ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತ ಮುತ್ತಲಿನ ರೈತರ (Farmers) ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶ ಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದು ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.
ಸಾಮಾನ್ಯವಾಗಿ ರೈತರು ತಮ್ಮ ಜಾಮೀನಿನ ಮೇಲೆ ತಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳಬಾರದು. ಪ್ರಾಣಿಗಳು ಬಂದು ಬೆಳೆ ಹಾನಿಗೊಳಿಸಬಾರದು ಎಂದು ಬಿದುರು ಗೊಂಬೆಗಳನ್ನು ನಿರ್ಮಿಸುತ್ತಾರೆ. ಆದರೀಗ ಟ್ರೆಂಡ್ ಬದಲಾಗಿದೆ.
ಅನ್ನದಾತರಿಗೆ ಬೆಳೆ ಬಂದರೆ ಒಂದು ಸಂಕಟ ಬೆಳೆ ಬಾರದಿದ್ದರೂ ಒಂದು ಸಂಕಟ. ಈಗ ದಟ್ಟವಾದ ಬರಗಾಲ ಬಿದ್ದಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ಬೆಳೆದ ಬೆಳೆಗಳಿಗೆ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೆಳೆಗೆ ಖದೀಮರು ಬಿಟ್ಟು ಬಿಡದೇ ಕಾಡತಾ ಇದ್ದಾರೆ.
Mansoon Crop: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಯರಿನಾರಯಣಪುರ ಸೇರಿದಂತೆ ಬಹುತೇಕ ಹಳ್ಳಿಗರ ಜಮೀನಿಗೆ ಚಿಗರಿ ಹಾಡುಹಗಲೇ ಹಸಿವನ್ನು ತಣಿಸಿಕೊಳ್ಳಲು ಅನ್ನದಾತನ ಬೆಳೆ ತಿನ್ನುತ್ತಿವೆ.
ಮಂಡ್ಯದಲ್ಲೂ ನೀರಾವರಿ ಇಲಾಖೆಯ ಅವಾಂತರ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಕಷ್ಟಕ್ಕೀಡಾದ ರೈತನ ಬದುಕು. ನಾಲೆಯ ಗೇಟ್ ಬಂದ್ ಆಗಿ ಜಮೀನಿಗೆ ನುಗ್ಗಿದ ನೀರು. ನೀರು ನುಗ್ಗಿದ ಪರಿಣಾಮ ರೈತ ಕಷ್ಟಪಟ್ಟು ಬೆಳೆದ ಬೆಳೆ ನಷ್ಟ.
ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ ರೈತಾಪಿ ವರ್ಗಕ್ಕೆ ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಸಾಲಸೋಲ ಮಾಡಿ ರೈತರು ಬೆಳೆ ಬೆಳೆದಿದ್ದು, ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಯಾದಗಿರಿ ರೈತರ ಸ್ಥಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.