ಟಿಕೆಟ್ ಘೋಷಣೆ ಬಳಿಕ ಅಸಮಾಧಾನ ಶಮನಕ್ಕೆ ವಿಶೇಷ ತಂಡ. ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿರುವ ಹೈಕಮಾಂಡ್. ಅಸಮಾಧಾನ, ಬಂಡಾಯವೇಳದಂತೆ ಜಾಗ್ರತೆ ವಹಿಸಲು ಸೂಚನೆ. ವಿಶೇಷ ಟೀಂವೊಂದನ್ನ ಸೆಟ್ ಮಾಡಿ ಎಂದಿರೋ ಹೈಕಮಾಂಡ್. ಬಿಜೆಪಿ ಸರಣಿ ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಮುಖ ಪ್ರಸ್ತಾಪ.
ಕಾಂಗ್ರೆಸ್ ಎರಡನೇ ಪಟ್ಟಿಗೆ ಕೌಂಟ್ಡೌನ್ ಶುರು. ಇಂದು ಬೆಳಗ್ಗೆ 11ಗಂಟೆ ಒಳಗೆ 2ನೇ ಪಟ್ಟಿ ರಿಲೀಸ್ ಸಾಧ್ಯತೆ. ದೆಹಲಿಯಲ್ಲೇ ಠಿಕಾಣಿ ಹೂಡಿರುವ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ಗೆ ʻಕೈʼ ಸರ್ಕಸ್. ಇಂದು ಮತ್ತೊಂದು ಸುತ್ತಿನ ಸಭೆ ಮಾಡಿ ಪಟ್ಟಿ ಫೈನಲ್.
ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಮುಗಿದಿದೆ. ಟಿಕೆಟ್ ಸಂಬಂಧ ಸ್ಕ್ರೀನಿಂಗ್ ಕಮಿಟಿ, ಸಿಇಸಿ ಸಭೆ ಆಗಿದೆ. ಮಧ್ಯಾಹ್ನ ಮತ್ತೊಂದು ಸಭೆ ನಡೆಸಿ ಚರ್ಚೆ ಮಾಡುತ್ತೇವೆ ಎಂದು ದೆಹಲಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ರು.
Assembly Election Congress Second List: ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುವ ಮೂಲಕ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಕೈ ಟಿಕೆಟ್ ಫೈನಲ್ ಆದಂತಾಗಿದೆ. ಮೊದಲ ಪಟ್ಟಿಯಲ್ಲಿ ಚಾಮರಾಜನಗರದಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರುನಿಂದ ಹಾಲಿ ಶಾಸಕ ಆರ್.ನರೇಂದ್ರ ಹಾಗೂ ಗುಂಡ್ಲುಪೇಟೆಯಿಂದ ಗಣೇಶ್ ಪ್ರಸಾದ್ ಅವರನ್ನು ಘೋಷಣೆ ಮಾಡಲಾಗಿತ್ತು.
ದೇವರು ಕಷ್ಟನೂ ಕೊಡೋದಿಲ್ಲ, ಸುಖವನ್ನು ಕೊಡೊದಿಲ್ಲ, ಆದರೆ ಅವಕಾಶ ಕೊಡ್ತಾನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, 4 ಗ್ಯಾರಂಟಿಗಳನ್ನು ನಾವು ರಾಜ್ಯದ ಜನತೆಗೆ ಕೊಟ್ಟಿದ್ದೇವೆ ಎಂದು ಡಿಶಿಕೆ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.