"ರಕ್ತ ಪರೀಕ್ಷೆ ಆಗಲಿ, ಮದ್ಯಪಾನ ಮಾಡಿರೋದು ಸಿಕ್ಕಿದ್ರೆ ರಾಜಕೀಯ ನಿವೃತ್ತಿ"

ಸಿ.ಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಬಗ್ಗೆ ಕಾಂಗ್ರೆಸ್ ಆರೋಪದಿಂದ ತಲೆ ಕೆಟ್ಟು ಕಳ್ಳಬಟ್ಟಿ ಕುಡಿದು ಮಾತಾನ್ನಾಡುತ್ತಾರೆ ಎಂಬ ಬಿಕೆ ಹರಿಪ್ರಸಾದ್ ಆರೋಪಕ್ಕೆ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ. 

Written by - Prashobh Devanahalli | Edited by - Chetana Devarmani | Last Updated : Dec 26, 2022, 12:16 PM IST
  • ಪ್ರತಿ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೀನಿ
  • ಲೋಕಾಯುಕ್ತ ಬಂದ್ ಮಾಡಿದೋರು ನನ್ನ ಪ್ರಶ್ನೆ ಮಾಡ್ತಾ ಇದ್ದಾರೆ
  • ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸಿ.ಟಿ.ರವಿ ಹೇಳಿಕೆ
"ರಕ್ತ ಪರೀಕ್ಷೆ ಆಗಲಿ, ಮದ್ಯಪಾನ ಮಾಡಿರೋದು ಸಿಕ್ಕಿದ್ರೆ ರಾಜಕೀಯ ನಿವೃತ್ತಿ" title=
ಸಿ.ಟಿ.ರವಿ

ಬೆಳಗಾವಿ : ಸಿ.ಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಬಗ್ಗೆ ಕಾಂಗ್ರೆಸ್ ಆರೋಪದಿಂದ ತಲೆ ಕೆಟ್ಟು ಕಳ್ಳಬಟ್ಟಿ ಕುಡಿದು ಮಾತಾನ್ನಾಡುತ್ತಾರೆ ಎಂಬ ಬಿಕೆ ಹರಿಪ್ರಸಾದ್ ಆರೋಪಕ್ಕೆ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ. ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅವರ ರಕ್ತದಲ್ಲಿ ಏನಾದ್ರು ಸಿಕ್ಕರೆ ಏನು? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಅಧಿವೇಶನಕ್ಕೂ ಮುನ್ನ ಮಾತಾನಾಡಿದ ಶಾಸಕ ಸಿ ಟಿ ರವಿ, ಪ್ರತಿ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೀನಿ.
ಲೋಕಾಯುಕ್ತ ಬಂದ್ ಮಾಡಿದೋರು ನನ್ನ ಪ್ರಶ್ನೆ ಮಾಡ್ತಾ ಇದ್ದಾರೆ. ನಾನು ಮಧ್ಯಮ ವರ್ಗದ ರೈತನ ಮಗ, ರಾಜಕೀಯಕ್ಕೆ ಬರೋದಕ್ಕೂ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೀನಿ. ಅನುಮಾನ ಇರೋರು ಲೋಕಾಯುಕ್ತಕ್ಕೆ ಹೋಗಲಿ. ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ, ಬೇನಾಮಿ ಆಸ್ತಿ ಮಾಡೋದಕ್ಕೆ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದರು. 

ಇದನ್ನೂ ಓದಿ : ಆರ್ ಅಶೋಕ್ -ಸುಧಾಕರ್ ನಡುವೆ ಮುನಿಸು ? ಓವರ್ ಆಕ್ಟಿಂಗ್ ಮಾಡಬಾರದು ಎಂದ ಕಂದಾಯ ಸಚಿವ .!

ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ಒಂದ್ಕಡೆ ಆಲೂ ಹಾಕಿ ಮತ್ತೊಂದು ಕಡೆ ಚಿನ್ನ ತೆಗೆಯೋರು ಅವ್ರು, ಅಕ್ರಮ ಆಸ್ತಿ ಇರೋದು ಧೃಢಪಡಿಸಲಿ.ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಅಲ್ಲ, ಗ್ಯಾಂಗ್ ಕಟ್ಟಿಕೊಂಡು ಓಡಾಡಿಲ್ಲ, ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದು ಚೆಕ್ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ಕೆಂಡಕಾರಿದರು.

ಇನ್ನು ಇದೇ ಸಂದರ್ಭದಲ್ಲಿ ಸಿ ಟಿ ರವಿ ದೈಹಿಕ ಸದೃಢ ಬಗ್ಗೆ ಮಾತಾನ್ನಾಡಿ ಅವರ್ಯಾರೇ ಬರಲಿ ನನ್ನ ಜೊತೆ ಕಾಂಪಿಟೇಶನ್ ಗೆ,ಬೆಳಗಾವಿ ತನಕ ಓಡಿ ತೋರಿಸ್ತೀನಿ.ಅವ್ರ ಕೈಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ.ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಅಂತಾ ಎಲ್ಲರಿಗೂ ಗೊತ್ತು ಎಂದು ಸವಾಲು ಹಾಕಿದರು.

ಇದನ್ನೂ ಓದಿ : ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ನಂತರ ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನವರು ಜನಾರ್ಧನ್ ರೆಡ್ಡಿ ಮೇಲೆ ಮರುಕ ಪ್ರದರ್ಶನ ಮಾಡುತ್ತಿದ್ದಾರೆ. ಬಿಜೆಪಿ ಸಿದ್ದಂತ ಪ್ರಕಾರ ನಾವು ಇರುತ್ತೀವಿ ಎಂದು ರೆಡ್ಡಿ ಜೊತೆ ಬಿಜೆಪಿ ಸಂಬಂಧ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಪರೋಕ್ಷವಾಗಿ ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News