ದಾಖಲೆಗಳನ್ನು ಮುರಿದ ಪ್ರಿಯಾಂಕಾ ಗಾಂಧಿ.. ವಯನಾಡಿನಲ್ಲಿ ಇಂದಿರಮ್ಮನ ಮೊಮ್ಮಗಳಿಗೆ ಪಟ್ಟಾಭಿಷೇಕ!!

KERALA BYPOLLS 2024: ಕೇರಳ ರಾಜ್ಯದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಚಣಾವಣೆ ನಡೆದಿತ್ತು, ಇದರ ಜೊತೆಗೆ ವಯನಾಡು ಲೋಕಾಸಭಾ ಕ್ಷೇತ್ರದ ಚಣಾವಣೆ ಕೂಡ ನಡೆದಿತ್ತು. ಇದೀಗ ಇಂದೇ ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ ಇದರೊಂದಿಗೆ ಪ್ರಿಯಾಂಕ ವಾದ್ರಾ ಅವರ ಭವಿಷ್ಯ ಬಯಲಾಗಿದೆ.  

Written by - Zee Kannada News Desk | Last Updated : Nov 23, 2024, 01:01 PM IST
  • ವಯನಾಡ್‌ನಲ್ಲಿ ಪ್ರಿಯಾಂಕ ವಾದ್ರಾ ಭರ್ಜರಿ ಜಯಭೇರಿ..!
  • ಅಜ್ಜಿಯಂತೆ ಮೊಮ್ಮಗಳು ಹಿಡಿಯುತ್ತಾರಾ ದೇಶದ ಚುಕ್ಕಾಣಿ..?
  • ಪ್ರಿಯಾಂಕ ವಿಜಯ... ಕಾಂಗ್ರೆಸ್‌ನಲ್ಲಿ ಆಗುತ್ತಾ ಸಂಚಲನ..?
ದಾಖಲೆಗಳನ್ನು ಮುರಿದ ಪ್ರಿಯಾಂಕಾ ಗಾಂಧಿ.. ವಯನಾಡಿನಲ್ಲಿ ಇಂದಿರಮ್ಮನ ಮೊಮ್ಮಗಳಿಗೆ ಪಟ್ಟಾಭಿಷೇಕ!! title=

KERALA BYPOLLS 2024: ಕೇರಳ ರಾಜ್ಯದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಚಣಾವಣೆ ನಡೆದಿತ್ತು, ಇದರ ಜೊತೆಗೆ ವಯನಾಡು ಲೋಕಾಸಭಾ ಕ್ಷೇತ್ರದ ಚಣಾವಣೆ ಕೂಡ ನಡೆದಿತ್ತು. ಇದೀಗ ಇಂದೇ ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ ಇದರೊಂದಿಗೆ ಪ್ರಿಯಾಂಕ ವಾದ್ರಾ ಅವರ ಭವಿಷ್ಯ ಬಯಲಾಗಿದೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಿತ್ತು, ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಪ್ರಿಯಾಂಕ ವಾದ್ರಾ ನಿರೀಕ್ಷೆಗಿಂತಲೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಜಯ ಸಾಧಿಸಿದ್ದಾರೆ.

ವಯನಾಡಿನ ಚುಣಾವಣೆ ಫಲಿತಾಂಶಕ್ಕಾಗಿ ಎಲ್ಲರು ಕಾತುರದಿಂದ ಕಾಯುತ್ತಿದ್ದರು, ಇದೀಗ ಇಲ್ಲಿನ ಫಲಿತಾಂಶ ಹೊರಬಿದ್ದಿದೆ. ಈ ಮೂಲಕ ಪ್ರಿಯಾಂಕ ವಾದ್ರಾ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರಿಯಾಂಕ ವಾದ್ರಾ ಅವರು ವಯನಾಡು ಕ್ಷೇತ್ರದಲ್ಲಿ ಚುಣಾವಣೆಯನ್ನು ಎದುರಿಸಿದ್ದರು, ಇದೀಗ ಈ ಕ್ಷೇತ್ರದಲ್ಲಿ ಚುಣಾವಣೆಗೆ ನಿಲ್ಲುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪ್ರಿಯಾಂಕ ವಾದ್ರಾ ಅವರು ಜಯಭೇರಿ ಭಾರಿಸಿದ್ದಾರೆ. ಪ್ರಿಯಾಂಕ ಅವರು ಈ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎನ್ನು ನಂಬಿಕೆ ಹಲವರಲ್ಲಿತ್ತು, ಆದರೆ ಇದೀಗ ಪ್ರಿಯಾಂಕ ಅವರು ಭಾರಿ ಮೊತ್ತದಿಂದ ಗೆದ್ದು ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ನಿರೀಕ್ಷೆಗೂ ಮೀರಿದ ಮತಗಳ ಅಂತರದಲ್ಲಿ ಪ್ರಿಯಾಂಕ ವಾದ್ರ ವಯನಾಡ್‌ ಕ್ಷೇತ್ರದಲ್ಲಿ ಗೆದ್ದು ಬೀದಿದ್ದಾರೆ.

ಕಳೆದ ಬಾರಿ ರಾಹುಲ್ ಗಾಂಧಿ ವಯನಾಡಿನಿಂದ ಚುಣಾವಣೆಯಲ್ಲಿ ನಿಂತು ಗೆದ್ದಿದ್ದರು, ಆದರೆ ರಾಯಬರೇಲಿ ಕ್ಷೇತ್ರದಲ್ಲಿಯೂ ರಾಹುಲ್‌ ಗಾಂಧಿ ಗೆದ್ದಿದ್ದ ಕಾರಣ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಇದೇ ಕಾರಣದಿಂದ ಇದೀಗ ಕ್ಷೇತ್ರದ ಜನರು ಮತ್ತೊಂದು ಉಪಚುನಾವಣೆಯನ್ನು ಎದುರಿಸಿದ್ದರು. ಇದೀಗ ರಾಹುಲ್‌ ಗಾಂಧಿ ಅವರ ಸಹೋದರಿ ಪ್ರಿಯಾಂಕ ವಾದ್ರಾ ಈ ಕ್ಷೇತ್ರದಲ್ಲಿ ನಿಂತು ಗೆಲುವು ಸಾಧಿಸಿದ್ದಾರೆ. ಮತ್ತೊಮ್ಮೆ ರಾಹುಲ್‌ ಗಾಂಧಿ ಅವರ ಪಕ್ಷ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜನರು ಕಾಂಗ್ರೇಸ್‌ ಪಕ್ಷದ ಕಡೆಗೆ ಒಲವು ತೋರಿರುವುದು ಎದ್ದು ಕಾಣುತ್ತಿದೆ. 

ಪ್ರಿಯಾಂಕ ಗಾಂಧಿಯವರು ಬರೋಬ್ಬರಿ 541741 ಮತಗಳನ್ನು ಗಳಿಸಿದ್ದು, 357580  ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ, ಇದರಿಂದ ವಾಯನಾಡ್‌ನಲ್ಲಿ ಪ್ರಿಯಾಂಕ ವಾದ್ರಾ ಅವರು ಜಯ ಸಾಧಿಸುವುದು ಬಹುತೇಕ ಖಚಿತವಾಗಿದ್ದು, ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News