ಏಟಿಗೆ ಎದಿರೇಟು ನೀಡುತ್ತಾ ಬಣ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಬಿಜೆಪಿಯೊಳಗೆ ಬಲ ಪ್ರದರ್ಶನ ಶುರುವಾಗಿದೆ. ಅತ್ತ ಯತ್ನಾಳ್ ಟೀಂ ವಕ್ಫ್ ವಿಚಾರ ಮುಂದಿಟ್ಟು ಹೋರಾಟ ನಡೆಸುತ್ತಾ ಹೈಕಮಾಂಡ್ ಅಂಗಳಕ್ಕೆ ಹೋಗಲು ಸಜ್ಜಾಗಿದ್ದರೆ, ಇತ್ತ ವಿಜಯೇಂದ್ರ ಬೆಂಬಲಿಗರು ಸಭೆ ಸೇರಿ ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಅದೇನ್ ದಾಖಲೆ ಇದೆ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಸಹ ಸವಾಲು ಹಾಕಿದ್ದಾರೆ.
ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲದ ಕಾರಣ, ಪಕ್ಷದ ಕೆಲವು ಮಾಜಿ ಸಚಿವರು ಹಾಗೂ ಮಾಜಿ ಶಾಕಸರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದರು.
BJPvsRSS: ಬಿಜೆಪಿಯ ‘ಫಟಿಂಗ ಪಂಚೆ‘ಯ ವಿರುದ್ಧ ಮಾತನಾಡಿದ್ದೇ ತಡ ರೇಣುಕಾಚಾರ್ಯರಿಗೆ 24 ಗಂಟೆಯೊಳಗೆ ನೋಟಿಸ್ ಜಾರಿಯಾಗಿದೆ. ಆದರೆ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು ಬಹಿರಂಗವಾಗಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ.
ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆನಾಯಕರೊಬ್ಬರು RSSನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ!ಬಿ.ಎಲ್.ಸಂತೋಷ್ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಂ.ಪಂ ಚುನಾವಣೆಗೆ ಸ್ಪರ್ದಿಸಿ ಗೆದ್ದು ತೋರಿಸಿ!ನಿಮ್ಮ ದಮ್ಮು ತಾಕತ್ತು ನಿರೂಪಿಸಿ! ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಸವಾಲು ಹಾಕಿದೆ.
ಡ್ಯಾಮೇಜ್ ಕಂಟ್ರೋಲ್ಗೆ ಇಂದು ಬಿಜೆಪಿ ಮಹತ್ವದ ಮೀಟಿಂಗ್ ಪಕ್ಷದ ವಿರುದ್ಧ ಮಾತಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ ಇಂದಿನ ಮೀಟಿಂಗ್ಗೆ ಬರಲು ಸೂಚಿಸಿರುವ ಶಿಸ್ತು ಸಮಿತಿ ಅಧ್ಯಕ್ಷರು
ಬಿ.ಎಲ್.ಸಂತೋಷ್ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಂಪಂ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಿ! ನಿಮ್ಮ ದಮ್ಮು ತಾಕತ್ತು ನಿರೂಪಿಸಿ! ಎಂದು ಕಾಂಗ್ರೆಸ್ ಸವಾಲು ಹಾಕಿದೆ.
BJP Disciplinary Committee: ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ವಿಚಾರವಾಗಿ ತಮ್ಮ ಮೇಲೆ ಯಾಕೆ ಶಿಸ್ತುಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿಯಲ್ಲಿ ಮಕ್ಕಳ ಅಪೇಕ್ಷೆ ಮೇರೆಗೆ ಕ್ರಿಕೆಟ್ ಆಟವಾಡಿ ಖುಷಿ ಪಟ್ಟರು. ಸದಾ ರಾಜಕೀಯ ಜಂಜಾಟದಲ್ಲಿಯೇ ಇರುವ ರೇಣುಕಾಚಾರ್ಯ ಊರುಗಳಿಗೆ ಭೇಟಿ ನೀಡುತ್ತಾರೆ.
ದೇಶದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಕಾರ್ಯಕರ್ತರ ಪಡೆ ಇದೆ ಅತ್ಯಂತ ದೊಡ್ಡದಿದೆ. ರಾಜ್ಯದಲ್ಲಿ ಬೊಮ್ಮಾಯಿ ಅವರ ನಾಯಕತ್ವ ಇದೆ ಎಂದು ಬೆಂಗಳೂರಲ್ಲಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ರು. ಲಕ್ಷ್ಮಣ ಸವದಿ ಅವರು ಸೋತು ಸುಣ್ಣ ಆಗಿದ್ರು. ಅಂತವರನ್ನ ಡಿಸಿಎಂ ಮಾಡಿ ಪರಿಷತ್ ಸದಸ್ಯರಾಗಿ ಮಾಡಿದ್ರು. ಉಪ ಮುಖ್ಯಮಂತ್ರಿ ಆದಮೇಲೆ ಜನರಿಗೆ ಸವದಿ ಗೊತ್ತಾಗಿದ್ದು. ಶೆಟ್ಟರ್ ಹಿರಿಯರು.. ವಿಪಕ್ಷ ನಾಯಕರಾಗಿ, ಸಿಎಂ ಆಗಿದ್ದರು. ವೀರಶೈವ ಲಿಂಗಾಯತರನ್ನ ಮುಂದಿನ ಸಿಎಂ ಆಗಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ರೇಣುಕಾಚಾರ್ಯ.
ಲಕ್ಷ್ಮಣ್ ಸವದಿ ಪಕ್ಷಾಂತರ ಕುರಿತು ಎಂ. ಪಿ. ರೇಣುಕಾಚಾರ್ಯ ಗುಡುಗಿದ್ದಾರೆ. ಪಕ್ಷ ತೊರೆದಿರುವ ಲಕ್ಷ್ಮಣ್ ಸವದಿ ಒಬ್ಬ ವಿಶ್ವಾಸಘಾತುಕ, ಬೆನ್ನಿಗೆ ಚೂರಿ ಹಾಕುವವನು, ಅಥಣಿಯಲ್ಲಿ ಲಕ್ಷ್ಮಣ ಸವದಿ ಗೆಲ್ಲಲಿಲ್ಲ, ಸೋತು ಸುಣ್ಣವಾದರು ಸಹ ಪಕ್ಷ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತ್ತು ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.