ ಪಡೆಯಲು, ನೀವು ಮೊದಲು ಇಎಸ್‌ಐಸಿ ವೆಬ್‌ಸೈಟ್‌ನಲ್ಲಿ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
2.  ಈಗ ಫಾರ್ಮ್ ಅನ್ನು  ಭರ್ತಿ ಮಾಡಿ ಮತ್ತು ಅದನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ESIC) ಹತ್ತಿರದ ಶಾಖೆಗೆ ಸಲ್ಲಿಸಿ.
3  ನಂತರ, ಫಾರ್ಮ್ ನೊಂದಿಗೆ ನಾನ್ ಜುಡಿಶಿಯಲ್ ಸ್ಟಾಂಪ್ ಪೇಪರ್ ಮೇಲೆ 20ರೂ. ನೋಟರಿಯ ಅಫಿಡವಿಟ್ ಮಾಡಿಸಬೇಕಾಗುತ್ತದೆ. 
4. ಇದರಲ್ಲಿ  AB-1 ರಿಂದ AB-4 ಫಾರ್ಮ್ ಸಲ್ಲಿಸಲಾಗುವುದು.
5. ಆದರೆ ನೆನೆಪಿರಲಿ ನಿಮ್ಮ ತಪ್ಪು ನಡವಳಿಕೆಯಿಂದಾಗಿ  ಕೆಲಸವನ್ನು ಕಳೆದುಕೊಂದಿದ್ದರೆ ಈ ಯೋಜನೆಯ ಲಾಭ ಸಿಗುವುದಿಲ್ಲ.  
6. ತಪ್ಪು ನಡವಳಿಕೆಯಿಂದ ಕಂಪನಿಯಿಂದ ತೆಗೆದುಹಾಕಲ್ಪಟ್ಟಿದ್ದರೂ ಯೋಜನೆಯ ಲಾಭಸಿಗುವುದಿಲ್ಲ. ಇದಲ್ಲದೇ, ಕ್ರಿಮಿನಲ್ ಕೇಸ್ ದಾಖಲಿಸಿರುವ ಅಥವಾ ಸ್ವಯಂ ನಿವೃತ್ತಿ (VRS) ತೆಗೆದುಕೊಂಡ ಉದ್ಯೋಗಿಗಳು ಕೂಡ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News