ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಐದು ಗ್ಯಾರಂಟಿ ನೀಡಿದೆ, ಆ ಪೈಕಿ 200 ಯೂನಿಟ್ ವಿದ್ಯುತ್ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಹೇಳಿ ಈವರೆಗೆ ಜಾರಿ ಮಾಡದೆ ಇರುವುದಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೆಂಡ ಕಾರಿ ಜನರಿಗೆ ವಿದ್ಯುತ್ ಬಿಲ್ ಕಟ್ಟಬೇಡಿ ಹಾಗೂ ಮಹಿಳೆಯರು ಟಿಕೆಟ್ ಪಡೆಯುವುದಕ್ಕೆ ಹಣ ನೀಡಬೇಡಿ ಎಂದು ಕರೆ ಕೊಟ್ಟಿವೆ.
ಬಿಜೆಪಿ ಹಾಗೂ ಜೆಡಿಎಸ್ ಅವರವರ ಪಕ್ಷ ಕಚೇರಿಯಲ್ಲಿ ಸುದ್ದಿ ಗೋಷ್ಟಿ ನಡೆಸಿ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡಿ ಅಧಿಕ್ಕಾರಕ್ಕೆ ಬಂದ ಮೇಲೆ ಮೋಸ ಮಾಡಿದೆ ಎಂದು ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿವೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರುಗಳಾದ ಗೋವಿಂದ್ ಕಾರಜೋಳ ಹಾಗೂ ಆರ್ ಅಶೋಕ್, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪಾಸ್ ಎಂದು ಭರವಸೆ ನೀಡಿ, ಈಗ ದಾರಿಯಲ್ಲಿ ಹೋಗುವವರಿಗೆಲ್ಲ ಉಚಿತ ಬಸ್ ಪಾಸ್ ನೀಡಲು ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳ್ತಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ- ಕಾಂಗ್ರೆಸ್ ಗ್ಯಾರಂಟಿ ಎಫೆಕ್ಟ್: ಫೀಲ್ಡ್ ಗೆ ಹೋಗಲ್ಲ ಅಂತಿದ್ದಾರೆ ಮೀಟರ್ ರೀಡರ್ಸ್
ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನ ಇಲ್ವಾ? 13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಎಷ್ಟು ವಿದ್ಯುತ್ ಇದೇ? ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಷ್ಟು ಖರ್ಚು ಎಂದು ಗೊತ್ತಿರಲ್ವಾ? ನಿಮಗೆ ಮಾಹಿತಿ ಇಲ್ಲಾ ಅಂದ್ರೆ ಜನರು ನಗಲ್ವಾ? ಎಂದು ಪ್ರಶ್ನಿಸಿದರು.
200 ಯುನಿಟ್ ವಿದ್ಯುತ್ ಗೆ ದುಡ್ಡು ಕಟ್ಡಬೇಡಿ, ಬಸ್ ಗಳಲ್ಲಿ ಮಹಿಳೆಯರು ಟಿಕೆಟ್ ತೆಗೆದುಕೊಳ್ಳಬೇಡಿ- ಎಚ್‌ಡಿಕೆ:
ಕಾಂಗ್ರೆಸ್ ಗ್ಯಾರಂಟಿಗಳ ವಿಚಾರವಾಗಿ ಮಾತನಾಡಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, 200 ಯುನಿಟ್ ವಿದ್ಯುತ್ ಗೆ ದುಡ್ಡು ಕಟ್ಡಬೇಡಿ, ಬಸ್ ಗಳಲ್ಲಿ ಮಹಿಳೆಯರು ಯಾರು ಟಿಕೆಟ್ ತೆಗೆದುಕೊಳ್ಳಬೇಡಿ. ದುಡ್ಡು ಕೊಡಬೇಡಿ ಎಂದು ಜನರಿಗೆ ಕರೆ ನೀಡಿದರು.
ಇದನ್ನೂ ಓದಿ- Karnataka Cabinet Expansion: ನಾಳೆಯೇ 20 ಕ್ಕೂ ಹೆಚ್ಚು ಸಚಿವರ ಪ್ರಮಾಣ ವಚನ ಸ್ವೀಕಾರ!?
ವಿದ್ಯುತ್ ಉಚಿತವಾಗಿ ನೀಡಲು 24 ಸಾವಿರ ಕೋಟಿ ಬೇಕು ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವಿಷಯದಲ್ಲಿ ನಿಜಕ್ಕೂ ಬೀದಿಗಿಳಿಯುತ್ತೇವೆ. ನನ್ನ ಪಕ್ಷ ಮುಂದಿನ 5 ವರ್ಷ ವಿಷಯಾಧಾರಿತ ಹೋರಾಟ ಮಾಡ್ತೀವಿ. ಹಣದ ಬಲದಿಂದ ಚುನಾವಣಾ ಆಗದಂತೆ ಬದಲಾವಣೆ ತರ್ತೀವಿ. ಮತದಾರರಿಗೆ ಮನವಿ ಮಾಡ್ತೀವಿ, ದುಡ್ಡು ಕೊಟ್ಡ ಮೇಲೆ ಓಟು ಹಾಕ್ತೀವಿ ಅನ್ನೋ ಜನರಿದ್ದಾರೆ. ಒಪ್ಪತ್ತಿನ ಕೂಳಿಗೆ, ಬದುಕನ್ನು ಹಾಳು ಮಾಡಿಕೊಳ್ತಿದ್ದೀರಾ. ಜನರು ಈ ಬಗ್ಗೆ ಯೋಚನೆ ಮಾಡಬೇಕಿದೆ. 5 ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡೋಕೆ ಆಗಲ್ಲ, ಎಂದರು.
ಒಟ್ಟಾರೆ ಪಕ್ಷ ಸಂಘಟನೆ ಮಾಡುವುದಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಹಾಗೂ ಬಿಜೆಪಿ ಕಾಂಗ್ರೆಸ್ ನ ಗ್ಯಾರೆಂಟಿ ಬಗ್ಗೆ ಹೋರಾಟ ಮಾಡಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.