Shocking: ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದು ಅರಣ್ಯದಲ್ಲಿ ಹೂತು ಹಾಕಿದ ಪತಿ!

ವರದಕ್ಷಿಣೆ ಕಿರುಕುಳ ಹಾಗೂ ಶೀಲ ಶಂಕಿಸಿ ರಶ್ಮಿಯನ್ನು ಮನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.

Written by - Puttaraj K Alur | Last Updated : Nov 22, 2022, 05:09 PM IST
  • ಗರ್ಭಿಣಿ ಪತ್ನಿಯ ಕತ್ತು ಹಿಸುಕಿದ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿದ ಪಾಪಿ ಪತಿ
  • ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ಭಯಾನಕ ಘಟನೆ
  • ವರದಕ್ಷಿಣೆ ಕಿರುಕುಳ ಹಾಗೂ ಶೀಲ ಶಂಕಿಸಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪತ್ನಿಯ ಹತ್ಯೆ
Shocking: ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಂದು ಅರಣ್ಯದಲ್ಲಿ ಹೂತು ಹಾಕಿದ ಪತಿ! title=
ಗರ್ಭಿಣಿ ಪತ್ನಿ ಕೊಂದ ಕ್ರೂರ ಪತಿ!

ದಾವಣಗೆರೆ: ಗರ್ಭಿಣಿ ಪತ್ನಿಯ ಕತ್ತು ಹಿಸುಕಿದ ಕೊಲೆ ಮಾಡಿದ ಪಾಪಿ ಪತಿಯೊಬ್ಬ ಅರಣ್ಯದಲ್ಲಿ ಹೂತು ಹಾಕಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ಈ ಭಯಾನಕ ಘಟನೆ ನಡೆದಿದೆ.

ತನ್ನ ಪತ್ನಿಯನ್ನು ಕೊಂದಿದ್ದ ಪತಿ ಅರಣ್ಯದಲ್ಲಿ ಹೂತು ಹಾಕಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ. ಪತ್ನಿ ಮನೆಯವರ ಅನುಮಾನದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. 20 ವರ್ಷದ ರಶ್ಮಿ ಕೊಲೆಯಾದ ಗರ್ಭಿಣಿ ಪತ್ನಿ. 24 ವರ್ಷದ ಮನು ಪತ್ನಿಯನ್ನೆ ಕೊಲೆ ಮಾಡಿದ ಕ್ರೂರ ಪತಿ ಎಂದು ತಿಳಿದುಬಂದಿದೆ. ಐಗೂರಿನ ರಶ್ಮಿ ಹಾಗೂ ಮನು ಕಳೆದ ಏಪ್ರಿಲ್‍ನಲ್ಲಿ  ಮದುವೆಯಾಗಿದ್ದರು.

ಇದನ್ನೂ ಓದಿ: Mangaluru auto blast : ನಾಳೆ ಮಂಗಳೂರಿಗೆ ಗೃಹ ಸಚಿವರ ಭೇಟಿ, ಹಿರಿಯ ಅಧಿಕಾರಿಗಳ ಜೊತೆ ಸಭೆ

ವರದಕ್ಷಿಣೆ ಕಿರುಕುಳ ಹಾಗೂ ಶೀಲ ಶಂಕಿಸಿ ಮನು ರಶ್ಮಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಅ.10ರಂದು ರಶ್ಮಿಯನ್ನು ಕೊಂದಿದ್ದ ಮನು ನಾಪತ್ತೆ ದೂರು ದಾಖಲಿಸಿದ್ದ. ಮನು ಮನೆಯಲ್ಲಿನ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದ್ದರು. ಆದರೆ ಸಿಸಿ ಕ್ಯಾಮರಾದಲ್ಲಿ ರಶ್ಮಿ ಮನೆಯಿಂದ ಹೊರಗೆ ಹೋದ ದೃಶ್ಯವಿರಲಿಲ್ಲ. ಹೀಗಾಗಿ ಮನು ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು.

ಬಳಿಕ ರಶ್ಮಿ ತಂದೆ ಲೋಕೇಶಪ್ಪ ಅ.27ರಂದು ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ಬಯಲುಲಾಗಿದೆ. ತಾನೇ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವುದಾಗಿ ಮನು ತಪ್ಪೊಪ್ಪಿಕೊಂಡಿದ್ದಾನೆ. ‘ನನ್ನ ಪತ್ನಿ ಬೇರೆಯವರ ಜೊತೆ ಮೊಬೈಲ್ ಚಾಟ್ ಮಾಡಿದ್ದಕ್ಕೆ ಶೀಲ ಶಂಕಿಸಿ ಕೊಲೆ ಮಾಡಿದ್ದಾಗಿ’ ಹೇಳಿಕೆ ನೀಡಿದ್ದಾರೆ. ಚನ್ನಗಿರಿ ಪೊಲೀಸರಿಂದ ಹೂತಿದ್ದ ಶವ ಹೊರತೆಗೆದು ಶವ ಪರೀಕ್ಷೆ ನಡೆಸಲಾಗಿದೆ. ಮನು ವಿರುದ್ದ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Transgender Teachers: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿಕ್ಷಕಿಯರಾದ ತೃತೀಯ ಲಿಂಗಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News