ಇಂದು ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಅಬ್ಬರ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನದಂದೇ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಮಾನ ನಿಲ್ದಾಣ ಉದ್ಘಾಟನೆ  ಜೊತೆಗೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಮೋದಿ ಕಾರ್ಯಕ್ರಮದ ಅಂಗವಾಗಿ  ಒಂದು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ನವ ವಧುವಿನಂತೆ ಸಿಂಗಾರಗೊಂಡಿರುವ ಶಿವಮೊಗ್ಗದಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

Written by - Yashaswini V | Last Updated : Feb 27, 2023, 08:20 AM IST
  • ಬಿಎಸ್ವೈ ಹುಟ್ಟುಹಬ್ಬದಂದೇ ಶಿವಮೊಗ್ಗದಲ್ಲಿ ಮೋದಿ ಶಕ್ತಿಪ್ರದರ್ಶನ
  • ಪ್ರಧಾನಿ ಮೋದಿಯಿಂದ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ
  • ವಿಮಾನ ನಿಲ್ದಾಣ ಜೊತೆಗೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ
ಇಂದು ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಅಬ್ಬರ title=
Modi In Karnataka

ಬೆಂಗಳೂರು:  ಚುನಾವಣೆ ಹೊಸ್ತಿಲಲ್ಲಿ ಇಂದು ರಾಜ್ಯಕ್ಕೆ ಮತ್ತೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದೇ ದಿನ ಎರಡು ಜಿಲ್ಲೆಗಳಲ್ಲಿ ರೋಡ್ ಶೋ ಮೂಲಕ ಶಕ್ತಿಪ್ರದರ್ಶನ ಮಾಡಲಿದ್ದಾರೆ.  ಇಂದು ಕರುನಾಡಿನಲ್ಲಿ ಸಾಲು ಸಾಲು ಕಾರ್ಯಕ್ರಮ.. ಸಮಾವೇಶಗಳ ಮೂಲಕ ನಮೋ ಮತತಂತ್ರ ಹೂಡಿದ್ದಾರೆ. ಇಂದು ಬೆಳಗಾವಿಯಿಂದ ಮಲೆನಾಡು ಶಿವಮೊಗ್ಗದಲ್ಲಿ ಮೋದಿ ಹವಾ ಜೋರಾಗಿರಲಿದೆ.

ಕುಂದಾನಗರಿಯಲ್ಲಿ 10 ಕಿ.ಮೀ ಭರ್ಜರಿ ರೋಡ್​ ಶೋ ಮೂಲಕ ಬೆಳಗಾವಿಯಲ್ಲಿ ಟಾರ್ಗೆಟ್​ ಕರ್ನಾಟಕ ಅನ್ನೋ ತಂತ್ರ ರೂಪಿಸುತ್ತಿದ್ದಾರೆ. ಬೆಳಗಾವಿಗೆ ಇಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್ ಪೆಂಡಾಲ್ ನಿರ್ಮಾಣವಾಗಿದ್ದು, ಎರಡು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 50 ಎಕರೆ ಪ್ರದೇಶದಲ್ಲಿ 3 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪಾರ್ಕಿಂಗ್ ಸ್ಥಳದಲ್ಲೇ ಆಗಮಿಸುವ ಜನರಿಗಾಗಿ ಊಟದ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ. ಇದಲ್ಲದೆ, ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ,  ವಿವಿಧ ಕಾಮಗಾರಿಗಳನ್ನೂ ಕೂಡ ಲೋಕಾರ್ಪಣೆ ಮಾಡಲಿದ್ದಾರೆ.

ಬಿಎಸ್ವೈ ಹುಟ್ಟುಹಬ್ಬದಂದೇ ಶಿವಮೊಗ್ಗದಲ್ಲಿ ಮೋದಿ ಶಕ್ತಿ ಪ್ರದರ್ಶನ: 
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನದಂದೇ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಮಾನ ನಿಲ್ದಾಣ ಉದ್ಘಾಟನೆ  ಜೊತೆಗೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಮೋದಿ ಕಾರ್ಯಕ್ರಮದ ಅಂಗವಾಗಿ  ಒಂದು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ನವ ವಧುವಿನಂತೆ ಸಿಂಗಾರಗೊಂಡಿರುವ ಶಿವಮೊಗ್ಗದಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರದ ಎಲ್ಲಾ ಕಡೆ ಸಿಸಿ ಕ್ಯಾಮೆಗಳನ್ನು ಅಳವಡಿಸಿ ಹದ್ದಿನಕಣ್ಣಿಡಲಾಗಿದೆ. 

ಇದನ್ನೂ ಓದಿ- ಹಾಸನ ಕ್ಷೇತ್ರದ ಟಿಕೆಟ್ ಕುರಿತು ದೇವೇಗೌಡರೇ ನಿರ್ಧಾರ ತೆಗೆದುಕೊಳ್ಳುತ್ತಾರೆ

ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳು:
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು, ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ರೂ.449.22 ಕೋಟಿ ವೆಚ್ಚದಲ್ಲಿ  ಎಟಿಆರ್ 72 ರಿಂದ ಏರ್‍ಬಸ್ 320 ರವರೆಗೆ ಎಲ್ಲ ರೀತಿಯ ವಿಮಾನಗಳು ಹಗಲು-ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ  3.2 ಕಿ.ಮೀ ರನ್‍ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್, ಏರ್ ಟ್ರಾಫಿಕಿಂಗ್ ಸೆಂಟರ್ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಇದಲ್ಲದೆ, ಒಟ್ಟು ರೂ.896.16 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ, ಶಿಮುಲ್ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ ರೂ.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೂ.2 ಲಕ್ಷ ಲೀಟರ್ ಸಾಮರ್ಥ್ಯಡ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ ಕಟ್ಟಡ ಉದ್ಘಾಟನ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ ರೂ.8 ಕೋಟಿ ವೆಚ್ಚಲ್ಲಿ ನಿರ್ಮಿಸಿರುವ ಮ್ಯಾಮ್‍ಕೋಸ್‍ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ- 3673 ಪೌರಕಾರ್ಮಿಕರ ನೇರ ನೇಮಕಾತಿ ಅವ್ಯವಹಾರ ಆರೋಪ: ಬಿಬಿಎಂಪಿ ಸ್ಪಷ್ಟೀಕರಣ

ಈ ಯೋಜನೆಗಳಿಗೆ ಶಂಕುಸ್ಥಾಪನೆ:
ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೂ.995 ಕೋಟಿ ವೆಚ್ಚದಲ್ಲಿ 103 ಕಿ.ಮೀ ಉದ್ದದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.  
>> ಇದಲ್ಲದೆ, ರೂ.97.18 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ರೂ.862 ಕೋಟಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಮತ್ತು ರೂ.91.50 ಕೋಟಿ ಮೊತ್ತದ ಕಾಮಗಾರಿ ಲೋಕಾರ್ಪಣೆ.
>> ರೂ.66.44 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್ ನಿರ್ಮಾಣ
>> ರೂ.96.20 ಕೋಟಿ ವೆಚ್ಚದಲ್ಲಿ ರಾ.ಹೆ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ. 
>> ರೂ.56.56 ಕೋಟಿ ವೆಚ್ಚದಲ್ಲಿ ರಾ.ಹೆ 169 ಶಿವಮೊಗ್ಗ-ಮಂಗಳೂರು ರಸ್ತೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ದಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News