BJP ಶಾಸಕ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಬಂಧನ ಎಫೆಕ್ಟ್ ಬಿಜೆಪಿಗೆ ತಟ್ಟೋ ಸಾಧ್ಯತೆ ಇದೆ. ದಾವಣಗೆರೆಯಲ್ಲಿ ಮಾರ್ಚ್ 12ಕ್ಕೆ ನಡೆಯಬೇಕಿದ್ದ ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮ ಮುಂದೂಡೋ ಸಾಧ್ಯತೆ ಇದೆ..
ದಾವಣಗೆರೆ ಜಿಲ್ಲೆಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಜಾರಿ ಮಾಡ್ತೀವಿ ಎಂದು ಕೊಂಡಜ್ಜಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು.
ʻಕಾಂಗ್ರೆಸ್ಗೆ ಅಧಿಕಾರ ಕೊಟ್ರೆ ಭಯೋತ್ಪಾದಕರಿಗೆ ಕೊಟ್ಟಂತೆʼ. ʻದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪವರ್ಲೆಸ್ʼ ಆಗಿದೆ ಎಂದು ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ರು.
2000ರಿಂದಲೇ ನಮ್ಮ ಫಾರ್ಮ್ ಹೌಸ್ನಲ್ಲಿ ಜಿಂಕೆ ಸಾಕುತ್ತಿದ್ದೇವು. ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಪ್ತರು ಮಾಹಿತಿ ನೀಡಿದ್ದಾರೆ.
ಇವತ್ತಿನವರೆಗೂ ಇಂಥ ಸಭೆ ಆಗಿರಲಿಲ್ಲ, ಮುಂದೆ ಆಗುತ್ತೋ ಆಗುತ್ತೋ ಇಲ್ವೋ ಗೊತ್ತಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿನ ಕನಕ ಗುರು ಪೀಠದಲ್ಲಿ ಸಿದ್ದರಾಮೋತ್ಸವ ಬಗ್ಗೆ ಮಾತನಾಡಿ, ಕಾರ್ಯಕ್ರಮ ಮೋಸ್ಟ್ ಸಕ್ಸಸ್ ಫುಲ್ ಪಂಕ್ಷನ್ ಆಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತಾ ಹೇಳಿದ್ರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ರಾಜ್ಯದ ಮೂಳೆ ಮುಲೆಗಲಿನದ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಂಗೊಳಿಸುತ್ತಿದೆ ಸಿದ್ದರಾಮಯ್ಯ ಕಟೌಟ್ ..
ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಸಂಭ್ರಮ ಜರುಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿದ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ.
ಮೈಸೂರು ಪಾಕ್ ತಯಾರಿಕೆಯಲ್ಲಿ ನಿರತರಾಗಿರುವ ಭಾಣಸಿಗರು. ಇವೆಲ್ಲ ದೃಶ್ಯಗಳು ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತಿಂಡಿ ತಿನಿಸುಗಳ ಸಿದ್ದತೆ. ದಾವಣಗೆರೆಯ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಶಿ ಕನ್ವೆನ್ಷನ್ ಹಾಲ್ ನಲ್ಲಿ ಆರು ಲಕ್ಷ ಮೈಸೂರು ಪಾಕ್ ಸಿದ್ದವಾಗುತ್ತಿದ್ದು, ಮೂರು ದಿನಗಳಿಂದ 150 ಹೆಚ್ಚು ಬಾಣಸಿಗರು ಮೈಸೂರ್ ಪಾಕ್ ಸಿದ್ದ ಪಡಿಸುತ್ತಿದ್ದಾರೆ. ಈಗಾಗಲೇ 4 ಲಕ್ಷ ಮೈಸೂರು ಪಾಕ್ ಸಿದ್ದಪಡಿಸಲಾಗಿದೆ. ತಯಾರಾಗಿರುವ ಮೈಸೂರ್ ಪಾಕ್ ನ್ನು ಸುರಕ್ಷಿತವಾಗಿ ರಟ್ಟಿನ್ ಬಾಕ್ಸ್ ನನ್ನ ಹಾಕಿ ಸುರಕ್ಷಿತವಾಗಿ ಪ್ಯಾಕ್ ಮಾಡಲಾಗುತ್ತಿದೆ.
ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾಗೆ ಸುದೀಪ್ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.. ದಾವಣಗೆರೆ ಜಿಲ್ಲೆಯ ಹರಿಹರದ ಜಯಕುಮಾರ್ ಎಂಬೋರು ಕೈ ಬಳಸದೇ ಬಾಯಿಯಲ್ಲಿ ಬ್ರಷ್ ಹಿಡಿದು ಮೌತ್ ಆರ್ಟ್ ಮೂಲಕ ಸುದೀಪ್ ಚಿತ್ರ ಬಿಡಿಸಿದ್ದಾರೆ.. ಈ ಚಿತ್ರ ಬಿಡಿಸೋದಕ್ಕೆ ಜಯಕುಮಾರ್ 3 ಗಂಟೆ ತೆಗೆದುಕೊಂಡಿದ್ದಾರೆ. 5 ಅಡಿ ಇರೋ ಈ ಚಿತ್ರ ಎಲ್ಲರ ಗಮನ ಸೆಳೆದಿದೆ.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಕಲಾವಿದನ ಬಗ್ಗೆ ಸುದೀಪ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.