ESIC Scheme: ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ, ಸರ್ಕಾರದ ನಿಯಮಗಳನ್ನು ತಿಳಿಯಿರಿ

ESIC Scheme: ಇಎಸ್ಐಸಿ ಯೋಜನೆಯಡಿ, ತುರ್ತು ಸಂದರ್ಭಗಳಲ್ಲಿ, ಹತ್ತಿರದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. 

Written by - Yashaswini V | Last Updated : Apr 29, 2021, 01:55 PM IST
  • ನೌಕರರ ರಾಜ್ಯ ವಿಮಾ ನಿಗಮದಲ್ಲಿ (ಇಎಸ್ಐಸಿ) ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದೆ
  • ಇಎಸ್ಐಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಗಲಿದೆಈ ಸೌಲಭ್ಯ
  • ತುರ್ತು ಸಂದರ್ಭದಲ್ಲಿ ಸಿಗಲಿದೆ ಇದರ ಪ್ರಯೋಜನ
ESIC Scheme: ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ, ಸರ್ಕಾರದ ನಿಯಮಗಳನ್ನು ತಿಳಿಯಿರಿ title=
ESIC

ನವದೆಹಲಿ: ಇಎಸ್ಐಸಿ ಯೋಜನೆ: ದೇಶದಲ್ಲಿ ಕರೋನದ ಎರಡನೇ ತರಂಗವು ಸಾಕಷ್ಟು ಭಯಾನಕವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಸ್ಥಳವೇ ಇಲ್ಲದಂತಾಗಿದೆ. ದೇಶದಲ್ಲಿ ಅಪಾರ ಪ್ರಮಾಣದ ಆಮ್ಲಜನಕದ ಕೊರತೆ ಎದುರಾಗಿದೆ. ಕೇವಲ ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಕೂಡ ಕರೋನಾ ಸಾಕಷ್ಟು ಹಾನಿ ಮಾಡಿದ್ದು ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. 

ಈ ಸಂದರ್ಭದಲ್ಲಿ ಕರೋನಾದ (Coronavirus) ಹೊರತಾಗಿ, ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿರುವ ಜನರು ಚಿಕಿತ್ಸೆ ಪಡೆಯುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ, ನೌಕರರ ರಾಜ್ಯ ವಿಮಾ ನಿಗಮದಲ್ಲಿ (ಇಎಸ್ಐಸಿ) ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದೆ.  ಫಲಾನುಭವಿಗಳು ಇಎಸ್ಐಸಿ ಯೋಜನೆಯಡಿ, ತುರ್ತು ಸಂದರ್ಭಗಳಲ್ಲಿ, ಹತ್ತಿರದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ನೌಕರರ ರಾಜ್ಯ ವಿಮಾ ನಿಗಮವು ಆದೇಶ ಹೊರಡಿಸಿದೆ. 

ಇದನ್ನೂ ಓದಿ - ಪೋಸ್ಟ್ ಆಫೀಸಿನ ಈ ಸ್ಕೀಮ್ ಗಳಲ್ಲಿ ಹಣ ಡಬಲ್ ಆಗಲಿದೆ

ಈ ಮೊದಲು ಯಾವುದೇ ಇಎಸ್ಐಸಿ (ESIC) ಫಲಾನುಭವಿ ಅಥವಾ ಅವರ ಕುಟುಂಬದ ಸದಸ್ಯರು ಇಎಸ್ಐಸಿ ಆಸ್ಪತ್ರೆ ಅಥವಾ ಆಸ್ಪತ್ರೆಗಳ ಪ್ಯಾನಲ್ ನಲ್ಲಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದರು. ಒಂದೊಮ್ಮೆ ಅಲ್ಲಿ ಅಗತ್ಯವಿರುವ ಚಿಕಿತ್ಸೆ ಲಭ್ಯವಿರದ ಸಂದರ್ಭಗಳಲ್ಲಿ ಮಾತ್ರ ಅವರನ್ನು ಬೇರೆ ಆಸ್ಪತ್ರೆಗಳಿಗೆ ಉಲ್ಲೇಖಿಸಲಾಗುತ್ತಿತ್ತು. ಆದರೆ ಈಗ ತುರ್ತು ಸಂದರ್ಭದಲ್ಲಿ ನೀವು ಹತ್ತಿರದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಹೃದಯಾಘಾತ ಸೇರಿದಂತೆ ಇತರ ಕೆಲವು ರೋಗಗಳಿಗೆ ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಇಎಸ್ಐ ಫಲಾನುಭವಿ ರೋಗಿಗೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಅನುಮತಿಸಲಾಗಿದೆ. ಅದಕ್ಕಾಗಿ ಮೊದಲು ಪಾವತಿಸಿ ಬಳಿಕ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ - ತಪ್ಪಿ ಬೇರೆಯವರ ಖಾತೆಗೆ ದುಡ್ಡು ಟ್ರಾನ್ಸ್ಫರ್ ಆದರೆ ಹೀಗೆ ಮಾಡಿ ..

ಈ ಚಿಕಿತ್ಸೆಗೆ ತಗುಲುವ ಖರ್ಚುಗಳಿಗೆ ಕೇಂದ್ರ ಸರ್ಕಾರವು ನೀಡಿದ ವೈದ್ಯಕೀಯ ವೆಚ್ಚಗಳ ನಿಯಮಗಳ ಪ್ರಕಾರ ಪಾವತಿಸಲಾಗುವುದು. ಇದರೊಂದಿಗೆ, ESIC ನ ಸಮಿತಿ ಆಸ್ಪತ್ರೆಗಳು ಹಣವಿಲ್ಲದ ಚಿಕಿತ್ಸೆ ಸೌಲಭ್ಯಗಳನ್ನು ಒಳಗೊಂಡಿವೆ.

ಇದಲ್ಲದೆ ಇತ್ತೀಚಿಗೆ ಸರ್ಕಾರ  ESIC ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಹೆಚ್ಚಿನ ಆಸ್ಪತ್ರೆಗಳ ಸ್ಥಾಪನೆಯ ಬಗ್ಗೆ ಮಾತನಾಡಿದ್ದು ಇದರಿಂದಾಗಿ ಹೆಚ್ಚು ಹೆಚ್ಚು ಜನರಿಗೆ ಸೌಲಭ್ಯ ಸಿಗಲಿದೆ ಎಂದು ಆಶಿಸಲಾಗಿದೆ.

ESIC ಯೋಜನೆ ಎಂದರೇನು?
ಸಾಮಾನ್ಯವಾಗಿ, ಕಾರ್ಮಿಕರ ಸಚಿವಾಲಯವು ಕಡಿಮೆ ಸಂಬಳ ಸ್ವೀಕರಿಸುವ ನೌಕರರಿಗೆ ವಿಮೆಯ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಕಾರ್ಮಿಕರು ಇದರ ವ್ಯಾಪ್ತಿಗೆ ಬರುತ್ತಾರೆ. ಇದಕ್ಕಾಗಿ ಪ್ರತಿ ತಿಂಗಳು ವೇತನದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ. ಇದರಲ್ಲಿ ನೌಕರರಿಗೆ ಉಚಿತ ಚಿಕಿತ್ಸೆ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News