ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಎಲೆಕ್ಷನ್ ವೇಳೆ ಕರ್ನಾಟಕ ಸರ್ಕಾರದ ಮೇಲೆ ಮಾಡಿರೋ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.. ಮೋದಿ ಮಾಡಿರೋ ಆರೋಪಕ್ಕೆ ಸಾಬೀತು ಮಾಡಲಿ ಅಂತಾ ಸವಾಲೆಸೆದಿದ್ದಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ಮಾಡಿರೋ ಆರೋಪ ಏನು..? ಕಾಂಗ್ರೆಸ್ ನಾಯಕರು ಕೊಟ್ಟಿರೋ ತಿರುಗೇಟೇನು.? ಇಲ್ಲಿದೆ ನೋಡಿ..
ಬಹಿರಂಗವಾಗಿ ಸಿಎಂ ಕುರ್ಚಿ ವಿಚಾರ ಚರ್ಚೆ ಹಿನ್ನೆಲೆ
ಹೈಕಮಾಂಡ್ ಅಂಗಳ ತಲುಪಿದ ಸಿಎಂ ಕುರ್ಚಿ ಕಿತ್ತಾಟ
ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಹಿರಿಯರು
ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ
ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.
Ram Mandir Inauguration Invitation: ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ. ನಿಮ್ಮ ಮನಸಿನಲ್ಲಿದ್ದ ರಾಮ ವಿರೋಧ, ಹಿಂದು ವಿರೋಧ ಈಗ ಮತ್ತೆ ಬಹಿರಂಗವಾಗಿದೆ’ ಎಂದು ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bharat vs India: ಅಸಲಿಗೆ ಭಾರತ ಎಂಬ ಹೆಸರು ನಿನ್ನೆ ಮೊನ್ನೆಯದ್ದಲ್ಲ, ಕಾಂಗ್ರೆಸ್ಸಿಗರ ನಾಯಕ ನೆಹರೂ ಅವರೇ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ, ಸಂವಿಧಾನ ರಚನೆ ಸಂದರ್ಭದಲ್ಲಿ ಭಾರತ, ಇಂಡಿಯಾ, ಹಿಂದುಸ್ತಾನ್ ಹೆಸರುಗಳನ್ನು ಪ್ರಸ್ತಾಪಿಸಿ, ಕೊನೆಗೆ ಭಾರತ ಹಾಗೂ ಇಂಡಿಯಾ ಹೆಸರನ್ನು ಉಳಿಸಿಕೊಳ್ಳಲಾಗಿದೆ ಎಂದು ನುಡಿದಿದ್ದಾರೆ.
I.N.D.I.Allianceನಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ನಾಯಕರು, ಹೊರ ಜಗತ್ತಿಗೆ ಪರಿಚಯವಾಗಿದ್ದೇ, ಅವರುಗಳ ಹಿಂದೂ ವಿರೋಧಿ ಮನಸ್ಥಿತಿಯಿಂದ ಹೊರತು ಮತ್ತ್ಯಾವ ಘನಂದಾರಿ ಕೆಲಸದಿಂದಲ್ಲ ಎಂದು ಬಿಜೆಪಿ ಟೀಕಿಸಿದೆ.
Rahul Gandhi Disqualification : 2024ರಲ್ಲಿ ರಾಹುಲ್ಗೆ ಅನುಕೂಲವಾಗುವಂತಹ ವಾತಾವರಣ ದೇಶಾದ್ಯಂತ ನಿರ್ಮಾಣವಾಗಬೇಕು. ಕಾನೂನಾತ್ಮಕ ಹೋರಾಟದಲ್ಲಿ ಹಿಂದೆ ಸರಿದಿರುವ ಕಾಂಗ್ರೆಸ್ ಈಗ ರಾಜಕೀಯದಲ್ಲಿ ಛಾಪು ಮೂಡಿಸಲು ಯತ್ನಿಸುತ್ತಿದೆ. ಆದರೆ ಸಂಕಲ್ಪ ಸತ್ಯಾಗ್ರಹದಿಂದ ರಾಹುಲ್ ಗಾಂಧಿಗೆ ಸಂಜೀವನಿ ಸಿಗುತ್ತಾ? ಕಾಂಗ್ರೆಸ್ನ ಸತ್ಯಾಗ್ರಹ ಒಂದೇ ಒಂದು ಗುರಿಯನ್ನು ಹೊಂದಿದೆ, ಅದು 2024 ರಲ್ಲಿ ರಾಹುಲ್ಗೆ ಬೆಂಬಲವನ್ನು ಗಳಿಸುವುದು ಮತ್ತು ದೇಶದದಲ್ಲಿ ಕಣ್ಮರೆಯಾಗುತ್ತಿರುವ ಕಾಂಗ್ರೆಸ್ಗೆ ಪುನಶ್ಚೇತನ ನೀಡುವುದುದಾಗಿದೆ.
ವಿಜಯನಗರದ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟ. ಏಕಾಏಕಿ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು. ಹೂವಿನಹಡಗಲಿಯಲ್ಲಿ ಮೂವರು ಮುಖಂಡರು ರಾಜೀನಾಮೆ. ಡಿ.ಕೆ.ಶಿವಕುಮಾರ್ಗೆ ರಾಜೀನಾಮೆ ಸಲ್ಲಿಸಿದ ಮುಖಂಡರು.
ಬಾಗಲಕೋಟೆಯ ಕಲಾದಗಿ ಗ್ರಾಮದಲ್ಲಿ ಇಂದು ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ 2ನೇ ಹಂತದ ಯಾತ್ರೆ ನಡೆಯಲಿದೆ.. ಗುರುಲಿಂಗೇಶ್ವರ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ..
ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಪ್ರತ್ಯೇಕ ಬಸ್ ಯಾತ್ರೆ. ಉತ್ತರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸ್ ಯಾತ್ರೆ. ದಕ್ಷಿಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಸ್ ಯಾತ್ರೆ. ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಸ್ಥಾನದಿಂದ ಡಿಕೆಶಿ ಯಾತ್ರೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದು ಯಾತ್ರೆ.
ಇಂದು ಹಳೇ ಮೈಸೂರಿನ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ.ಪರಿವಾರವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದ ಪಕ್ಷಕ್ಕೆ ಇವರೆಲ್ಲ ಬಂದಿದ್ದಾರೆ.ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.ಐದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ನಿರಾಕರಿಸಿದ್ರು ಜನ , ಅನೈತಿಕ ಸಂಬಂಧದಿಂದ ಸರ್ಕಾರ ರಚಿಸಿದ್ರು ಕಾಂಗ್ರೆಸ್-ಜೆಡಿಎಸ್.ಈ ಅನೈತಿಕ ಸರ್ಕಾರ ಜನರಿಗೆ ಇಷ್ಟ ಆಗಲಿಲ್ಲ,ಮೊದಲ ಬಾರಿಗೆ ಆಡಳಿತ ಪಕ್ಷಗಳ 17 ಜನ ವಿರೋಧ ಪಕ್ಷ ಸೇರಿ ವಿರೋಧ ಪಕ್ಷವನ್ನು ಅಧಿಕಾರಕ್ಕೆ ತಂದ್ರು.ಕಾಂಗ್ರೆಸ್ನವರ ಬಸ್ ಹೊರಟಿದೆ, ಹೋಗ್ತಾಹೋಗ್ತಾ ಅದರ ಬ್ರೇಕ್ ಫೇಲ್ ಆಗುತ್ತೆ.
ವಿಧಾನಸಭಾ ಚುನಾವಣೆಗೆ ಇನ್ನೇನು 3 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದೆ. ಅದರ ಭಾಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ನಾಯಕರು ನೇರವಾಗಿ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಳಿಕ ಬಸವೇಶ್ವರ ವೃತ್ತದಿಂದ ತಾಲೂಕ ಕ್ರೀಡಾಂಗಣದವರೆಗೂ ರೋಡ್ ಶೋ ನಡೆಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.