Balakot Air Strike : 26 ಫೆಬ್ರವರಿ 2019 ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುವ ಮೂಲಕ ಭಯೋತ್ಪಾದಕರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಪಾಕ್ ನೆಲದಲ್ಲೇ ಉಗ್ರರನ್ನು ಸದೆಬಡೆದಿದ್ದರು.
ಅಕ್ಟೋಬರ್ 8ರಂದು ವಾಯುಪಡೆ ದಿನ ಆಚರಣೆ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಪ್ರಮೋಶನಲ್ ಫಿಲಂ ಸಿದ್ಧಪಡಿಸಲಾಗಿದೆ. ಇದರಲ್ಲಿ ಫೆಬ್ರವರಿ 26ರ ಬಾಲಕೋಟ್ ವಾಯುದಾಳಿಯ ಆಯ್ದ ಭಾಗಗಳನ್ನು ತೋರಿಸಲಾಗಿದ್ದು, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಬೇಕೆನ್ನುವ ಒತ್ತಾಸೆ ಹಿನ್ನಲೆಯಲ್ಲಿ ಬಾಲಾಕೋಟದಲ್ಲಿರುವ ಜೈಶ್-ಎ-ಮೊಹಮ್ಮದ್ ಶಿಬಿರದ ಮೇಲೆ ವಾಯುಸೇನಾ ದಾಳಿ ಕೈಗೊಳ್ಳಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
"ಈ ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ಸಂಪೂರ್ಣ ಚುನಾವಣಾ ಉದ್ದೇಶಕ್ಕಾಗಿ ಮಾತ್ರ ಕೈಗೊಳ್ಳಲಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಮಾನವನ್ನು ನಾವು ಕಳೆದುಕೊಂಡಿದ್ದೇವೆ. ಅದೃಷ್ಟವಶಾತ್ ಪೈಲೆಟ್ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಉಳಿದು ಗೌರವ ಪೂರಕವಾಗಿ ಪಾಕ್ ನಿಂದ ಮರಳಿದ್ದಾನೆ" ಎಂದು ಫಾರುಕ್ ಅಬ್ದುಲ್ಲಾ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.