ಕಾಂಗ್ರೆಸ್ ಘೋಷಣೆಯ ಯೋಜನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂದು ಗುಡುಗಿದ ರಾಜಾಹುಲಿ BSY.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪುಬಹುದು..ಅಚ್ಚರಿ ಏನಿಲ್ಲ ಕೇಂದ್ರ ಸಂಸದೀಯ ಸಮಿತಿಯಲ್ಲಿ BSY ಇದ್ದಾರೆ.. ಮಾಹಿತಿ ಇರಬಹುದು ಟಿಕೆಟ್ ಕೈ ತಪ್ಪೋ ವಿಚಾರದಲ್ಲಿ ಸಚಿವ ಅಶೋಕ್ ಹೇಳಿಕೆ ಮೂರು ಸರ್ವೆಗಳ ಆಧಾರದ ಮೇಲೆ ಟಿಕೆಟ್ ಅಂತಿಮ
ಸೋಮಣ್ಣ ಕಾಂಗ್ರೆಸ್ಗೆ ಬಂದ್ರೆ ಮುಕ್ತವಾಗಿ ಸ್ವಾಗತ ವೀರಶೈವರಿಗೆ ಹೆಚ್ಚು ಟಿಕೆಟ್ ಪಕ್ಷ ನೀಡಲಿದೆ-ಶಾಮನೂರು ನಮ್ಮ ವಿರೋಧವಿಲ್ಲ..ಯಾರು ಬೇಕಾದ್ರು ಸೇರ್ಪಡೆಯಾಗಲಿ BSY ಮತದಾರರು ಯಾರೆಂದ್ರು ಜನ ನಿರ್ಧಾರ ಮಾಡಲಿದ್ದಾರೆ
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಹಲವಾರು ಟಿಕೆಟ್ ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ. . ಇದೇ ವೇಳೆ, ಮಂಗಳವಾರ ಹೇಳಿಕೆ ನೀಡಿರುವ ಮಾಜಿ ಸಿಂಎ ಬಿ ಎಸ್ ಯಡಿಯೂರಪ್ಪ, 'ನಾಲ್ಕರಿಂದ ಆರು ಬಿಜೆಪಿ ಶಾಸಕರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಕಳೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.
ತೋಳ್ಬಲ, ಮತ್ತು ಹಣ ಬಲದಿಂದ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಕನಸು ಕಾಣುತ್ತಿದೆ ಎಂದು ಕಲಬುರಗಿಯಲ್ಲಿ ಬಿಎಸ್ವೈ ಗುಡುಗಿದ್ದಾರೆ.. ಕಲಬುರಗಿಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿಗೆ ಜನರ ಬೆಂಬಲ ಇದೆ, ಈ ಉತ್ಸಹ ನೋಡಿದ್ರೆ ಕಾಂಗ್ರೆಸ್ಗೆ ಭಯ ಆಗುತ್ತೆ ಎಂದಿದ್ದಾರೆ..
ಕಾಂಗ್ರೆಸ್ನಲ್ಲಿರೋರು ಯೆಂಕಾ, ನಾಣಿ, ಸೀನ ಲೀಡರ್ಸ್.. ಸಿದ್ದರಾಮಯ್ಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಬಿಎಸ್ವೈ ವಾಗ್ದಾಳಿ ನಡೆಸಿದ್ದಾರೆ..
ಮೋದಿ ಸಾಯಲಿ.. ಸಾಯಲಿ ಎಂದು ಕಾಯುತ್ತಿದ್ದಾರೆ. ಮೋದಿ ಯಾವಾಗ ಸಾಯುತ್ತಾನೆ ಎಂದು ನೋಡುತ್ತಿದ್ದಾರೆ. ನಾನು ಬದುಕಿದ್ರೆ ಏನು ಮಾಡೋದಕ್ಕೆ ಆಗಲ್ಲ ಅಂತಿದ್ದಾರೆ. ಆದ್ರೆ ಮೋದಿ ಇರೋವರೆಗೂ ಕಾಂಗ್ರೆಸ್ ಬೇಳೆ ಬೇಯಲ್ಲ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ರು.
ಇಂದು ರಾಜ್ಯದಲ್ಲಿ ನಮೋ ಕಹಳೆ ಮೊಳಗಲಿದೆ.. ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಬೆಳಗಾವಿ, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಮತ ʻಶಿಕಾರಿʼ ನಡೆಸಲಿದ್ದಾರೆ.. ಶಿವಮೊಗ್ಗದಲ್ಲಿ ಇಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ..
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನದಂದೇ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಮಾನ ನಿಲ್ದಾಣ ಉದ್ಘಾಟನೆ ಜೊತೆಗೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಮೋದಿ ಕಾರ್ಯಕ್ರಮದ ಅಂಗವಾಗಿ ಒಂದು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ನವ ವಧುವಿನಂತೆ ಸಿಂಗಾರಗೊಂಡಿರುವ ಶಿವಮೊಗ್ಗದಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ವಿಧಾಸಭೆಯಲ್ಲಿ ವಿರೋಧ ಪಕ್ಷಗಳಿಗೆ ಯಡಿಯೂರಪ್ಪ ಸವಾಲು ಹಾಕಿದ್ರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಅಂತ ಸದನದಲ್ಲಿ ಗುಡುಗಿದ್ರು. ಇನ್ಮುಂದೆ ಚುನಾವಣೆಗೆ ನಿಲ್ಲಲ್ಲ ಅಂತ ಬಿಎಸ್ವೈ ಘೋಷಣೆ ಮಾಡಿದ್ರು.
ಕಾಂಗ್ರೆಸ್ ಕುರಿತು ಶಾಸಕ ಸಿ.ಟಿ.ರವಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಯಾವ ಪಕ್ಷದವರು ಯಾವ ಸಂಸ್ಕೃತಿ ಎಂದು ಜನರಿಗೆ ತಿಳಿದಿದೆ.ರಾಜ್ಯ ಭಾಜಪ ಪಕ್ಷದ್ದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಸಶಕ್ತ, ಸಮೃದ್ಧವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾ ನಂತರ 75 ವರ್ಷಗಳ ನಂತರ ಅವಕಾಶ ದೊರಕಿದೆ ಎಂದರು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಹಲವಾರು ಯೋಜನೆಗಳ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಪ್ಲಾನ್ ಮಾಡಿದೆ. ಅದೇ ರೀತಿ ಶಿವಮೊಗ್ಗದ ಹೊಸ ಏರ್ಪೋರ್ಟ್ ಕಾಮಗಾರಿ ಭರದಿಂದ ಸಾಗಿದೆ. ಇದೇ ಫೆಬ್ರವರಿ 27 ರಂದು ಖುದ್ದು ಪ್ರಧಾನಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಅವರ ಹೆಸರಿಡಲು ಸರ್ಕಾರ ಪಸ್ತಾವನೆ ಸಲ್ಲಿಸಲಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ...
ನಮ್ಮ ಯಾತ್ರೆಯನ್ನ BSY ಪಂಚರ್ ಆಯ್ತು ಅಂತ ಹೇಳಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಯಾರದಾಗುತ್ತೋ ಗೊತ್ತಾಗುತ್ತೆ ಎಂದು ಯಡಿಯೂರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.