ಬಾಲ ಬಿಚ್ಚೋರಿಗೆ ಬುಲ್ಡೋಜರ್ ದಾಳಿಯ ಎಚ್ಚರಿಕೆ ಕೊಟ್ಟ ಸಿಟಿ ರವಿ..!

ರಾಜ್ಯದಲ್ಲಿ ಬಾಲ ಬಿಚ್ಚೋರಿಕೆ ಬುಲ್ಡೋಜರ್ ಟ್ರೀಟ್‌ಮೆಂಟ್‌ ಕೋಡಬೇಕು ಎಂದು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Written by - Krishna N K | Last Updated : Sep 10, 2022, 07:13 PM IST
  • ಕೆಲವರು ರಾಜ್ಯಕ್ಕೆ ಕಾಲು ಇಟ್ಟರೆ ಮಟಾಸ್ ಲೆಗ್ ಇದ್ದಂಗೆ
  • ಕಾಂಗ್ರೆಸ್ ತುಕ್ಡೆ ಗ್ಯಾಂಗ್ ಬೆಂಬಲಿಸುತ್ತಿದೆ. ಬಾಲ ಬಿಚ್ಚೋರಿಗೆ ಬುಲ್ಡೋಜರ್ ಟ್ರೀಟ್‌ಮೆಂಟ್ ಕೊಡಬೇಕು.
  • ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿಟಿ ರವಿ ಹೇಳಿಕೆ
ಬಾಲ ಬಿಚ್ಚೋರಿಗೆ ಬುಲ್ಡೋಜರ್ ದಾಳಿಯ ಎಚ್ಚರಿಕೆ ಕೊಟ್ಟ ಸಿಟಿ ರವಿ..! title=

ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಬಾಲ ಬಿಚ್ಚೋರಿಕೆ ಬುಲ್ಡೋಜರ್ ಟ್ರೀಟ್‌ಮೆಂಟ್‌ ಕೋಡಬೇಕು ಎಂದು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ‌ನಡೆಸಿದರು. ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತವೊ ಆಗ ಕೊಡಿ ಬಿದ್ದು ಗಂಗೆ ಪೂಜೆ ಮಾಡುತ್ತೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯಕ್ಕೆ ಬರ ಬರುತ್ತದೆ. ಅದರಲ್ಲೂ ಕೆಲವರು ರಾಜ್ಯಕ್ಕೆ ಕಾಲು ಇಟ್ಟರೆ ಮಟಾಸ್ ಲೆಗ್ ಇದ್ದಂಗೆ ಎಂದು ಗುಡುಗಿದರು.

ಇದನ್ನೂ ಓದಿ: ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ : ಸಿಎಂ ಘೋಷಣೆ

ಇನ್ನು ಕಾಂಗ್ರೆಸ್ ತುಕ್ಡೆ ಗ್ಯಾಂಗ್ ಬೆಂಬಲಿಸುತ್ತಿದೆ. ಬಾಲ ಬಿಚ್ಚೋರಿಗೆ ಬುಲ್ಡೋಜರ್ ಟ್ರೀಟ್‌ಮೆಂಟ್ ಕೊಡಬೇಕು. ರಾಜ್ಯದಲ್ಲಿ ರಿಡೂ ಪಿತಾಮಹ ಯಾರು, ಸೋಲಾರ್ ಹಗರಣದ ಖದೀಮ ಯಾರು ಎಂದು ಎಲ್ಲರಿಗೂ ಗೊತ್ತಿದೆ. ಕೆಂಪಣ್ಣ ಆಯೋಗದ ವರದಿ ಬಹಿರಂಗ ಪಡಿಸಿದರೆ ಕಳ್ಳಯಾರು, ಸುಳ್ಳು ಯಾರು ಎಂದು ಸದ್ಯದಲ್ಲಿಯೇ ಉತ್ತರ ಸಿಗಲಿದೆ ಎಂದು ಸಿಟಿ ರವಿ ವಾಗ್ದಾಳಿ ‌ನಡೆಸಿದರು.

ಸಮಾವೇಶದಲ್ಲಿ ಕಾಂಗ್ರೆಸ್‌ ಮೇಲೆ ಕಮಲಪಾಳಯದ ವಾಕ್ಪ್ರಹಾರ ಬಹಳ ಜೋರಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾಂಗ್ರೆಸ್ ಭ್ರಷ್ಟಾಚಾರ ಅರೋಪ ಮಾಡುತ್ತೆ. ಆದ್ರೆ ಎಲ್ಲಾ ಭ್ರಷ್ಟಾಚಾರ ಮಾಡಿರೋದು ಅವರೇ ಅದಕ್ಕೆ ಇಂದು ಕೋರ್ಟ್‌ನಲ್ಲಿ ರಾಹುಲ್ ಗಾಂಧಿ‌ ಬಾ.. ಸೋನಿಯಾ ಗಾಂಧಿ ಬಾ.. ಡಿಕೆ ಬಾ.. ಅಂತ ಕೂಗುತ್ತಾರೆ ಎಂದು ಕಾಂಗ್ರೆಸ್ ಕುಟುಕಿದರು. ಇತ್ತ ಕಾಂಗ್ರೆಸ್‌ ಇದು ಜನಸ್ಪಂದನಾ ಸಮಾವೇಶ ಅಲ್ಲ ಬಿಜೆಪಿ ಭ್ರಷ್ಟೋತ್ಸವ ಎಂದು ಕೇಸರಿಪಡೆಯ ಮೇಲೆ ಆರೋಪಗಳ ಸುರಿಮಳೆಗೈದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News