ಇಂದು ಸಚಿವ ಸಂಪುಟದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ ಪಂಚ ಗ್ಯಾರಂಟಿಗಳ ನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.ಈ ಕುರಿತಾಗಿ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಗ್ಯಾರಂಟಿ ವಿಚಾರವಾಗಿ ಕರೆದ ಸಂಪುಟದ ಸಭೆಯಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಿದೆ.
ʻಗ್ಯಾರಂಟಿʼ ಭರವಸೆ ಈಡೇರಿಸೋದು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.. ʻಗ್ಯಾರಂಟಿʼಗೆ ಹಣ ಹೊಂದಿಸೋದು ಹೇಗೆ..? ಅನ್ನೋದಕ್ಕೆ ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ದಾರಿಗಳಿವೆ..
ಚುನಾವಣೆಗೆ ಮೊದಲು ನಿನಗೂ ಫ್ರೀ, ನನಗೂ ಫ್ರೀ ಅಂದ್ರು. ಉಚಿತ, ನಿಶ್ಚಿತ, ಖಂಡಿತ, ಖಚಿತಕ್ಕೆ ಈಗ ಷರತ್ತು ಬಂದಿದೆ ಎಂದು ಕಾಂಗ್ರೆಸ್ನ ಐದು ಗ್ಯಾರಂಟಿ ಬಗ್ಗೆ ಮಾಜಿ ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಜನರಿಗೆ ದೊಡ್ಡ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹಾವೇರಿಯಲ್ಲಿ ಬಿ.ಸಿ.ಪಾಟೀಲ್ ಆಕ್ರೋಶದ ಮಾತುಗಳನ್ನಾಡಿದ್ದಾರೆ.
5 ಗ್ಯಾರಂಟಿಗಳಲ್ಲಿ ಎರಡು ಮೂರು ಜಾರಿ ಮಾಡಿದ್ರೆ ಸಾಕು. ಕಾಂಗ್ರೆಸ್ ಗ್ಯಾರಂಟಿ ಲೋಕಸಭಾ ಚುನಾವಣೆಗೆ ಸಹಾಯವಾಗಲಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನ ಇಲ್ವಾ? 13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಎಷ್ಟು ವಿದ್ಯುತ್ ಇದೇ? ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಷ್ಟು ಖರ್ಚು ಎಂದು ಗೊತ್ತಿರಲ್ವಾ?
ಹಳ್ಳಿಗಳಲ್ಲಿ ನಡೆದ ಹಲ್ಲೆಯ ಘಟನೆಗಳು ನಮ್ಮ ಮೇಲೆ ಎಲ್ಲಿ ನಡೆಯುತ್ತೋ ಅನ್ನೋ ಭಯದಲ್ಲಿಯೇ ಬೆಸ್ಕಾಂ ಸಿಬ್ಬಂದಿಗಳು ಬಿಲ್ ಕಲೆಕ್ಟ್ ಮಾಡ್ತಿದ್ದಾರೆ. ಕೆಲವರು ಬೆಸ್ಕಾಂ ಸಿಬ್ಬಂಧಿಗಳಿಗೆ ಸಹಕರಿಸಿದ್ರೆ, ಇನ್ನೂ ಕೆಲವರು ಅನಗತ್ಯವಾಗಿ ಜಗಳ ತೆಗೆಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.