ಬೆಂಗಳೂರು:ರಾಜ್ಯ ಪಾಲರ ಭಾಷಣ ಬಗ್ಗೆ ಪ್ರಸ್ತಾಪ ಮಾಡಿದ ವಿರೋಧಪಕ್ಷದ ನಾಯಕ ಹಾಗೂ ಸಚಿವ ಮಾಧುಸ್ವಾಮಿ ಮದ್ಯೆ ಸ್ವಾರಸ್ಯ ಚರ್ಚೆ ನಡೆಯಿತು ವಿಧಾನಸಭೆಯಲ್ಲಿ ತೌಡು ಕುಟ್ಟುವ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂದು ಹೇಳಿದರು.
ಮೋದಿ ಬರ್ತಾರೆ ಅಂದ್ರೆ ಅವರಿಗೆ ಹೆದರಿಕೆ ಯಾಕೆ? ಮೋದಿ ಅವರು ಹಾಲಿಡೇ ಟ್ರಿಪ್ ಮಾಡುವರಲ್ಲ. ನಮ್ಮ ಕ್ಯಾಪ್ಟನ್ ಅವರು. 24*7 ಕೆಲಸ ಮಾಡುವವರು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಆರೋಪಕ್ಕೆ CT ರವಿ ಕಿಡಿಕಾರಿದ್ರು.
ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ತಿರುಗೇಟು. ಕುಮಾರಸ್ವಾಮಿ ಆರೋಗ್ಯದ ಕಡೆ ಗಮನ ಹರಿಸಲಿ. ಈಗ ಯಾರ್ ಬಗ್ಗೆ ಏನ್ ಹೇಳ್ತಾರೆ ಅಂತಾ ಗೊತ್ತಿಲ್ಲ. ಅವರಿಗೆ ಮನೆ ರಾಜಕಾರಣ ಟೆನ್ಷನ್ ಇರಬಹುದು ಎಂದು ಬೆಂಗಳೂರಿನಲ್ಲಿ HDK ವಿರುದ್ಧ ಸಿಟಿ ರವಿ ವ್ಯಂಗ್ಯ.
ʻಆ ದಿನಗಳʼ ಯಾವ ರೌಡಿಗಳು ನಮ್ಮ ಹತ್ರ ಇಲ್ಲ. ಬಿಜೆಪಿ ಕೊತ್ವಾಲ್ ಹಾಗೂ ಅವರ ಶಿಷ್ಯರನ್ನ ಸಾಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.. ಬೊಮ್ಮಾಯಿ ಅವರನ್ನ ರೌಡಿ ಅಂತ ಹೇಳಲು ಆಗಲ್ಲ ಎಂದಿದ್ದಾರೆ..
ಕೃತಿ ಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಫೇಮಸ್. 25 ವರ್ಷದ ಹಿಂದೆ ಗಿರೀಶ್ ಕಾರ್ನಾಡ್ ಬರೆದ ‘ಟಿಪ್ಪು ಕಂಡ ಕನಸು’ ನಾಟಕದ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ತುಂಬಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಹೆಂಡ ಕುಡಿದವರಿಗಿಂತಲೂ ಕಡೆಯಾಗಿ ಮಾತಾಡುವ ಸಿ.ಟಿ.ರವಿಯವರನ್ನು ಜನರು ಸುಮ್ಮನೆ O.T.ರವಿ ಎನ್ನುತ್ತಾರೆಯೇ? OT ಕುಡಿಯದೆ ರವಿಯವರ ಬಾಯಿಂದ ಇಂತಹ ಕೊಳಕು ಹೇಳಿಕೆಗಳು ಹೇಗೆ ಬರಲು ಸಾಧ್ಯವೆಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.
ಸಿ.ಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಬಗ್ಗೆ ಕಾಂಗ್ರೆಸ್ ಆರೋಪದಿಂದ ತಲೆ ಕೆಟ್ಟು ಕಳ್ಳಬಟ್ಟಿ ಕುಡಿದು ಮಾತಾನ್ನಾಡುತ್ತಾರೆ ಎಂಬ ಬಿಕೆ ಹರಿಪ್ರಸಾದ್ ಆರೋಪಕ್ಕೆ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಹೆಸರುಗಳನ್ನ ಬದಲಾಯಿಸಿ ಅವಹೇಳನ ಮಾಡುವುದು ಬಿಜೆಪಿಯ ಸಂಪ್ರದಾಯ. ಈ ಹಿಂದೆ ಪ್ರಧಾನಿ ಮೋದಿಯವರೇ, ಸಿದ್ರಾಮಯ್ಯನವರ ಹೆಸರು ಬದಲಾಯಿಸಿ ಹೇಳಿಕೆ ಕೊಟ್ಟಿದ್ರು. ಈಗ ಅವರ ಚೇಲಾಗಳು ಹೆಸರು ಬದಲಾಯಿಸುತ್ತಿದ್ದಾರೆ. ಸಿದ್ರಾಮಯ್ಯನವರಿಗೆ ಅವರ ತಂದೆ ತಾಯಿ ನಾಮಕರಣ ಮಾಡಿದಾರೆ. ಸಿದ್ದರಾಮಯ್ಯಗೆ ಹೆಸರಿಡಲು ಸಿ.ಟಿ ರವಿ ಯಾರು? ಮೊದಲು ಇವರ ಹೆಸರು ಏನು ಅನ್ನುವುದನ್ನು ತಿಳಿದುಕೊಳ್ಳಬೇಕು, ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕೆಂಡ ಕಾರಿದರು.
ಹಿಂದೂಗಳೆಲ್ಲ ಬಿಜೆಪಿ ಪರವಿಲ್ಲ, ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಅಸಾಧ್ಯ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಯಾಗಲಿದೆ ಅಂತಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಟಿ ರವಿ ವಿರುದ್ಧ ಟೀಕಾ ಪ್ರಹಾರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಎಂದು ಅವರು ಕಿಡಿ ಕಾರಿದ್ದಾರೆ.
ಇದು ಹಿಂದಿ ಹೇರುವ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ, ಕೀಳರಿಮೆ ತರುಪ ಪ್ರಯತ್ನ ಬ್ರಿಟೀಷ್ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡ್ತಾ ಇದಾರೆ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಜನಸ್ಪಂದನದಲ್ಲೇ ಬಿಜೆಪಿಯವ್ರಿಗೆ ಧಮ್ ತೋರಿಸೋಕೆ ಆಗ್ಲಿಲ್ಲ.. ಸಮಾವೇಶದಲ್ಲಿ ಜನ ಎದ್ದು ಹೋಗ್ತಿದ್ದರು ಎಂದು ಬಿಜೆಪಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಜನ ಬಿಜೆಪಿಯವ್ರ ಧಮ್ ನೋಡಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.