ಕಾಂಗ್ರೆಸ್‌ಗೆ “ಭಾರತ”ದ ಮೇಲೆ ಈ ಪರಿ ದ್ವೇಷವೇಕೆ..?: ಬಿಜೆಪಿ ಆಕ್ರೋಶ

Bharat vs India: ಅಸಲಿಗೆ ಭಾರತ ಎಂಬ ಹೆಸರು ನಿನ್ನೆ ಮೊನ್ನೆಯದ್ದಲ್ಲ, ಕಾಂಗ್ರೆಸ್ಸಿಗರ ನಾಯಕ ನೆಹರೂ ಅವರೇ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ, ಸಂವಿಧಾನ ರಚನೆ ಸಂದರ್ಭದಲ್ಲಿ ಭಾರತ, ಇಂಡಿಯಾ, ಹಿಂದುಸ್ತಾನ್ ಹೆಸರುಗಳನ್ನು ಪ್ರಸ್ತಾಪಿಸಿ, ಕೊನೆಗೆ ಭಾರತ ಹಾಗೂ ಇಂಡಿಯಾ ಹೆಸರನ್ನು ಉಳಿಸಿಕೊಳ್ಳಲಾಗಿದೆ ಎಂದು ನುಡಿದಿದ್ದಾರೆ.

Written by - Puttaraj K Alur | Last Updated : Sep 6, 2023, 06:07 PM IST
  • ಕಾಂಗ್ರೆಸ್‌ ಭಾರತ ಎಂಬ ಹೆಸರಿನ ಬಳಕೆಗೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ
  • ಮೊದಲಿನಿಂದಲೂ ಭಾರತದ ವಿರುದ್ಧ ಧ್ವನಿ ಎತ್ತುವವರ ಪರ ಕಾಂಗ್ರೆಸ್‌ಗೆ ಪ್ರೀತಿ ಹೆಚ್ಚು
  • ಕಾಂಗ್ರೆಸ್‌ನವರಿಗೆ ಗಾಂಧಿ ಕುಟುಂಬದ ಸದಸ್ಯರುಗಳಿಗೆ ನೀಡಲು “ಭಾರತ ರತ್ನ” ಬೇಕು, ಆದರೇ ಭಾರತ ಬೇಡ..!
ಕಾಂಗ್ರೆಸ್‌ಗೆ “ಭಾರತ”ದ ಮೇಲೆ ಈ ಪರಿ ದ್ವೇಷವೇಕೆ..?: ಬಿಜೆಪಿ ಆಕ್ರೋಶ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳ ಸಾಧನೆಗಾಗಿ ಭಾರತದ ಅಸ್ಮಿತೆಯನ್ನು ಬಲಿ ಕೊಡಲು ಕಾಂಗ್ರೆಸ್ ಸದಾ ಸಿದ್ಧವಾಗಿರುತ್ತದೆ ಎಂದು ಬಿಜೆಪಿ ಟೀಕಿಸಿದೆ. ಭಾರತ್ vs ಇಂಡಿಯಾ ವಿವಾದ ವಿಚಾರವಾಗಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘ದೇಶದ ಹೆಮ್ಮೆಯ ಸೈನಿಕರು "ಬೋಲೋ ಭಾರತ್ ಮಾತಾ ಕೀ ಜೈ" ಎಂದರೇ, ಅದು ಅಸಂವಿಧಾನಿಕ ಪದ, ಅದನ್ನು ಹೇಳಬಾರದೆಂಬ ಉದ್ಧಟತನ ಕಾಂಗ್ರೆಸ್‌ನವರದ್ದಾಗಿರುತ್ತದೆ. “ಭಾರತ್ ಜೋಡೋ” ಹೆಸರಿನಲ್ಲಿ ದೇಶಾದ್ಯಂತ ವಾಕಿಂಗ್ ಮಾಡಿ ಮಜಾ ಮಾಡಿದ್ದ ಕಾಂಗ್ರೆಸ್‌ನವರಿಗೆ ಭಾರತ ಹಾಗೂ ಭಾರತೀಯರೆಂದರೆ ಅಲರ್ಜಿ. ಭಾರತ ಎಂಬ ಹೆಸರನ್ನು ಬಳಸಿದ್ದಕ್ಕೆ ನಖಶಿಖಾಂತ ಉರಿದುಕೊಂಡು ಅದು ಅಪರಾಧ ಎಂಬಂತೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಕುಟುಕಿದೆ.

ಇದನ್ನೂ ಓದಿ: ವಿವಿಧ ಧರ್ಮಗಳಲ್ಲಿ ʼದಯವೇ ಧರ್ಮದ ಮೂಲʼ ಎಂದಿದ್ದಾರೆ : ಸಿಎಂ ಸಿದ್ದರಾಮಯ್ಯ

‘ಅಸಲಿಗೆ ಭಾರತ ಎಂಬ ಹೆಸರು ನಿನ್ನೆ ಮೊನ್ನೆಯದ್ದಲ್ಲ, ಕಾಂಗ್ರೆಸ್ಸಿಗರ ನಾಯಕ ನೆಹರೂ ಅವರೇ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ, ಸಂವಿಧಾನ ರಚನೆ ಸಂದರ್ಭದಲ್ಲಿ ಭಾರತ, ಇಂಡಿಯಾ, ಹಿಂದುಸ್ತಾನ್ ಹೆಸರುಗಳನ್ನು ಪ್ರಸ್ತಾಪಿಸಿ, ಕೊನೆಗೆ ಭಾರತ ಹಾಗೂ ಇಂಡಿಯಾ ಹೆಸರನ್ನು ಉಳಿಸಿಕೊಳ್ಳಲಾಗಿದೆ ಎಂದು ನುಡಿದಿದ್ದಾರೆ. ಭಾರತದ ರಾಷ್ಟ್ರಪತಿ, ಭಾರತದ ಪ್ರಧಾನಮಂತ್ರಿ , ಭಾರತ ಸರ್ಕಾರ ಎಂಬ ವ್ಯವಸ್ಥೆ ದಶಕಗಳಿಂದಲೂ ಬಳಕೆಯಲ್ಲಿದೆ. ಇನ್ನು ಭಾರತದ ಸಂವಿಧಾನದಲ್ಲಿಯೂ ಸಹ ಭಾರತ ಹಾಗೂ ಇಂಡಿಯಾ ಎಂಬ ಎರಡೂ ಹೆಸರುಗಳು ಬಳಕೆಯಲ್ಲಿವೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಇದಲ್ಲದೇ ಭಾರತದ ಪುರಾತನ ಸಾಹಿತ್ಯ, ವೇದ, ಉಪನಿಷತ್‌ ಪುರಾಣಗಳಲ್ಲಿರುವುದು ಸಹ ಭಾರತವೇ. ಭಾರತ ಎಂಬ ಹೆಸರಿಗೆ ಇಷ್ಟೊಂದು ಮಹತ್ವವಿದ್ದರೂ, ಕಾಂಗ್ರೆಸ್‌ ಭಾರತ ಎಂಬ ಹೆಸರಿನ ಬಳಕೆಗೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಕಾಂಗ್ರೆಸ್‌ಗೆ “ಭಾರತ”ದ  ಮೇಲೆ ಈ ಪರಿ ದ್ವೇಷವೇಕೆ…? ಸದಾ ವಸಾಹತುಶಾಹಿ ಪರಂಪರೆಯನ್ನು ಮತ್ತು ಗುಲಾಮಗಿರಿಯನ್ನು ಪೋಷಿಸಿಕೊಂಡು ಬಂದಿರುವುದೇ ಕಾಂಗ್ರೆಸ್‌ನ ಸಾಧನೆ. ಬ್ರಿಟಿಷರು ಹಾಕಿ ಕೊಟ್ಟ ಹಾದಿಯಲ್ಲೇ ಮುಂದುವರಿಯಬೇಕೆಂಬುದು ಕಾಂಗ್ರೆಸ್‍ನ ಮನಸ್ಥಿತಿಯಾಗಿದೇ ಹೊರತು, ಸ್ವಾತಂತ್ರ ಪಡೆದ ಭಾರತೀಯನಾಗಿ ಅದು ಎಂದಿಗೂ ಯೋಚಿಸುವುದಿಲ್ಲ."I am the last Englishman to rule in India’’ ಎಂಬ ನೆಹರೂ ಹೇಳಿಕೆಯನ್ನೇ ಕಾಂಗ್ರೆಸ್‌ ತನ್ನ ವೇದವಾಕ್ಯವನ್ನಾಗಿಸಿಕೊಂಡಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಹೆಬ್ಬುಲಿ ಕಟಿಂಗ್ ಮಾಡ್ಬೇಡಿ: ಸವಿತಾ ಸಮಾಜಕ್ಕೆ ಪತ್ರ ಬರೆದ ಶಿಕ್ಷಕ

‘ಭಾರತ್‌ ತೇರೆ ತುಕ್ಡೆ ಹೊಂಗೇ” ಎಂದಿದ್ದ ಕನ್ಹಯ್ಯಾ ಕುಮಾರ್‌ರಂತವರನ್ನು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌ ಪಕ್ಷ ತನ್ನ ವಿದ್ಯಾರ್ಥಿ ಘಟಕದ ಉಸ್ತುವಾರಿಯನ್ನಾಗಿ ನೇಮಿಸುತ್ತದೆ. ಮೊದಲಿನಿಂದಲೂ ಭಾರತದ ಪರ ಧ್ವನಿ ಎತ್ತುವವರಿಗಿಂತಲೂ, ಭಾರತದ ವಿರುದ್ಧ ಧ್ವನಿ ಎತ್ತುವವರ ಪರ ಕಾಂಗ್ರೆಸ್‌ಗೆ ಪ್ರೀತಿ ಹೆಚ್ಚು. ಕಾಂಗ್ರೆಸ್‌ನವರಿಗೆ ತಮ್ಮ ಗಾಂಧಿ ಕುಟುಂಬದ ಸದಸ್ಯರುಗಳಿಗೆ ನೀಡಲು “ಭಾರತ ರತ್ನ” ಬೇಕು, ಆದರೇ ಭಾರತ ಬೇಡ..!!!’ ಎಂದು ಬಿಜೆಪಿ ಟೀಕಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News